Advertisement

Koppala; ಹೆಚ್ಚಿನ ಭಕ್ತರು ಆಗಮಿಸುವ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ: ರಾಮಲಿಂಗಾ ರೆಡ್ಡಿ

02:56 PM Dec 19, 2023 | Team Udayavani |

ಕೊಪ್ಪಳ: ಅಂಜಿನಾದ್ರಿ, ಹುಲಿಗೆಮ್ಮ ದೇವಿ ಸನ್ನಿಧಿಗೆ ಲಕ್ಷಾಂತರ ಜನ ಬರುತ್ತಾರೆ. ಹುಣ್ಣಿಮೆ ದಿನವೂ ಅಪಾರ ಸಂಖ್ಯೆಯ ಜನರ ಆಗಮನವಿದೆ. ಭಕ್ತರಿಗೆ ತಕ್ಕಂತೆ ಸೌಲಭ್ಯ ಇಲ್ಲದಿರುವುದು ಗಮನಿಸಿರುವೆ, ಹೆಚ್ಚಿನ ಭಕ್ತರು ಆಗಮಿಸುವ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ರಾಮಲಿಂಗಾರಡ್ಡಿ ಹೇಳಿದರು.

Advertisement

ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನದಲ್ಲಿ ಮಾತನಾಡಿದ ಅವರು, ಚಾಮುಂಡಿ ಹಾಗೂ ಯಲ್ಲಮ್ಮ ದೇವಸ್ಥಾನದ ಪ್ರಾಧಿಕಾರ ರಚನೆ ಮಾಡಿದೆ. ಈ ಭಾಗದಲ್ಲಿ ಅಂಜಿನಾದ್ರಿ, ಯಲ್ಲಮ್ಮ, ಮೈಲಾರ ಲಿಂಗೇಶ್ವರ ದೇವಸ್ಥಾನಗಳು ಪ್ರಸಿದ್ದಿ ಪಡೆದಿವೆ. ಹುಲಿಗೆಮ್ಮ ದೇವಾಲಯ ಅಭಿವೃದ್ಧಿಗೆ 30 ಎಕರೆ ಜಾಗ ಪಡದಿದೆ. ನದಿ ಪಕ್ಕದಲ್ಲಿಯೇ ಜಮೀನು ಇದೆ. ಟೆಂಡರ್ ಕರೆದಿದ್ದು, ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು. ಅಭಿವೃದ್ದಿಗೆ 2.50 ಕೋಟಿ ಮೇಲಿದ್ದರೆ ಸಿಎಂ ಒಪ್ಪಿಗೆ ಬೇಕು. ತಿಂಗಳಲ್ಲಿ ಸಿಎಂ ಅವರನ್ನು ಭೇಟಿ ಮಾಡುವೆ ಎಂದರು.

ನದಿ ಪಕ್ಕದಲ್ಲಿ ಸ್ನಾನಘಟ್ಟ ಹಾಗೂ ಬಟ್ಟೆ ಬದಲಿಸುವ ವ್ಯವಸ್ಥೆಗೆ ಕ್ರಮ. ಹುಲಿಗೆಮ್ಮ ದೇವಿ ಅಭಿವೃದ್ಧಿ ಕಾರ್ಯಕ್ಕೆ ಮಾಸ್ಟರ್ ಪ್ಲಾನ್ ಮಾಡಲು ಸೂಚನೆ. ಇಲ್ಲಿ ಸಿಬ್ಬಂದಿ ಕೊರತೆ ಗಮನಕ್ಕೆ ಬಂದಿದೆ. ತಿಂಗಳಲ್ಲಿ ಸಿಎಂ ಅನುಮೋದನೆ ಪಡೆದು ಕಳಿಸುವೆ. ಮೂರು ನಾಲ್ಕು ತಿಂಗಳಲ್ಲಿ ಅಭಿವೃದ್ಧಿ ಕೆಲಸ ಆರಂಭ ಮಾಡುವೆವು. ರಸ್ತೆ ಮೇಲೆ ಮಲಗುವ ಭಕ್ತರಿಗೆ ಸಮಸ್ಯೆ ಇತ್ಯರ್ಥಕ್ಕೆ ಕ್ರಮ. ಇಲ್ಲಿ ಹೆಚ್ಚೆಚ್ಚು ಶೌಚಾಲಯ ನಿರ್ಮಾಣ ಮಾಡಬೇಕಿದೆ. ದೇವಸ್ಥಾನದಲ್ಲಿ ಹಣವಿದೆ ಸರ್ಕಾರವೂ ಹಣ ಕೊಟ್ಟಿದೆ. ನಾನೇ ಶಂಕುಸ್ಥಾಪನೆ ಮಾಡುವೆ ನಾನೇ ಉದ್ಘಾಟನೆ ಮಾಡುವೆ. ಬೇರೆ ಸಚಿವರಂತೆ ನಾನು ಮಾತನಾಡಲ್ಲ ಮಾಡಿ ತೋರಿಸುವೆ ಎಂದರು.

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರ ಮಾಸ್ಕ್ ಧರಿಸಲು ಸರ್ಕಾರ ಹೇಳಿದೆ. ಎಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next