ಕೊಪ್ಪಳ: ರೈತ ಪಂಪ್ ಸೆಟ್ ಗೆ ಮೂಲಸೌಕರ್ಯ ಯೋಜನೆ ರದ್ದತಿ ಖಂಡಿಸಿ ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಸೋಮವಾರ ನಗರದ ಡಿಸಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಉಪವಾಸ ಧರಣಿ ಆರಂಭಿಸಿದ್ದಾರೆ.
ರಾಜ್ಯ ಸರ್ಕಾರವು ರೈತರ ಪಂಪ್ ಸೆಟ್ ಗಳಿಗೆ ಪರಿವರ್ತಕ ಸಹಿತ ಮೂಲಸೌಕರ್ಯ ಒದಗಿಸುವ ಯೋಜನೆ ರದ್ದತಿ ಆದೇಶ ಬರುವವರೆಗೂ ತಾವು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ರೈತರ ಪಂಪ್ ಸೆಟ್ ಗಳಿಗೆ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ದುರಸ್ತಿ ವಿದ್ಯುತ್ ಪರಿಕರ ಕೂಡಲೇ ಬದಲಾಯಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ರೈತರ ಪಂಪ್ ಸೆಟ್ ಗೆ ಮೂಲಸೌಕರ್ಯ ಕಲ್ಪಿಸುವ ಯೋಜನೆ ರದ್ದತಿ ಮಾಡಿದ್ದು ಕರಾಳವಾಗಿದೆ. ಇದರಿಂದ ರೈತರ ತಲೆ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಆಗಲಿದೆ. ರೈತರ ಜೀವನವೇ ಮೊದಲು ದುಸ್ಥರವಾಗಿದೆ. ಈ ವೇಳೆ ರೈತರ ಬಗ್ಗೆ ಅತ್ಯಂತ ನಿರ್ಲಕ್ಷ್ಯ ಧೋರಣೆ ತಾಳಿದ್ದು ನಿಜಕ್ಕೂ ಖಂಡನೀಯ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ಹರಿಕಾರ ಎನ್ನುತ್ತಾರೆ. ಅವರು ಈಚೆಗೆ ರೈತರ ಪಂಪ್ ಸೆಟ್ ಗೆ ಕಲ್ಪಿಸುವ ಸೌಕರ್ಯದ ಯೋಜನೆ ಪುನಃ ಆರಂಭ ಮಾಡುವ ಆದೇಶ ಮಾಡಬೇಕು. ಅದುವರೆಗೂ ಹಗಲು ರಾತ್ರಿ ಉಪವಾಸ ಧರಣಿ ಮಾಡುವುದಾಗಿ ಅವರು ತಿಳಿಸಿದರು.