ನವರಾತ್ರಿಹಬ್ಬದ ಪ್ರಯುಕ್ತ ಪ್ರತಿವರ್ಷ ಪಾಡ್ಯ ದಿನದಿಂದಲೇ ಗೊಂಬೆಗಳನ್ನು ಜೋಡಿಸಿ ಪೂಜಿಸುತ್ತಾ ಬರುವುದು ಸಂಪ್ರದಾಯ. 150ವರ್ಷದ ಹಿಂದೆಯ ಇತಿಹಾಸವಿರುವ ಕಥೆಗಳು, ಮಹಾಭಾರತ ಮತ್ತು ರಾಮಾಯಣದ ಗೊಂಬೆಗಳೇ ಮಕ್ಕಳ ಕಣ್ಮನ ಸೆಳೆಯಲಿದೆ. ಪ್ರತಿನಿತ್ಯವು ವಿಶೇಷಪೂಜೆ ಮತ್ತು ಭಜನೆ ಕಾರ್ಯಕ್ರಮ ಸೇರಿದಂತೆ ಮಕ್ಕಳಿಗೆ ದಿನಕ್ಕೊಂದು ಸಿಹಿತಿಂಡಿ ನೀಡುವುದು ಸಹ ವಾಡಿಕೆಯಾಗಿದೆ.
Advertisement
50ಬಗೆಯ ಗೊಂಬೆಗಳ ವೈಶಿಷ್ಟತೆ..ದಸರಾ ಹಬ್ಬದ ಪ್ರಾರಂಭದ ದಿನವೇ ಮನೆಯಲ್ಲಿ ಕೂರಿಸುವ ಒಂದೊಂದು ಬೊಂಬೆಗಳು ಒಂದೊಂದು ರೀತಿಯ ವಿಶೇಷ ಇತಿಹಾಸದ ಕಥೆಗಳನ್ನು ಹೇಳುತ್ತವೆ. ನಮ್ಮ ಸಂಸ್ಕೃತಿ , ಧಾರ್ಮಿಕ ಪರಂಪರೆ, ಸಾಹಿತ್ಯ ಆಚರಣೆ, ವೈಚಾರಿಕತೆ, ವಿಜ್ಞಾನ, ಪೌರಾಣಿಕ ಕಥೆ, ಕೃಷಿ, ಚಂದ್ರಯಾನ-3, ಸನಾತನ ಧರ್ಮ ಹೀಗೆ ವಿಷಯ ಮತ್ತು ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಗೊಂಬೆಗಳನ್ನು ಸಿದ್ದತೆ ಮಾಡಲಾಗಿದೆ. ಅಲ್ಲದೇ ನಮ್ಮ ನಾಡಿನ ಸಂಸ್ಕೃತಿ ಮತ್ತು ಐತಿಹಾಸಿದ ಇತಿಹಾಸ ಸಾರುವ ಗೊಂಬೆಗಳಿಗೆ ಪ್ರಮುಖ ಸ್ಥಾನ ನೀಡಲಾಗಿದೆ.
ನವರಾತ್ರಿಯು ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಹಬ್ಬ. ಮಹಿಳೆಯರು 9ದಿನವು 9ರೀತಿಯ ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮಿಸುವ ವಿಶೇಷ ಹಬ್ಬ. ಪ್ರತಿದಿನ ಬನ್ನಿ ಮರ ಸೇರಿದಂತೆ ನಾನಾ ದೇವಾಸ್ಥಾನಗಳಿಗೆ ಬೆಳಗಿನ ಜಾವವೇ ತೆರಳಿ ಪೂಜೆ ಮಾಡುವುದೇ ವಿಶೇಷ. ಮನೆಗಳಲ್ಲಿ ಗೊಂಬೆಕೂರಿಸಿ ಸಿಂಗಾರ ಮಾಡಿ ಹಬ್ಬದ ಸಂಭ್ರಮ ಹೆಚ್ಚಿಸುತ್ತಾರೆ. ಗೃಹಿಣಿಯರು ತವರಿನಿಂದ ತಂದ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವುದು ವಿಶೇಷವಾಗಿ ಕಾಣಸಿಗಲಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಲೇ.ರಮಾನಂದ್-ನಾಗಮಣಿ ದಂಪತಿಗಳ ಮನೆಯಲ್ಲಿ 1ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟದ ಗೊಂಬೆಗೆ ರಾಜ-ರಾಣಿಯಂತೆ ಅಲಂಕಾರ ಮಾಡಿ ಅಗ್ರಸ್ಥಾನದಲ್ಲಿ ಮಂಟಪ ನಿರ್ಮಿಸಿ ಗೊಂಬೆಗಳನ್ನು ಕೂರಿಸಲಾಗಿದೆ. ಆಧುನಿಕತೆ ಬೆಳೆದಂತೆ ಪ್ರಸ್ತುತ ಪಿಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕøತಿ ಮತ್ತು ಸಂಪ್ರದಾಯ ಪರಿಚಯ ಮಾಡಬೇಕಿದೆ ಎಂಬುದು ಹಿರಿಯರ ಅಭಿಪ್ರಾಯವಾಗಿದೆ.
Related Articles
ರಾಮಾಯಣ, ಮಹಾಭಾರತ, ಬ್ರಹ್ಮೋತ್ಸವ, ಶ್ರೀನಿವಾಸ ಪದ್ಮಾವತಿ, ರೈತರ ದಿನಚರಿ, ಮದುವೆ ಸಂಭ್ರಮ, ರಾಮ ಪಟ್ಟಾಭಿಷೇಕ, ಸೀತಾರಾಮ ಕಲ್ಯಾಣ, ಕುಂಬಕರಣ, ಕಲ್ಯಾನೋತ್ಸವ, ಶ್ರೀಸರಸ್ಪತಿ, ಶ್ರೀರಾಮ ಆಂಜನೇಯ ಗುಹೆ, ಶ್ರೀಅಷ್ಟಲಕ್ಷ್ಮೀ, ದಾರ್ಶನಿಕರು, ಮದುವೆ ಸಂಭ್ರಮ, ಘಟೋದ್ಗಜ, ನೃತ್ಯ ಪ್ರದರ್ಶನ, ಉಲಗ ಅಳಂದ ಪೆರುಮಾಳ್, ಶ್ರೀಕೃಷ್ಣಲೀಲೆ, ಗೋವರ್ಧನ ಗಿರಿಧಾಮ, ನಮ್ಮೂರಶಾಲೆ, ಲವಕುಶ, ವರ್ತಕ ಗಣಪತಿ, ನಾಧಮುನಿಗೋಷ್ಟಿ, ಚಂದ್ರಯಾನ-3 ಬಿಂಬಿಸುವ 1ಸಾವಿರಕ್ಕೂ ಅಧಿಕ ಗೊಂಬೆಗಳ ಮುಖ್ಯಶಿಕ್ಷಕ ಲೇ.ರಮಾನಂದ ಅವರ ಮನೆಯಲ್ಲಿ ಅನಾವರಣಗೊಂಡಿವೆ.
Advertisement
ಬ್ರಹೋತ್ಸವ, ಜಾತ್ರೆ, ಹಬ್ಬ, ಸರಕಾರಿ ಶಾಲೆ, ಮಧುವೆ ಸಂಭ್ರಮ, ಇತಿಹಾಸದ ಕಥೆ, ರೈತರ ಜೀವನ, ಕಲಿಯುಗ ಮತ್ತು ಚಂದ್ರಯಾನ-3ರ ಬೊಂಬೆಗಳು ಮಕ್ಕಳಿಗೆ ಪ್ರೀಯಪಾತ್ರ. ರಾಮಾಯಣ-ಮಹಾಭಾರತ ನೆನಪಿಸುವ ಸನಾತನ ಧರ್ಮದ ಪರಂಪರೆಯ ಗೊಂಬೆಗಳ ಪ್ರದರ್ಶನ ಅನಾವರಣ ಆಗಿವೆ. ನಮ್ಮ ದೇಶದ ಸಂಸ್ಕøತಿ ಮತ್ತು ಸನಾತನ ಧರ್ಮದ ಪರಿಚಯಿಸುವುದೇ ಗೊಂಬೆಗಳ ವಿಶೇಷ.-ದೀಪ್ತಿ. ಶಿಕ್ಷಕಿ, ಹೊಳವನಹಳ್ಳಿ ನಮ್ಮ ಮನೆಯ ದಸರಾ ಗೊಂಬೆಗಳಿಗೆ 150ವರ್ಷದ ಇತಿಹಾಸವಿದೆ. ನವರಾತ್ರಿ ಪ್ರಯುಕ್ತ ಗೊಂಬೆಗಳ ಪ್ರದರ್ಶನ ಪಾಡ್ಯಮಿಯಲ್ಲಿ ಪ್ರಾರಂಭವಾಗಿ ವಿಜಯದಶಮಿಗೆ ಮುಕ್ತಾಯ ಆಗಲಿದೆ. 9ದಿನಗಳ ಕಾಲ ವಿಶೇಷಪೂಜೆ ಮತ್ತು ಭಜನೆ ಕಾರ್ಯಕ್ರಮ ಜರುಗಲಿದೆ. 1ಸಾವಿರಕ್ಕೂ ಅಧಿಕ ಗೊಂಬೆಗಳ ರಕ್ಷಣೆ ಮತ್ತು ನಿರ್ವಹಣೆಯೇ ನಮಗೇ ದೊಡ್ಡ ಸವಾಲು. ನಮ್ಮ ದೇಶದ ಪರಂಪರೆ ಮತ್ತು ಸಂಸ್ಕøತಿಯು ಗೊಂಬೆಗಳ ಮೂಲಕ ಅನಾವರಣೆ ಗೊಂಡಿವೆ. -ನಾಗಮಣಿ. ಗೃಹಿಣಿ, ಹೊಳವನಹಳ್ಳಿ.