Advertisement
– ಹೀಗೆ ಹೇಳುತ್ತಾ ಹೋದರು ನಿರ್ದೇಶಕ ರಘು. ಅವರು ಹೇಳಿದ್ದು, “ಕಿಡಿ’ ಸಿನಿಮಾ ಬಗ್ಗೆ. ಇದು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. “ಕಿಡಿ’ ಚಿತ್ರ ಕುರಿತು ಹೇಳಲೆಂದೇ, ಪತ್ರಕರ್ತರ ಜತೆ ಕುಳಿತಿದ್ದರು ರಘು. “ಒಳ್ಳೆಯ ಚಿತ್ರವಾಗಲು ಮುಖ್ಯವಾಗಿ ಒಳ್ಳೆಯ ತಂಡ ಬೇಕು. ಅದು ಇಲ್ಲಿ ಸಿಕ್ಕಿದ್ದರಿಂದ “ಕಿಡಿ’ ಹೊಸಬಗೆಯ ಚಿತ್ರವಾಗಿ ಮೂಡಿಬಂದಿದೆ. ನಿರ್ಮಾಪಕರು ಕೊಟ್ಟ ಸಹಕಾರದಿಂದ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಉಳಿದದ್ದು ಪ್ರೇಕ್ಷಕರು ಕೊಡುವ ತೀರ್ಪಿನ ಮೇಲೆ ನಿಂತಿದೆ’ ಎಂದು ಹೇಳಿ ಸಮ್ಮನಾದರು ರಘು.
“ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೆ. ಒಳ್ಳೆಯ ಟೀಮ್ ಜತೆಗಿತ್ತು. ಅಪ್ಪು ವೆಂಕಟೇಶ್ ಬಳಿ ಆ್ಯಕ್ಷನ್ ತರಬೇತಿ ಪಡೆದೆ. ಉಳಿದಂತೆ ಸಹ ಕಲಾವಿದರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನಾನಿಲ್ಲಿ ಬ್ಯಾಂಕ್‌ವೊಂದರ ಉದ್ಯೋಗಿಯಾಗಿ ನಟಿಸಿದ್ದೇನೆ. ಕೋಪ ಜಾಸ್ತಿ ಮಾಡಿಕೊಳ್ಳುವ ಹುಡುಗನ ಪಾತ್ರವದು. ಅದು ಹೆಚ್ಚಾದಾಗ, ಏನೆಲ್ಲಾ ಆಗುತ್ತೆ ಅನ್ನೋದೇ ಸಿನಿಮಾ’ ಅಂದರು ಭುವನ್‌ಚಂದ್ರ. ನಾಯಕಿ ಪಲ್ಲವಿ ಅವರಿಗೆ ಇದು ಎರಡನೇ ಚಿತ್ರ. ಈ ಹಿಂದೆ “ಪ್ರೇಮ ಗೀಮ ಜಾನೇದೋ’ ಚಿತ್ರದ ಬಳಿಕ ಈ ಚಿತ್ರ ಒಪ್ಪಿಕೊಂಡರಂತೆ. ಅವರು ಒಪ್ಪಲು ಕಾರಣ, ಪಾತ್ರ ಮತ್ತು ಕಥೆಯಂತೆ. ಅವರಿಲ್ಲಿ ಕೋಪಿಷ್ಟ ಹುಡುಗನ ಕೋಪವನ್ನು ತಣ್ಣಗೆ ಮಾಡುವಂತಹ ಪಾತ್ರವಂತೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲೇ ನೋಡಬೇಕಂತೆ. ಆ ಹುಡುಗನ ಲವ್ವರ್ ಆಗಿ ಅಕೆ, ಏನೇನು ಮಾಡುತ್ತಾಳೆ
ಎಂಬುದು ಸಸ್ಪೆನ್ಸ್ ಅಂದರು ಪಲ್ಲವಿ.
Related Articles
Advertisement
ಡ್ಯಾನಿ ಕುಟ್ಟಪ್ಪ, ಇಲ್ಲಿ ಲಾರಿ ಡ್ರೈವರ್ ಆಗಿ ನಟಿಸಿದ್ದಾರಂತೆ. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ ಖುಷಿ ನನಗಿದೆ ಅಂದರು ಅವರು. “ಉಗ್ರಂ’ ಮಂಜು ಅವರಿಲ್ಲಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರವನ್ನು ನಾಗರಾಜ್, ಧನಂಜಯ್, ಮಲ್ಲಿಕಾರ್ಜುನ್ ಸೇರಿ ನಿರ್ಮಿಸಿದ್ದು, ಖುಷಿ ಹಂಚಿಕೊಂಡರು.