Advertisement

Koratagere: ನಿಲ್ದಾಣದಲ್ಲೇ ಕೆಎಸ್‌ಆರ್‌ಟಿಸಿ ಬಸ್‌ಗಳ ಮುಖಾಮುಖಿ: 12 ಮಂದಿಗೆ ಗಾಯ

06:58 PM Mar 14, 2024 | Team Udayavani |

ಕೊರಟಗೆರೆ: ಇಲ್ಲಿನ ನಿಲ್ದಾಣದಲ್ಲೇ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 12 ಮಂದಿಗೆ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

Advertisement

ಗೌರಿಬಿದನೂರಿನಿಂದ ತುಮಕೂರಿಗೆ ಹೋಗಲು ಕೊರಟಗೆರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಪಾವಗಡಕ್ಕೆ ಹೋಗುತ್ತಿದ್ದಂತಹ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ತಿರುವಿನಲ್ಲಿ ಮಹಿಳೆಯರಿಬ್ಬರ ಅವಾಂತರದಿಂದ ನಿಯಂತ್ರಣ ತಪ್ಪಿ ಮುಖಾಮುಖಿ ಢಿಕ್ಕಿಯಾಗಿದೆ.

ಬೆಂಗಳೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಮಹಿಳೆಯರಿಬ್ಬರು ಬಸ್‌ನ ಬಾನೆಟ್ ಮೇಲೆ ಮಲಗಿದ್ದ ಮಹಿಳೆಯರನ್ನು ಎಚ್ಚರಿಸುವ ವೇಳೆ ಚಾಲಕನು ನಿಯಂತ್ರಣ ತಪ್ಪಿ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಗೌರಿಬಿದನೂರಿನಿಂದ ತುಮಕೂರಿಗೆ ಹೊರಡಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗೆ ಢಿಕ್ಕಿ ಹೊಡೆದಿದ್ದು ಸುಮಾರು 12 ಮಂದಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು, ಮೂರು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಬೆಂಗಳೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದ ಬಸ್‌ನ ಬಾನೆಟ್ ಮೇಲೆ ಮಹಿಳೆಯರಿಬ್ಬರು ಮಲಗಿಕೊಂಡಿದ್ದ ವೇಳೆ ಚಾಲನೆಗೆ ತೊಂದರೆಯಾಗುತ್ತದೆ ಹಿಂದೆ ಹೋಗಿ ಎಂದು ಹೇಳುವ ಸಂದರ್ಭದಲ್ಲಿ ನಿಂತಿದ್ದ ಬಸ್‌ಗೆ ಢಿಕ್ಕಿಯಾಗಿದೆ, ಕೂಡಲೇ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಚಾಲಕ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ.

ಧ್ವನಿವರ್ಧಕದ ಸಮಸ್ಯೆ
ಕೊರಟಗೆರೆ ಬಸ್ ನಿಲ್ದಾಣಕ್ಕೆ ಪ್ರತಿದಿನ ನೂರಾರು ಬಸ್‌ಗಳು ಬರುತ್ತವೆ. ಆದರೆ ಬಸ್‌ಗಳು ಬರುವ ಸಂದರ್ಭದಲ್ಲಿ ನಿಧಾನವಾಗಿ ಚಲಿಸಿ ಬಸ್‌ನಲ್ಲಿ ಪ್ರಯಾಣಿಕರಿದ್ದಾರೆ ಎಂದು ಧ್ವನಿವರ್ಧಕದ ಮೂಲಕ ತಿಳಿಸುವುದು ಸಂಚಾರ ನಿಯಂತ್ರಣ ಅಧಿಕಾರಿಯ ಕರ್ತವ್ಯ ಆದರೆ ಧ್ವನಿವರ್ಧಕದ ಮೂಲಕ ತಿಳಿಸದ ಕಾರಣ ಅಧಿಕಾರಿಯ ನಿರ್ಲಕ್ಷ್ಯದಿಂದ ಈ ಘಟನೆ ಜರುಗಿದೆ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.

Advertisement

ಬಸ್‌ಗಳ ಅತಿವೇಗದ ಚಾಲನೆ, ಓವರ್‌ಟೇಕ್, ಇವೆಲ್ಲವನ್ನ ನಿಲ್ಲಿಸಿ ಚಾಲಕರು ನಿಧಾನವಾಗಿ ಚಲಿಸಬೇಕು. ಚಾಲಕನನ್ನೆ ನಂಬಿ ಪ್ರಯಾಣಿಕರು ತಮ್ಮ ಊರುಗಳಿಗೆ ತಲುಪಲು ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಆದರೆ ಇವರ ಅಜಾಗಾರುಕತೆಯಿಂದ ಕ್ಷಣಾರ್ಧ ನಿಮಿಷದಲ್ಲಿ ನೂರಾರು ಪ್ರಯಾಣಿಕರ ಪ್ರಾಣವೇ ಹಾರಿಹೋಗುತ್ತದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಚಾಲಕರಿಗೆ ಹಾಗೂ ನಿರ್ವಾಹಕರಿಗೆ, ಸಂಚಾರ ನಿಯಂತ್ರಣ ಅಧಿಕಾರಿಗೆ ಸರಿಯಾದ ಮಾರ್ಗದರ್ಶನ ತಿಳಿಸಬೇಕು ಎಂದು ಪಾವಗಡದ ರತ್ನಮ್ಮ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next