Advertisement
ತಾಲ್ಲೂಕಿನ ಬೈಚಾಪುರ ಗ್ರಾಮದ ಬೈಚಾಪುರ ಕ್ರಾಸ್ ನ ವೆಂಕಟಶಾಮಯ್ಯ ಅವರ ಮಗ ನಾಗರಾಜಪ್ಪ ಎಂಬುವರ ಮನೆಯಲ್ಲಿ ಬೀಗ ಮುರಿದ ಕಳ್ಳರು ಕಳ್ಳತನ ನಡೆಸಿದ್ದಾರೆ.
Related Articles
Advertisement
ಕುರಿ ಶೆಡ್ ಮಾಡಲು ಕೂಡಿಟ್ಟ ಹಣ :ನಾಗರಾಜಪ್ಪ ಅವರ ಮಗ ಬೆಂಗಳೂರಿನಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಊರಿನಲ್ಲಿ ಕುರಿ ಶೆಡ್ ಮಾಡಲೆಂದು ಒಂದೊಂದು ರೂಪಾಯಿ ಸೇರಿಸಿ 80 ಸಾವಿರ ಸಂಗ್ರಹಿಸಿ ಇಟ್ಟಿದ್ದರು ಆದರೆ ಅದು ಕಳ್ಳರ ಪಾಲಾಗಿದೆ, ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಮನೆಯಲ್ಲಿದ್ದ ಎರಡು ಬೆಳ್ಳಿ ದೀಪ ಕಂಬ, ಎರಡು ಬೆಳ್ಳಿ ಬಟ್ಟಲು ಒಂದು ಬೆಳ್ಳಿತಟ್ಟೆಯನ್ನು ಕಳ್ಳರು ಬಿಟ್ಟು ಹೋಗಿದ್ದು ಕೇವಲ ಹಣವನ್ನಷ್ಟೇ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.