Advertisement
ಗ್ರಾಮದ ದಾಸಪ್ಪನ ಪತ್ನಿ ಗಿರಿಯಮ್ಮ(65)ರ ಮೇಲೆ ದ್ವಿಚಕ್ರ ವಾಹನ ಹರಿದು ಎರಡು ಕಾಲುಗಳು ಮುರಿದು ಕೊರಟಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
Advertisement
ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತ ತಡೆಯಲು ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಬೇಕಿದೆ. 100ಕೀಮೀ ವೇಗವಾಗಿ ಬರುವ ವಾಹನಗಳಿಂದ ಪದೇ ಪದೇ ಅಪಘಾತ ಆಗುತ್ತಿವೆ. ದಯವಿಟ್ಟು ಅಪಘಾತ ತಡೆದು ಜನರ ಜೀವ ಉಳಿಸಬೇಕಿದೆ ಎಂದು ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.
ಗಂಟೆ ಗಟ್ಟಲೇ ಸಾಲಾಗಿ ನಿಂತ ವಾಹನಗಳು
ಅಪಘಾತ ಆದ ಸ್ಥಳದಲ್ಲೇ ಸ್ಥಳೀಯರು ವಾಹನ ತಡೆದ ಪರಿಣಾಮ ಕೀಮೀ ಉದ್ದಕ್ಕೂ ವಾಹನಗಳು ನಿಂತಿವೆ. ನಂತರ ಪೊಲೀಸರ ಮಧ್ಯ ಪ್ರವೇಶದಿಂದ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.