ಗಂಗಾವತಿ: ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಜನರ ವಿಮೋಚನಾ ಹೋರಾಟ ಭಾರತದ ಎರಡನೆಯ ಸ್ವಾತಂತ್ರ್ಯ ಸಮರವಾಗಿದೆ ಇದು ಸ್ಮರಣೀಯವಾದ ದಿನವಾಗಿದೆ ಎಂದು ಡಿಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಹೇಳಿದರು .
ಅವರು ಬಿಎಸ್ಪಿ ಕಚೇರಿಯಲ್ಲಿ ಉದಯವಾಣಿ ದಿನಪತ್ರಿಕೆ ಹೈದ್ರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಹೊರತಂದಿರುವ ಕಲ್ಯಾಣವಾಣಿ ಸಂಚಿಕೆಯನ್ನು ಬಿಡುಗಡೆ ಮಾತನಾಡಿದರು.
ಭಾರತ 1947 ಆ.15ರಂದು ಸ್ವಾತಂತ್ರ್ಯಗೊಂಡರೂ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ನಿಜಾಮನ ಆಡಳಿತ ಮುಂದುವರಿದಿತ್ತು. ಇದನ್ನು ವಿರೋಧಿಸಿ ಲಕ್ಷಾಂತರ ಜನರು ನಿತ್ಯವೂ ಹೋರಾಟ ನಡೆಸಿದರು.ಅವರ ತ್ಯಾಗ ಬಲಿದಾನದ ಫಲವಾಗಿ 1948 ಸೆ.17 ರಂದು ಹೈದ್ರಾಬಾದ್ ಕರ್ನಾಟಕದ ಜಿಲ್ಲೆ ಸೇರಿದಂತೆ ಇಡೀ ಹೈದ್ರಾಬಾದ್ ನಿಜಾಮನ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ಲೀನವಾಗಿ ಸ್ವತಂತ್ರಗೊಂಡವು. ನಿಜಾಮರ ಆಳ್ವಿಕೆ ಮತ್ತು ಅವರ ದಂಡನಾಯಕ ಖಾಸಿಂ ರಿಜ್ವಿ ಅವರ ದೌರ್ಜನ್ಯ ದಬ್ಬಾಳಿಕೆಯ ನೋವನ್ನು ಈ ಭಾಗದ ಜನರು ಸಹಿಸಿ ಸ್ವಾತಂತ್ರ್ಯಕ್ಕಾಗಿ ನಿರಂತರ ಹೋರಾಟ ಮಾಡಿದರು.
ಇದನ್ನೂ ಓದಿ:ಸದನದಲ್ಲಿ ಪ್ರತಿಧ್ವನಿಸಿದ ಶಿಶು ಮಾರಾಟ ಪ್ರಕರಣ: ‘ಉದಯವಾಣಿ’ ಕಾರ್ಯಕ್ಕೆ ಶ್ಲಾಘನೆ
ಈ ಎಲ್ಲಾ ವಿಷಯಗಳನ್ನು ಒಳಗೊಂಡ ಉದಯವಾಣಿ ದಿನಪತ್ರಿಕೆಯ ಕಲ್ಯಾಣವಾಣಿ ಸಂಚಿಕೆ ವಿಶೇಷವಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಆಸಕ್ತರು ಇದನ್ನು ಓದಿ ಇತಿಹಾಸವನ್ನು ತಿಳಿದುಕೊಳ್ಳಬೇಕಾಗಿದೆ ಆದ್ದರಿಂದ ಇಂಥ ಪ್ರಯತ್ನ ಮಾಡಿರುವ ಉದಯವಾಣಿ ಪತ್ರಿಕೆಗೆ ಅಭಿನಂದನೆಗಳು ನಿತ್ಯವೂ ಹಲವಾರು ವಿಷಯಗಳನ್ನೊಳಗೊಂಡ ಉದಯವಾಣಿಪತ್ರಿಕೆ ಜನಮಾನಸದಲ್ಲಿದೆ. ಆದ್ದರಿಂದ ಇನ್ನೂ ಅನೇಕ ವಿಷಯಗಳನ್ನು ಸಂಗ್ರಹ ಮಾಡುವ ಮೂಲಕ ಸಾರ್ಥಕ ಸೇವೆಯನ್ನು ಪತ್ರಿಕೆ ಮಾಡುತ್ತಿರು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಸಿಪಿಐ ವೆಂಕಟಸ್ವಾಮಿ ಉದಯವಾಣಿ ಪತ್ರಿಕೆಯ ವರದಿಗಾರ ಕೆ .ನಿಂಗಜ್ಜ ಇದ್ದರು