Advertisement
ಈ ಪ್ರೌಢ ಶಾಲೆ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಕೊಟಿಗಟ್ಟಲೇ ಹಣ ಖರ್ಚು ಮಾಡುತ್ತಿದೆ. ಆದರೆ ಅದು ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ.
Related Articles
Advertisement
ಮಕ್ಕಳು ಬಿಸಿಯೂಟದ ತೊಂದರೆಯಿಂದಾಗಿ ಬೆಳಿಗ್ಗೆ ಮಾತ್ರ ಪ್ರೌಢ ಶಾಲೆಯ ಹೊಸ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. ಮಧ್ಯಾಹ್ನ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಊಟ ಮಾಡಿದ ಮೇಲೆ ಮತ್ತೆ ಪ್ರೌಢ ಶಾಲೆಗೆ ಹೋಗಲು ತೊಂದರೆಯಾಗುವ ಕಾರಣ ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿ ಮಧ್ಯಾಹ್ನದ ತರಗತಿಗಳನ್ನು ನಡೆಸುತ್ತಿದ್ದೇವೆ.ನಮ್ಮ ಶಾಲೆಗೆ ಮಧ್ಯಾಹ್ನದ ಬಿಸಿ ಊಟದ ಸಿಬ್ಬಂದಿಗಳು ಇಲ್ಲ ಮತ್ತು ಅಡಿಗೆ ಸಾಮಾಗ್ರಿಗಳು ಇಲ್ಲ. ಹೀಗಾಗಿ ಮಕ್ಕಳು ಪ್ರಾಥಮಿಕ ಶಾಲೆಗೆ ಬಂದು ಊಟ ಮಾಡುತ್ತಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಸಿನ್ನೂರ ಅವರು ಹೇಳಿದ್ದಾರೆ. ನಮ್ಮ ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ 1ಕೀ.ಮೀ ನಡೆದುಕೊಂಡು ಗ್ರಾಮಕ್ಕೆ ಬಂದು ಹೋಗಲು ತೊಂದರೆಯಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಶೇಖರಪ್ಪ ಉಪ್ಪಾರ ಒತ್ತಾಯಿಸಿದ್ದಾರೆ. ಕ್ಯಾದಿಗುಪ್ಪ ಗ್ರಾಮದ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಗಳು ಇಲ್ಲ. ಈ ಮೊದಲು ಈ ಶಾಲೆಯ ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಊಟ ಮಾಡುತ್ತಿದ್ದರು. ಹೀಗ ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಕಾರಣ ಮಕ್ಕಳಿಗೆ ಬಿಸಿ ಊಟದ ತೊಂದರೆಯಾಗಿದೆ. ಕೂಡಲೇ ಶಾಲೆಗೆ ಅಡುಗೆದಾರರನ್ನು ನೇಮಕ ಮಾಡಲಾಗುತ್ತದೆ. ಮಕ್ಕಳ ಹಿತ ರಕ್ಷಣೆಗಾಗಿ ಸದ್ಯ ಯಾವುದಾದರೂ ಒಂದು ಕ್ರಮ ಕೈಗೊಳ್ಳುತ್ತೇವೆ. ಕೆ.ಶರಣಪ್ಪ, ತಾಲೂಕ ಅಕ್ಷರದಾಸೋಹ ಅಧಿಕಾರಿ ಕುಷ್ಟಗಿ. ಮಲ್ಲಿಕಾರ್ಜುನ ಮೆದಿಕೇರಿ.