ಕೊರಟಗೆರೆ: ಚುನಾವಣೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ತೆರೆಯಲು ಸ್ಥಳ ಪರಿಶೀಲನೆ ನಡೆಸಿದ ತಹಶಿಲ್ದಾರ್ ಮುನಿಶಾಮಿರೆಡ್ಡಿ.
ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೊಲೀಸ್ ಕಣ್ಗಾವಲು ನೀಡಲು ಚೆಕ್ ಪೋಸ್ಟ್ ಗಳಿಗೆ ಸ್ಥಳ ಗುರುತಿಸಿದರು.
ಕ್ಷೇತ್ರದಲ್ಲಿ ಒಟ್ಟು 5 ಪ್ರಮುಖ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಿದ್ದು, ಹನುಮಂತಗಿರಿ, ತೋವಿನಕೆರೆ, ಪೊಲೇನಹಳ್ಳಿ, ಕೋಳಾಲ ಕ್ರಾಸ್ ಬಳಿ ಕಾಟೇನಹಳ್ಳಿ, ಬೈರೇನಹಳ್ಳಿ ಕ್ರಾಸ್ ಗಳಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಭದ್ರತೆಯನ್ನು ನೀಡಲು ಚೆಕ್ ಪೋಸ್ಟ್ ಗೆ ಸೂಕ್ತ ಸ್ಥಳಪರಿಶೀಲನೆ ನಡೆಸಿದರು.
ಚುನಾವಣೆ ಆಯೋಗದ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸಿ ಚುನಾವಣೆ ಕಾರ್ಯ ಯಶಸ್ವಿಯಾಗುವಂತೆ ನೋಡಿಕೊಳ್ಳಲು ಎಲ್ಲ ಕ್ರಮ ಜರುಗಿಸಲಾಗುತ್ತಿದೆ. ಶಾಂತಿಯುತ, ಸೌಹಾರ್ದಯುತವಾಗಿ ಚುನಾವಣೆ ನಡೆಸುವ ಈಗಾಗಲೆ ಇಲಾಖೆಗಳ ಹಂತದಲ್ಲಿ ಸಭೆ ನಡೆಸಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ನೀಡಲು ಚೆಕ್ ಪೋಸ್ಟ್ ಗಳಿಗೆ ಸ್ಥಳಪರಿಶೀಲನೆ ಮಾಡುತಿದ್ದೇವೆ.
– ಮುನಿಶಾಮಿರೆಡ್ಡಿ. ತಹಶಿಲ್ದಾರ್ ಕೊರಟಗೆರೆ.
ಇದೇ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಹಾಲಸಿದ್ದಪ್ಪ ಪೂಜೇರಿ ಹಾಗೂ ಕೊರಟಗೆರೆ ಪೊಲೀಸ್ ವೃತ್ತ ನಿರೀಕ್ಷಕ ಕೆ. ಸುರೇಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.
ಇದನ್ನೂ ಓದಿ: ಅತೀ ಕಿರಿಯ ವಯಸ್ಸಿನಲ್ಲಿ ಪುಸ್ತಕ ಬರೆದು ವಿಶ್ವ ದಾಖಲೆ ನಿರ್ಮಿಸಿದ 4ರ ಪೋರ