Advertisement

ಚಾರ್ಜರ್ ವೈಯರ್ ನನ್ನು ಕುತ್ತಿಗೆಗೆ ಬಿಗಿದು ಪತ್ನಿಯನ್ನು ಭೀಭತ್ಸವಾಗಿ ಕೊಂದ ಪತಿ..!

04:06 PM Jul 30, 2021 | Team Udayavani |

ಕುಷ್ಟಗಿ : ಪತ್ನಿಯನ್ನು ಪತಿ ಮೋಬೈಲ್ ಚಾರ್ಜರ್ ವೈಯರ್ ನಿಂದ ಕುತ್ತಿಗೆಗೆ ಬಿಗಿದು, ಕಲ್ಲು ಎತ್ತಿ ಹಾಕಿ ಬೀಭತ್ಸವಾಗಿ  ಕೊಂದು ಹಾಕಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ.

Advertisement

ಮಂಜುಳಾ ಮಂಜುನಾಥ ಕಟ್ಟಿಮನಿ(25) ಮೃತ ನತದೃಷ್ಟೆ. ಸ್ಥಳೀಯ ತಾಲೂಕಾ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಹೊರಗುತ್ತಿಗೆಯಲ್ಲಿ ಸೇವೆಯಲ್ಲಿದ್ದಳು.

ಇದನ್ನೂ ಓದಿ : ಬ್ಯಾಂಕ್ ಮ್ಯಾನೇಜರ್ ಗೆ ಚೂರಿಯಿಂದ ಇರಿದು ಹತ್ಯೆಗೈದ ಮಾಜಿ ಬ್ಯಾಂಕ್ ಮ್ಯಾನೇಜರ್!

ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಮಂಜುಳಾ ಈಕೆಯನ್ನು ಕೊಪ್ಪಳ ತಾಲೂಕಾ ಮುದ್ದಾಬಳ್ಳಿಯ ಮಂಜುನಾಥ ಕಟ್ಟಿಮನಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಮಂಜುನಾಥ ಕಟ್ಟಿಮನಿ ಕುಷ್ಟಗಿಯ ಕೆನರಾ ಬ್ಯಾಂಕಿನಲ್ಲಿ ಅಟೆಂಡರ್ ಕೆಲಸದಲ್ಲಿದ್ದ ಬೇರೊಂದು ಯುವತಿಯೊಂದಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.

ಈ ಕಾರಣದಿಂದಲೇ ಮನಸ್ಥಾಪದಿಂದ ಪತಿ-ಪತ್ನಿಯೊಂದಿಗೆ ಆಗಾಗ್ಗೆ ಜಗಳಕ್ಕೆ ಕಾರಣವಾಗಿತ್ತು. ಗುರುವಾರ ರಾತ್ರಿ ಬೃಂದಾವನ ಹೋಟೆಲ್ ಗೆ ಕರೆದೊಯ್ದು ಇಬ್ಬರೂ ಜೊತೆಗೂಡಿ ಊಟ ಮಾಡಿದ್ದಾರೆ. ನಂತರ ಫೋಟೋವನ್ನು ಸಾಮಾಜಿಕ ಜಾಲತಾಣದ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಇಬ್ಬರ ನಡುವೆ ಜಗಳವಾಗಿದ್ದು ಪತಿ ಮಂಜುನಾಥ ಪತ್ನಿ ಮಂಜುಳಾನ್ನು ಮೋಬೈಲ್ ಚಾರ್ಜರ್ ವೈಯರ್ ನಿಂದ ಕುತ್ತಿಗೆಗೆ ಬಿಗಿದು ತಲೆ ಮೇಲೆ ಕಲ್ಲು ಎತ್ತಿ ಅಮಾನುಷವಾಗಿ ಕೊಂದು ಹಾಕಿದ್ದಾನೆ. ನಂತರ ಕೊಪ್ಪಳ ರಸ್ತೆಯ ಕದಳೀ ನಗರ ಬಳಿ ಸಜ್ಜೆ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾನೆ. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ : ಬಿಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿ: ಗುರುಪೂರ್ಣಿಮೆ ಆಚರಣೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next