Advertisement
ಸಮಾಜವಿಜ್ಞಾನ ಶಿಕ್ಷಕ ಕಿಶನರಾವ್ ಕುಲಕರ್ಣಿ ಸಮಾಜ ವಿಜ್ಞಾನದ ಎಲ್ಲ ಸಿಲೆಬಸ್ ಅನ್ನು ನಾಟಕ ಹಾಗೂ ಕಥೆಗಳಿಗೆ ಬದಲಾವಣೆ ಮಾಡಿದ ಕಾರಣಕ್ಕಾಗಿ ವಿದ್ಯಾರ್ಥಿಗಳು ಅಭಿನಯಿಸುವದರೊಂದಿಗೆ ಕಲಿಕೆ ದೃಢೀಕರಿಸಿಕೊಳ್ಳುತ್ತಿದ್ದಾರೆ.
Related Articles
Advertisement
ಶಿಕ್ಷಕ ಕಿಶನರಾವ್ ಕುಲಕರ್ಣಿ ಅವರು ತಾವು ಮಾಡುವ ಪಾಠವನ್ನು ವಿಡಿಯೋ ರೆಕಾರ್ಡ ಮಾಡಿ ಶಾಲಾ ಹೆಸರು ಹೊಂದಿದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಿಯಾದ ದಿನ ಮನೆಯಲ್ಲಿಯೇ ಕುಳಿತು ವೀಕ್ಷಿಸಿ ಅಪ್ಡೇಟ್ ಆಗುತ್ತಾರೆ.
ಇದನ್ನೂ ಓದಿ : ಉಡುಪಿ : ಸ್ಪೀಡ್‌ಪೋಸ್ಟ್‌ನಲ್ಲಿ ಮತದಾರರ ಮನೆಗೆ ಬರಲಿದೆ ಎಪಿಕ್ ಕಾರ್ಡ್
ಕಿಶನರಾವ್ ಕುಲಕರ್ಣಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ 2021 ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಕಿಶನರಾವ್ ಕುಲಕರ್ಣಿ ಯವರು ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಠ್ಯ ಬೋಧನೆ ಮಾಡುತ್ತ, ಹೊಸ ಟಕ್ನಿಕ್ ಪರಿಚಯಿಸಿದ್ದಾರೆ, ಬೋಧನಾ ಕೊಠಡಿಯನ್ನೇ ಸ್ಟುಡಿಯೋ ರೂಪಕ್ಕೆ ಬದಲಾಯಿಸಿ ಆಕರ್ಷಕಗೊಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿ ಬೋಧನಾ ತಂತ್ರಾಂಶಗಳನ್ನು ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಪದ್ಧತಿಯನ್ನು ಸುತ್ತಲಿನ ಹಲವಾರು ಶಿಕ್ಷಕರು ಅನುಸರಿಸುತ್ತಿದ್ದಾರೆ.
ಬೋಧನೆಯಲ್ಲಿ ನಾವಿನ್ಯತೆಯ ಪ್ರಯೋಗಗಳನ್ನು ಮಾಡುತ್ತಿರುವ ಕಾರಣಕ್ಕಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಅತಿ ಹೆಚ್ಚು ಅಂಕಗಳೊಂದಿಗೆ ಪಾಸಾಗುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಹುಸೇನ್ ಸಾಬ್ ಇಲಕಲ್ಲ ಹೇಳುತ್ತಾರೆ.
– ಮಲ್ಲಿಕಾರ್ಜುನ ಮೆದಿಕೇರಿ. ದೋಟಿಹಾಳ.