Advertisement

ಕೊರಟಗೆರೆ ಬಿಜೆಪಿ; ಕೆ.ಎಂ.ಮುನಿಯಪ್ಪ ಬೆಂಬಲಕ್ಕೆ ನಾನಿದ್ದೇನೆ: ಜಿ.ಮರೀಸ್ವಾಮಿ

06:36 PM Dec 15, 2022 | Team Udayavani |

ಕೊರಟಗೆರೆ: ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ 4 ವರ್ಷದಿಂದ ಜನಸೇವೆ ಮಾಡಿದ್ದಾರೆ. ಕೆ.ಎಂ.ಮುನಿಯಪ್ಪ ಪರವಾಗಿ ನನ್ನ ಬೆಂಬಲ ಇದ್ದೇ ಇರುತ್ತದೆ.. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಳ ಮಟ್ಟದಿಂದ ಸಂಘಟನೆಗೆ ಮುಂದಾಗಿ ಕೊರಟಗೆರೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಮಾಜಿ ಜಿಪಂ ಅಧ್ಯಕ್ಷ ಜಿ.ಮರೀಸ್ವಾಮಿ ಮನವಿ ಮಾಡಿದರು.

Advertisement

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಮತ್ತು ಟಿ.ಡಿ.ತಿಮ್ಮಜ್ಜ ನೇತೃತ್ವದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕೋರೊನಾ ರೋಗ ಹರಡಿದಾಗ ಕೊರಟಗೆರೆ ಕ್ಷೇತ್ರದ ಜನರಿಗೆ ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ 30 ಸಾವಿರ ಆಹಾರದ ಕಿಟ್ ಮತ್ತು ವೈದ್ಯಕೀಯ ನೇರವು ನೀಡಿದ್ದಾರೆ. ಕೊರಟಗೆರೆ ಕ್ಷೇತ್ರದ ಜನರಿಂದ ಮುನಿಯಪ್ಪನಿಗೆ ಪ್ರೀತಿ ಮತ್ತು ವಾತ್ಸಲ್ಯ ದೊರೆತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ-ಸಾಧನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕಿದೆ ಎಂದು ತಿಳಿಸಿದರು.

ತುಮಕೂರು ನಗರ, ತಿಪಟೂರು, ತುರುವೇಕೆರೆ, ಚಿಕ್ಕನಾಯನಹಳ್ಳಿ, ಶಿರಾ ಕ್ಷೇತ್ರವು ಬಿಜೆಪಿ ತೆಕ್ಕಿಯಲ್ಲಿದೆ. 2023ಕ್ಕೆ ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಗುಬ್ಬಿ ಮತ್ತು ಕುಣಿಗಲ್ ಕ್ಷೇತ್ರದಲ್ಲಿಯು ಬಿಜೆಪಿ ಪಕ್ಷವು ಗೆಲುವು ಸಾಧಿಸಲಿದೆ. ಬಿಜೆಪಿ ಪಕ್ಷದ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳೇ ಸಹಕಾರಿ ಆಗಲಿದೆ ಎಂದು ಜಿ.ಮರೀಸ್ವಾಮಿ ಹೇಳಿದರು.

ಕೊರಟಗೆರೆ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಕೆ.ಎಂ.ಮುನಿಯಪ್ಪ ಮಾತನಾಡಿ ನಾನು ಕಳೆದ ೪ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ. ಮಾಜಿ ಸಿಎಂ ಯಡಿಯೂರಪ್ಪ ಅಪ್ಪಾಜಿಯ ಆರ್ಶಿವಾದ ನನ್ನ ಮೇಲಿದೆ. ಬಿಜೆಪಿ ಪಕ್ಷದ ಹಿರಿಯರ ತಿರ್ಮಾನಕ್ಕೆ ನಾನು ಬದ್ದನಿದ್ದೇನೆ. ಬಿಜೆಪಿ ಪಕ್ಷದ ಸಂಘಟನೆಯೇ ಕಾರ್ಯಕರ್ತರ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

Advertisement

ಕೆ.ಎಂ.ಮುನಿಯಪ್ಪ ಶಕ್ತಿ ಪ್ರದರ್ಶನ

ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ೫ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಿದ್ದರು. ಸಭಾಂಗಣ ಮತ್ತು ಹೊರಾಂಗಣ ಸ್ಥಳದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ತುಂಬಿದ್ದರು. ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಪರವಾಗಿ ಜೈಕಾರ ಮತ್ತು ಟಿಕೇಟ್ ನೀಡುವಂತೆ ಜಿ.ಮರೀಸ್ವಾಮಿಗೆ ಸಾವಿರಾರು ಕಾರ್ಯಕರ್ತರು ಒತ್ತಾಯ ಮಾಡಿದರು.

20 ಜನ ಕಾರ್ಯಕರ್ತರ ರಾಜನಾಮೆ

20 ಜನ ಬಿಜೆಪಿ ಕಾರ್ಯಕರ್ತರ ರಾಜಿನಾಮೆಯು ಪಕ್ಷದ ಹಿನ್ನಡೆಗೆ ಪ್ರಮುಖ ಕಾರಣ. ಕೋಟ್ಯಂತರ ಕಾರ್ಯಕರ್ತರು ಇರುವ ಬಿಜೆಪಿ ರಾಷ್ಟ್ರೀಯ ಶಿಸ್ತಿನ ಪಕ್ಷವಾಗಿದೆ. ಕುಟುಂಬದಲ್ಲಿ ಒಡಕು ಮೂಡುವುದು ಸರ್ವೇ ಸಾಮಾನ್ಯ. ತಿಮ್ಮಜ್ಜ, ಪ್ರಸನ್ನ ಮತ್ತು ಹನುಮಂತರಾಜು ರಾಜೀನಾಮೆ ಬಗ್ಗೆ ಗೊಂಬಲ ಬೇಡ ಮತ್ತೇ ಮೂವರನ್ನು ಪಾರ್ಟಿಗೆ ಸೇರಿಸುವ ಪ್ರಯತ್ನ ಮಾಡೇ ಮಾಡ್ತೀನಿ ಎಂದು ಬಿಜೆಪಿ ಮುಖಂಡ ಜಿ.ಮರೀಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚೇತನ್, ಟಿ.ಎಸ್.ಕೃಷ್ಣಮೂರ್ತಿ, ತಿಮ್ಮಜ್ಜ, ಹನುಮಂತರಾಯಪ್ಪ, ಪ್ರಸನ್ನಕುಮಾರ್, ಪ್ರಕಾಶ್‌ಬಾಬು, ಚಂದ್ರಣ್ಣ, ದೊಡ್ಡಕಾಯಪ್ಪ, ಮೀಸೆ ಮಂಜುನಾಥ, ನಟರಾಜು, ಉಮೇಶ್‌ಚಂದ್ರ, ಗೋವಿಂದರೆಡ್ಡಿ, ಸುರೇಶ್, ಬಾಲರಾಜು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next