Advertisement

ಶಿರಸಿ : ಕೊಪ್ಪಳಗದ್ದೆ ಕೆರೆ ಅಭಿವೃದ್ದಿಗೆ ಜೀವಜಲ ಚಿಂತನೆ, ಸಮಾಲೋಚನೆ

03:41 PM Sep 18, 2021 | Team Udayavani |

ಶಿರಸಿ: ದಿನದಿಂದ‌ ದಿನಕ್ಕೆ‌ ತನ್ನ‌ಕಾರ್ಯ ಬಾಹುಳ್ಯ ವಿಸ್ತಾರಗೊಳಿಸಿಕೊಳ್ಳುತ್ತಿರುವ ಶಿರಸಿಯ ಜೀವ ಜಲ‌ಕಾರ್ಯಪಡೆ ಮುಂದಿನ ದಿನಗಳಲ್ಲಿ ಗ್ರಾಮೀಣ‌ ಭಾಗದ ಕೆರೆಗಳ ಅಭಿವೃದ್ದಿಗೆ ಚಿಂತನೆ ನಡೆಸಿದೆ.

Advertisement

ಈವರೆಗೆ ನಗರ ಭಾಗದ ಕೆರೆಯ ಅಭಿವೃದ್ದಿಗೆ ದೃಢ ಹೆಜ್ಜೆ ಇಟ್ಟು‌ ನಿರಂತರ ನಿರ್ವಹಣೆ ಕೂಡ‌ ಮಾಡುತ್ತಿರುವ ಜೀವ ಜಲ ಕಾರ್ಯಪಡೆ ತಾಲೂಕಿನ ಯಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕರಸುಳ್ಳಿಯ‌ ಕೊಪ್ಪಳಗದ್ದೆ ಕೆರೆ ಅಭಿವೃದ್ದಿಗೆ ಕೂಡ ಚಿಂತಿಸಿದೆ.

ಎರಡು ಎಕರೆ‌ ಮೂರು ಗುಂಟೆ ವಿಸ್ತೀರ್ಣದ ಕೊಪ್ಪಳ ಗದ್ದೆ ಕೆರೆ ಕರಸುಳ್ಳಿಯ ಪುರಾತನ ಜಲಮೂಲವಾಗಿದ್ದು ಸುತ್ತಲಿನ ನಲ್ವತ್ತಕ್ಕೂ ಅಧಿಕ ಎಕರೆ ಅಡಿಕೆ, ಭತ್ತದ ಗದ್ದೆಗಳಿಗೆ ನೀರುಣಿಸುವ ಜಲಪಾತ್ರವಾಗಿದೆ. ಮೂವತ್ತಕ್ಕೂ ಅಧಿಕ ವೈದಿಕ‌ ಕುಟುಂಬಗಳು ನಂಬಿದ ಅಡಿಕೆ ಬೇಸಾಯದ ಜೀವನಾಧಾರ ಕೆರೆ ಕೂಡ ಇದೇ ಆಗಿದೆ.

ಇದನ್ನೂ ಓದಿ :ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

ಈ ಕೆರೆಯ ಅಭಿವೃದ್ದಿ ಗ್ರಾಮಸ್ಥರ ಕನಸಾಗಿತ್ತು. ಕಳೆದ ಹಲವು ವರ್ಷಗಳಿಂದ ಕೆರೆ ಹೂಳೆತ್ತುವ ಕುರಿತು ಪ್ರಯತ್ನಿಸಿದ್ದರು. ಕಳೆದ ಎರಡು‌ ತಿಂಗಳ ಹಿಂದೆ ಮಾಧ್ಯಮಗಳಲ್ಲೂ ಈ ಕೆರೆಯ ಸಮಗ್ರ ಅಭಿವೃದ್ದಿ ಬಗ್ಗೆ ಪ್ರಸ್ತಾಪಿಸಿ ವರದಿ ಪ್ರಕಟಿಸಿದ್ದವು.

Advertisement

ಇದನ್ನು ಗಮನಿಸಿದ್ದ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು, ಸದಸ್ಯ ಅನಿಲ‌ ನಾಯಕ ಅವರ ಜೊತೆ ಈಚೆಗೆ ಕೆರೆಯ ಸ್ಥಿತಿಗಳನ್ನು‌ ವೀಕ್ಷಿಸಿದರು.

ಕೆರೆಯ ದಂಡೆ ಬಲ‌ಪಡಿಸುವದು, ಕೆರೆಯ ಹೂಳೆತ್ತಿಸುವದು, ಎತ್ತಿದ ಹೂಳು ಹಾಕುವ ಸ್ಥಳಗಳು ಸೇರಿದಂತೆ ಆಗಬೇಕಾದ ಕಾರ್ಯಗಳ ಕುರಿತು ಗ್ರಾಮಸ್ಥರ ಜೊತೆ ಸಮಾಲೋಚಿಸಿದರು.

ತಾಲೂಕಿನ ಪಶ್ಚಿಮ‌ ಭಾಗದಲ್ಲಿ ಎರಡು‌ ಎಕರೆ ಕ್ಷೇತ್ರದ ಕೆರೆ ಇದಾಗಿದ್ದು, ಯಾವುದೇ ಅತಿಕ್ರಮಣ ಕೂಡ ಆಗದೇ ಇದೆ. ಇದರ ಸಮಗ್ರಿ ಅಭಿವೃದ್ದಿ ಆಗಬೇಕು. ಬಹುಕಾಲದ ಕನಸು ಗ್ರಾಮದ್ದು ಎಂದು ಸ್ಥಳೀಯರು ಮನವಿ‌ ಮಾಡಿದರು.

ಜೀವ ಜಲ‌ ಕಾರ್ಯಪಡೆ‌ ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಈ ಕೆರೆ ಅಭಿವೃದ್ದಿ ಕೈಗೆತ್ತಿಕೊಳ್ಳಲು ಆಸಕ್ತವಾಗಿದೆ.
– ಶ್ರೀನಿವಾಸ ಹೆಬ್ಬಾರ, ಅಧ್ಯಕ್ಷರು , ಜೀವ ಜಲ‌ ಕಾರ್ಯಪಡೆ, ಶಿರಸಿ

ನಮ್ಮ ಗ್ರಾಮದ ದೊಡ್ಡ ‌ಕೆರೆ. ಇದೊಂದು ಜಲ‌ ಪಾತ್ರೆ. ಇದರ ಅಭಿವೃದ್ಧಿ ನಮ್ಮ ಬಹು ಕಾಲದ‌ ಕನಸು. ಅದು ಸಾಕಾರ ಆದರೆ ಸಾಕು.
– ಕರಸುಳ್ಳಿ ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next