ಕೊರಟಗೆರೆ: ವರ್ಗಾವಣೆಗೊಂಡ ತಹಶೀಲ್ದಾರ್ ಮುನಿಶಾಮಿ ರೆಡ್ಡಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀಳ್ಕೊಡುಗೆ ನೀಡಿ ಪ್ರಮಾಣಿಕ ಸೇವೆಗೆ ಇನ್ನಷ್ಟು ಹೆಚ್ಚಿನ ಹುದ್ದೆ ಸಿಗಲೆಂದು ಶುಭಹಾರೈಸಿದರು.
ತಹಶೀಲ್ದಾರ್ ಮುನಿಶಾಮಿ ರೆಡ್ಡಿಯವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಮಾತನಾಡಿ, ಕೇವಲ 9 ತಿಂಗಳಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದು, 25 ವರ್ಷದ ನನ್ನ ಪತ್ರಿಕಾ ವೃತ್ತಿ ಜೀವನದಲ್ಲಿ ಇಂತಹ ಪ್ರಮಾಣಿಕ ತಹಶೀಲ್ದಾರ್‌ರವರನ್ನು ಕಂಡಿದ್ದು ಇದೇ ಮೊದಲು ಎಂದು ಹೇಳಿದರು.
ಸುಮಾರು ವರ್ಷಗಳಿಂದ ಬಗೆಹರಿಯದಂತಹ ಸಮಸ್ಯೆಯನ್ನು ಕೆಲವು ತಿಂಗಳಲ್ಲಿ ಸಾಕಷ್ಟು ಬಡಕುಟುಂಬಗಳ ಸಮಸ್ಯೆಯನ್ನು ಬಗೆಹರಿಸಿ ನ್ಯಾಯ ಒದಗಸಿಕೊಟ್ಟು ಜನತೆಯ ಪ್ರಶಂಸೆಗೆ ಕಾರಣರಾಗಿದ್ದು, ಇಂತಹ ಪ್ರಾಮಾಣಿಕ ಅಧಿಕಾರಿಗೆ ಇನ್ನಷ್ಟು ಹೆಚ್ಚಿನ ಹುದ್ದೆ ಸಿಗಲಿ ಎಂಬುದೇ ನಮ್ಮ ಆಶಯ ಎಂದರು.
ಗೌರವ ಸ್ವೀಕರಿಸಿ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮಾತನಾಡಿ, ನಾನು ಈ ತಾಲೂಕಿಗೆ ಬರುವ ಮೊದಲೇ ಈ ತಾಲೂಕಿನ ಬಗ್ಗೆ ತಿಳಿದುಕೊಂಡಿದೆ, ಆದ್ದರಿಂದ ಪ್ರಮಾಣಿಕ ನಿಷ್ಠೆ ಹೆಚ್ಚಿನದಾಗಿ ಕೊರಟಗೆರೆ ಜನತೆಯ ಸಹಕಾರದಿಂದ ಸೇವೆ ಸಲ್ಲಿಸಲು ಸಾಧ್ಯವಾಯಿತು, ಅಧಿಕಾರಿಗಳಾದ ನಮಗೆ ವರ್ಗಾವಣೆ ಸಹಜ ಆದರೆ ಇದ್ದಂತಹ ದಿನದಲ್ಲಿ ಒಂದಿಷ್ಟು ಒಳ್ಳೆಯ ಕೆಲಸ ಮಾಡುವುದಷ್ಟೇ ನನ್ನ ಗುರಿ ಎಂದು ಹೇಳಿದರು.
ಅನೇಕ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದೆ ಆದರೆ ಇಲ್ಲಿನ ಪತ್ರಕರ್ತರ ವಿಶ್ವಾಸ ನನಗೆ ಎಲ್ಲಿಯೂ ಸಿಕ್ಕಿರಲಿಲ್ಲ, ಈ ಪ್ರೀತಿ ವಿಶ್ವಾಸಕ್ಕೆ ಅಭಾರಿಯಾಗಿದ್ದು ನಮ್ಮ ನಿಮ್ಮ ವಿಶ್ವಾಸ ಸದಾ ಕಾಲ ಚಿರಸ್ಥಾಯಿಯಾಗಿರಲಿ ಎಂದರು.
ಈ ವೇಳೆ ಜಿಲ್ಲಾ ಪರ್ತಕರ್ತರ ಸಂಘದ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕ ಎನ್.ಮೂರ್ತಿ, ಉಪಾಧ್ಯಕ್ಷ ನಾಗರಾಜು, ಹಿರಿಯ ಪತ್ರಕರ್ತ ಎನ್.ಪದ್ಮನಾಭ, ಚಿದಂಬರಂ, ರಾಘವೇಂದ್ರ ಡಿ.ಎಂ, ಹರೀಶ್ ಬಾಬು, ಲೋಕೇಶ್, ನವೀನ್‌ಕುಮಾರ್, ರಾಜು, ನರಸಿಂಹಮೂರ್ತಿ, ಮಂಜುಸ್ವಾಮಿ, ದೇವರಾಜು, ವಿಜಯ್‌ಶಂಕರ್, ಸತೀಶ್, ಮುತ್ತುರಾಜು, ಅರುಣ್ ಕುಮಾರ್ ಸತೀಶ್ ಸೇರಿದಂತೆ ಕಂದಾಯ ಇಲಾಖೆಯ ಸಿಬಂದಿಗಳು ಹಾಜರಿದ್ದರು.