Advertisement
ಕೊರಟಗೆರೆ ಪಟ್ಟಣದ ಬೆಸ್ಕಾಂ ಇಲಾಖೆಯ ಮೇಲೆ ತುಮಕೂರು ಲೋಕಾಯುಕ್ತ ಇಲಾಖೆಯ ಎಸ್ಪಿ ವಲೀಬಾಷ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಎಇಇ ಬಿ.ಜಿ.ಅರಸರಾಜು ಮತ್ತು ಕೊರಟಗೆರೆ ತಾಲೂಕು ಹನುಮೇಹಳ್ಳಿ ಗ್ರಾಮದ ಎಲೆಕ್ಟ್ರಿಕಲ್ ಗುತ್ತಿಗೆದಾರ ಅಂಬರೀಶ ಎಂಬಾತನ ಬಂದಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Related Articles
Advertisement
ತುಮಕೂರು ಲೋಕಾಯುಕ್ತ ಇಲಾಖೆಯ ಎಸ್ಪಿ ವಲೀಭಾಷ, ಡಿವೈಎಸ್ಪಿ ಹರೀಶ್, ಮಂಜುನಾಥ, ಇನ್ಸ್ ಪೆಕ್ಟರ್ ಶಿವರುದ್ರಪ್ಪಮೇಟಿ, ಸತ್ಯನಾರಾಯಣ ಸೇರಿದಂತೆ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ. ಶಿರಾ ಗುತ್ತಿಗೆದಾರ ಹರೀಶ್ ಮತ್ತು ತೋವಿನಕೆರೆ ರೈತ ದೂರಿನ ಅನ್ವಯ ಕೊರಟಗೆರೆ ಬೆಸ್ಕಾಂ ಎಇಇ ಅರಸರಾಜು ಮೇಲೆ ತುಮಕೂರು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಭೆಯಲ್ಲಿ ಎಇಇಗೆ ರೈತರಿಂದ ತರಾಟೆ..ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆ ಕಚೇರಿಯಲ್ಲಿ ಆ.21 ರ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಎಇಇ ಅರಸರಾಜು ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಅಂತರ್ಜಲ ಅಭಿವೃದ್ದಿ ನಿರ್ವಾಹಕ ಮತ್ತು ನಿಯಂತ್ರಣ ಸಮಿತಿಯ ಸಭೆಯಲ್ಲಿ 18ಕೊಳವೆಬಾವಿ ಯೋಜನೆಗೆ ವಿದ್ಯುತ್ ಸಂಪರ್ಕ ನೀಡಲು 5 ಜನ ಸದಸ್ಯರ ಪೈಕಿ 4 ಜನ ಅಧಿಕಾರಿ ಸಹಿ ಹಾಕಿದ ನಂತರವು ಬೆಸ್ಕಾಂ ಇಲಾಖೆಯ ಎಇಇ ಸಹಿ ಹಾಕದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತವಾಗಿತ್ತು.