Advertisement

Koratagere: ಅಂತೂ ನವಿಲುಕುರಿಕೆ ಗ್ರಾಮಕ್ಕೆ ಬಂದ ಬಸ್‌

07:43 PM Jan 03, 2024 | Team Udayavani |

ಕೊರಟಗೆರೆ: ತಾಲೂಕಿನ ಸಿ.ಎನ್ ದುರ್ಗಾ ಹೋಬಳಿ ನವಿಲುಕುರಿಕೆ ಗ್ರಾಮಕ್ಕೆ ಗೃಹ ಸಚಿವ, ಶಾಸಕ ಡಾ.ಜಿ ಪರಮೇಶ್ವರ್ ಅವರ ಆದೇಶದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್‌ನ ವ್ಯವಸ್ಥೆ ಕಲ್ಪಿಸಿದರು, ಗ್ರಾಮಕ್ಕೆ ಆಗಮಿಸಿದ ವೇಳೆ ಗ್ರಾಮಸ್ಥರು ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರೆ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿತ್ತು.

Advertisement

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಮಹತ್ವದ ಕಾರ್ಯಕ್ರಮದಲ್ಲಿ ಅಂದಿನ ತಹಶೀಲ್ದಾರ್ ನಹೀದಾ ಜಮ್‌ಜಮ್ ಅವರಿಗೆ ನವಿಲುಕುರಿಕೆ ಗ್ರಾಮಸ್ಥರು ಬಸ್ ಸಮಸ್ಯೆಯ ಬಗ್ಗೆ ಮನವಿಯನ್ನು ಸಲ್ಲಿಸಿದರು. ಶಾಸಕರ ಗಮನಕ್ಕೆ ತಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಆದೇಶದ ಪತ್ರ ಬರೆದಿದ್ದರು.

ತುಮಕೂರು ಸೇರಿದಂತೆ ಕೊರಟಗೆರೆ ಶಾಲೆ-ಕಾಲೇಜುಗಳಿಗೆ ನವಿಲುಕುರಿಕೆ ಗ್ರಾಮದಿಂದ ಪ್ರತಿದಿನ ಅನೇಕ ವಿದ್ಯಾರ್ಥಿಗಳು ಹೋಗುತ್ತಿದ್ದು, ಈ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದ ಕಾರಣ ಮೈಲಿಗಟ್ಟಲೆ ನಡೆಯಬೇಕಾದ ಅನಿವಾರ್ಯತೆ ಎದುರಾಗಿತ್ತು, ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಅಂದು ನಡೆದ ಜಿಲ್ಲಾಧಿಕಾರಿಗಳ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ ಹಿನ್ನಲೆ ಸಾರಿಗೆ ಅಧಿಕಾರಿಗಳು ಸಚಿವ ಡಾ.ಜಿ ಪರಮೇಶ್ವರ್ ಆದೇಶದಂತೆ ಸರ್ಕಾರಿ ಬಸ್ ಸೌಲಭ್ಯವನ್ನು ಕಲ್ಪಿಸಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಕೃತಜ್ಞತೆ ತಿಳಿಸಿದ ಗ್ರಾಮಸ್ಥರು

ತಾಲೂಕಿನ ನವಿಲುಕುರಿಕೆ ಗ್ರಾಮಸ್ಥರ ಮನವಿಯ ಮೆರೆಗೆ ಸರ್ಕಾರವು ಸಾರಿಗೆ ಇಲಾಖೆಗೆ ಬಸ್‌ನ ವ್ಯವಸ್ಥೆ ಕಲ್ಪಿಸುವಂತೆ ಆದೇಶ ಮಾಡಿತ್ತು, ಸರ್ಕಾರದ ಆದೇಶದ ಅನ್ವಯ ಇಲಾಖೆಯು ನವಿಲುಕುರಿಕೆ, ದಮಗಲಯ್ಯನ ಪಾಳ್ಯ, ಜಿ.ನಾಗೇನಹಳ್ಳಿ, ಬುರುಗನಹಳ್ಳಿ, ಗೊರವನಹಳ್ಳಿ ಗ್ರಾಮಗಳಿಗೆ ಪ್ರತಿನಿತ್ಯ ಸಂಚರಿಸಲು ವಿಶೇಷ ಸಾರಿಗೆ ಬಸ್‌ನ ವ್ಯವಸ್ಥೆ ಕಲ್ಪಿಸಿದ್ದು ಗ್ರಾಮಸ್ಥರೆಲ್ಲರೂ ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಸರ್ಕಾರಕ್ಕೆ ಮತ್ತು ಸ್ಥಳೀಯ ಶಾಸಕರಿಗೆ ವಿಶೇಷ ಕೃತಜ್ಞತೆಯನ್ನು ತಿಳಿಸಿದ್ದಾರೆ.

Advertisement

ನಮ್ಮ ಹೋಬಳಿಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ನಡೆಯಿತು, ಆ ವೇಳೆ ತಹಶೀಲ್ದಾರ್ ನಹೀದಾ ಜಮ್‌ಜಮ್ ಅವರಿಗೆ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ ಎಂದು ಮನವಿಯನ್ನ ಸಲ್ಲಿಸಲಾಗಿತ್ತು, ಶಾಸಕ ಡಾ.ಜಿ ಪರಮೇಶ್ವರ್‌ರವರು ನಮ್ಮ ಸಮಸ್ಯೆಯನ್ನು ಅರಿತು ಇಂದು ಸಾರಿಗೆ ಬಸ್‌ನ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿದ್ದಾರೆ, ಇಂತಹ ನಾಯಕರು ನಮ್ಮ ಕ್ಷೇತ್ರದಲ್ಲಿರುವುದು ನಮ್ಮ ಹೆಮ್ಮೆ ಎಂದು ನವಿಲುಕುರಿಕೆ ಗ್ರಾಮಸ್ಥ ರಾಮಚಂದ್ರಯ್ಯ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next