ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಫ್ರಾನ್ಸ್ ದೇಶದ ರಾಯಭಾರಿ ಯೆಮ್ಯಾನುವೆಲ್ ಲೈನೆನ್ ಅವರು ಪತ್ನಿ ಹಾಗೂ ಅಧಿಕಾರಿಗಳ ಸಮೇತ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.
ಸಿಂಧೂರ ಧಾರಣೆ ಮಾಡಿ ಇಡೀ ಬೆಟ್ಟವನ್ನು ವೀಕ್ಷಿಸಿ ಆನಂದಿಸಿದರು. ಇಲ್ಲಿಯ ಕೋತಿಗಳಿಗೆ ಬಾಳೆಹಣ್ಣು ತಿನ್ನಿಸಿ ಖುಷಿಪಟ್ಟರು.ಈ ವೇಳೆ ದೇಗುಲ ಅಧಿ ಕಾರಿಗಳು ಅಂಜನಾದ್ರಿಯ ಇತಿಹಾಸ ಹಾಗೂರಾಮಾಯಣದಲ್ಲಿ ಕಿಷ್ಕಿಂದಾ ಪ್ರದೇಶದ ಉಲ್ಲೇಖದ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ:ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್ ಘಟಕ ಪ್ರತಿಭಟನೆ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಪ್ರಾಕೃತಿಕವಾಗಿ ಆಂಜನಾದ್ರಿ ಬೆಟ್ಟಸುಂದರವಾಗಿದೆ. ಇಲ್ಲಿಂದ ಸೂರ್ಯೋದಯಮತ್ತು ಸೂರ್ಯಾಸ್ತದ ಕುರಿತು ಹಲವುಪ್ರವಾಸಿ ಬುಕ್‌ಗಳಲ್ಲಿ ಓದಿದ್ದು, ಸ್ವತಃ ಇಲ್ಲಿಗೆಆಗಮಿಸಿ ವೀಕ್ಷಿಸಿದ್ದು ಖುಷಿಯಾಗಿದೆ. ಹಂಪಿಹಾಗೂ ಕಿಷ್ಕಿಂದಾ ಪ್ರದೇಶವು ವಿಶ್ವಪಾರಂಪರಿಕಪ್ರದೇಶದಲ್ಲಿದೆ. ಯುನೆಸ್ಕೋ ಕೇಂದ್ರ ಕಚೇರಿ ಪ್ಯಾರೀಸ್‌ನಲ್ಲಿದೆ.
ಇಲ್ಲಿ ವಿಶ್ವದ ಪಾರಂಪರಿಕಪಟ್ಟಿಯಲ್ಲಿ ಹಂಪಿ ಕಿಷ್ಕಿಂದಾ ಫೋಟೋಗಳು,ಮಾಹಿತಿ ಇದೆ. ವಿಶ್ವದ ಮಹತ್ವದ ಸ್ಥಳಕ್ಕೆಆಗಮಿಸಿರುವುದು ಸಂತೋಷವಾಗಿದೆಎಂದರು. ದೇಗುಲ ಕಮಿಟಿ ವತಿಯಿಂದ ರಾಯಬಾರಿ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು.