ಕೊರಟಗೆರೆ : ಕಳ್ಳನೋರ್ವ ದ್ವಿಚಕ್ರವಾಹನವನ್ನು ಕದ್ದು ಪರಾರಿಯಾಗುವ ಬರದಲ್ಲಿ ಸೇತುವೆ ಮೇಲೆ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೆ ದಾಟಲು ಹೋಗಿ ಬೈಕ್ ಸಮೇತ ಕೊಚ್ಚಿ ಹೋಗಿ ನೂರಾರು ಮೀಟರ್ ದೂರದಲ್ಲಿ ದಡ ಸೇರಿ ಜೀವ ಉಳಿಸಿಕೊಂಡು ಪರಾರಿಯಾಗಿರುವ ಘಟನೆ ಶನಿವಾರ ಸಂಜೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಗುಂಡನ ಪಾಳ್ಯ ಸೇತುವೆ ಬಳಿ ಈ ದುರ್ಘಟನೆ ನಡೆದಿದ್ದು, ಕಳ್ಳನೋರ್ವ ಬೈಕ್ ಕದ್ದು ತಪ್ಪಿಸಿಕೊಂಡು ಪರಾರಿಯಾಗುವ ಬರದಲ್ಲಿ ಬೈಕ್ ಸಹಿತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಆದರೆ ಆತನ ಅದೃಷ್ಟ ಚೆನ್ನಾಗಿತ್ತು ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಕಳ್ಳ ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾನೆ.
ಶನಿವಾರ ಸಂಜೆ ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯ ನವೀನ್ ಕಂಫರ್ಟ್ ಬಳಿ ನಿಲ್ಲಿಸಲಾದ ಬೈಕನ್ನು ಕಳ್ಳ ಕದ್ದಿದ್ದಾನೆ, ಈ ವೇಳೆ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಗುಂಡನಪಾಳ್ಯ ಸೇತುವೆಯ ಮೇಲೆ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೆ ಸೇತುವೆ ದಾಟಲು ಹೋಗಿ ನೀರಿನಲ್ಲಿ ಮುಳುಗಿ ಕಣ್ಮರೆಯಾದರೆ, ಕಳ್ಳ ನೂರಾರು ಮೀಟರ್ ನೀರಿನಲ್ಲಿ ಕೊಚ್ಚಿ ಹೋಗಿ ಈಜಿ ಹುಲಿಕುಂಟೆ ಬಳಿಯ ಮಸೀದಿಯ ಬಳಿ ದಡ ಸೇರಿ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ : ಮಾರ್ಕೋನಹಳ್ಳಿ ಜಲಾಶಯಕ್ಕೆ ಒಳಹರಿವು ಹೆಚ್ಚಳ : ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ
ನೀರಿನಲ್ಲಿ ಕೊಚ್ಚಿ ಹೋಗುತ್ತಿರುವಂತಹ ದೃಶ್ಯವನ್ನು ಕೆಲವರು ಯುವಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಹಾಗೂ ಕಳ್ಳ ನೀರಿನಲ್ಲಿ ಕೊಚ್ಚಿಕೊಂಡು ದಡ ಸೇರಲು ಹರಸಾಹಸ ಪಡುತ್ತಿದ್ದು ಹಾಗೂ ಯಾವುದೋ ಗಿಡ ಬಳ್ಳಿ ಹಿಡಿದು ದಡ ಸೇರಿ ಜೀವ ಉಳಿಸಿಕೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆಯ ವಿಚಾರ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ದ್ವಿಚಕ್ರ ವಾಹನವನ್ನು ಹಾಗೂ ಕೊಚ್ಚಿ ಹೋದ ಯುವಕನನ್ನು ಹುಡುಕಿದರೂ ಕಳ್ಳ ಈಜಿ ದಡ ಸೇರಿರುವ ವಿಚಾರ ತಿಳಿಯದೆ ಬಹು ಕಾಲ ಅಗ್ನಿಶಾಮಕ ದಳದವರು ಶ್ರಮವಹಿಸಿದ್ದರು ಎನ್ನಲಾಗಿದೆ.