Advertisement

ಏ.10ರವರೆಗೆ ಕಾಲುವೆಗೆ ನೀರು

07:47 PM Nov 25, 2019 | |

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವುದಕ್ಕೆ ಸಂಬಂ ಧಿಸಿದಂತೆ ಮೊದಲು 2020ರ ಮಾ. 31ರ ವರೆಗೂ ಐಸಿಸಿ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ ರೈತರಿಂದ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಪುನಃ ಏ. 10ರ ವರೆಗೂ ಎಡದಂಡೆ ನಾಲೆಗೆ ಬೆಳೆ ಹಾಗೂ ಕುಡಿಯಲು ನೀರು ಬಿಡುವ ಕುರಿತು ತುಂಗಭದ್ರಾ ನೀರಾವರಿ ಮುನಿರಾಬಾದ್‌ ವೃತ್ತದಿಂದ ಪ್ರಕಟಣೆ ಹೊರಡಿಸಿದೆ.

Advertisement

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ. 1ರಿಂದ 31ರವರೆಗೆ 3,800 ಕ್ಯೂಸೆಕ್‌ನಂತೆ ಈ ಅವಧಿ ಯಲ್ಲಿ ಡಿ. 15 ರಂದು ಬೆಳಗ್ಗೆ 8 ರಿಂದ ಡಿ. 19 ಬೆಳಗ್ಗೆ 8 ಗಂಟೆವರೆಗೆ ವಿತರಣಾ ಕಾಲುವೆ ಸಂಖ್ಯೆ 1ರಿಂದ 16 ಮತ್ತು 49, 51, 52, 54, 55, 56ರವರೆಗೆ, ಡಿ. 19ರಂದು ಬೆಳಗ್ಗೆ 8ರಿಂದ ಡಿ. 23ರಂದು ಬೆಳಗ್ಗೆ 8 ಗಂಟೆವರೆಗೆ ವಿತರಣಾ ಕಾಲುವೆ 17ರಿಂದ 25, 36, 37, 38, 40, 41, 42, 44, 45, 46, 48 ರವರೆಗೆ, ಡಿ. 23ರಂದು ಬೆಳಗ್ಗೆ 8ರಿಂದ ಡಿ. 27ರ ಬೆಳಗ್ಗೆ 8 ಗಂಟೆಯವರೆಗೆ ವಿತರಣಾ ಕಾಲುವೆ 27 ರಿಂದ 34, 62, 63,65,66, 69, 71/ಎ, 73, 74, 78, 79, 76 ರವರೆಗೆ ಅವುಗಳನ್ನು ಬಂದ್‌ ಮಾಡಿ ಮೈಲ್‌-104ರ ಸಮತೋಲನ ಜಲಾಶಯಕ್ಕೆ ಪೂರೈಕೆ ಮಾಡಿ ಸಂಗ್ರಹಿಸಿ ಯರಮರಸ್‌ ವಿಭಾಗದ ಅಚ್ಚುಕಟ್ಟಿನಲ್ಲಿ ನಿಂತಿರುವ ಬೆಳೆಗಳನ್ನು ಸಂರಕ್ಷಿಸುವುದು ಹಾಗೂ ರಾಯಚೂರು ಮತ್ತು ಇತರೆ ಕುಡಿಯುವ ನೀರು ಯೋಜನೆಗಳಿಗೆ ನೀರು ಒದಗಿಸಲಾಗುವುದು.

ಜ. 1ರಿಂದ 31ರವರೆಗೆ 3,400 ಕ್ಯೂಸೆಕ್‌ನಂತೆ 31 ದಿನಗಳವರೆಗೆ, ಫೆ. 1ರಿಂದ ಮಾರ್ಚ್‌ 31ರವರೆಗೆ 3 ಸಾವಿರ ಕ್ಯೂಸೆಕ್‌ನಂತೆ 60 ದಿನಗಳವರೆಗೆ, ಈ ಅವಧಿ ಯಲ್ಲಿ ಫೆ. 25ರಂದು ಬೆಳಗ್ಗೆ 8ರಿಂದ ಫೆ. 28ರ ಬೆಳಗ್ಗೆ 8ರವರೆಗೆ ವಿತರಣಾ ಕಾಲುವೆ ಸಂಖ್ಯೆ 1ರಿಂದ 16, 49, 51, 52, 54, 55, 56ರವರೆಗೆ, ಫೆ. 28ರ ಬೆಳಗ್ಗೆ 8ರಿಂದ ಮಾ. 2ರ ಬೆಳಗ್ಗೆ 8 ಗಂಟೆವರೆಗೆ ವಿತರಣಾ ಕಾಲುವೆ 17ರಿಂದ 25, 36, 37, 38, 40, 41, 42, 44, 45, 46, 48 ರವರೆಗೆ , ಮಾರ್ಚ್‌ 2ರ ಬೆಳಗ್ಗೆ 8ರಿಂದ ಮಾರ್ಚ್‌ 5ರ ಬೆಳಗ್ಗೆ 8ರವರೆಗೆ ವಿತರಣಾ ಕಾಲುವೆ 27ರಿಂದ 34, 62, 63, 65, 66, 69, 71/ಎ, 73, 74, 78, 79, 76 ರವರೆಗೆ ಬಂದ್‌ ಮಾಡಿ ಮೈಲ್‌ 104ರಲ್ಲಿ ಬರುವ ಸಮತೋಲನ ಜಲಾಶಯಕ್ಕೆ ಪೂರೈಸಿ ಸಂಗ್ರಹಿಸಿಟ್ಟುಕೊಂಡು ಯರಮರಸ್‌ ವಿಭಾಗದ ಅಚ್ಚುಕಟ್ಟಿನಲ್ಲಿ ನಿಂತಿರುವ ಬೆಳೆಗಳನ್ನು ಸಂರಕ್ಷಿಸುವುದು, ರಾಯಚೂರು ಮತ್ತು ಇತರೆ ಕುಡಿಯುವ ನೀರು ಯೋಜನೆಗಳಿಗೆ ನೀರು ಒದಗಿಸುವುದು.

ಏಪ್ರಿಲ್‌ 1ರಿಂದ 10 ರವರೆಗೆ 2 ಸಾವಿರ ಕ್ಯೂಸೆಕ್‌ನಂತೆ 10 ದಿನದವರೆಗೆ, ಏ.11ರಿಂದ ಮೇ 10ರವರೆಗೆ 100 ಕ್ಯೂಸೆಕ್‌ನಂತೆ 30 ದಿನಗಳವರೆಗೆ ವಿಜಯನಗರ ಕಾಲುವೆಗಳಿಗೆ (ವಿತರಣಾ ಕಾಲುವೆ 1ರಿಂದ 11ರ ವರೆಗೆ) ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವರೆಗೆ ಮಾತ್ರ ನೀರು ಹರಿಯಲಿದೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ 20ರವರೆಗೆ 700 ಕ್ಯೂಸೆಕ್‌ನಂತೆ 20 ದಿನಗಳವರೆಗೆ, ಡಿ. 21ರಿಂದ 31ರವರೆಗೆ ನೀರು ನಿಲುಗಡೆ, ಜನವರಿ 1ರಿಂದ 15 ರವರೆಗೆ 750 ಕ್ಯೂಸೆಕ್‌ನಂತೆ 10 ದಿನಗಳವರೆಗೆ ಅಥವಾ ಆಂಧ್ರಪ್ರದೇಶ ಕಾಲುವೆಯಡಿ ನೀರಿನ ಲಭ್ಯತೆ ಇರುವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.

Advertisement

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗಳಿಗೆ ಡಿ. 1ರಿಂದ 20 ರವರೆಗೆ 700 ಕ್ಯೂಸೆಕ್‌ನಂತೆ 20 ದಿನ, ಡಿ. 21ರಿಂದ ಜ. 10 ರವರೆಗೆ 500 ಕ್ಯೂಸೆಕ್‌ನಂತೆ 20 ದಿನಗಳವರೆಗೆ, ಜ. 11ರಿಂದ 31ರವರೆಗೆ 700 ಕ್ಯೂಸೆಕ್‌ನಂತೆ 20 ದಿನಗಳವರೆಗೆ, ಫೆ. 1ರಿಂದ ಮಾ. 31ರವರೆಗೆ 650 ಕ್ಯೂಸೆಕ್‌ನಂತೆ 59 ದಿನ, ಮೇ 1ರಿಂದ 10 ರವರೆಗೆ 400 ಕ್ಯೂಸೆಕ್‌ನಂತೆ 10 ದಿನಗಳವರೆಗೆ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಅನುಸಾರ ನೀರು ಹರಿಯಲಿದೆ.

ರಾಯ ಬಸವಣ್ಣ ಕಾಲುವೆಗೆ ಡಿ. 1ರಿಂದ ಜ. 31ರವರೆಗೆ ನೀರು ನಿಲುಗಡೆ ಫೆ. 1ರಿಂದ ಮೇ 31ರವರೆಗೆ ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ ನೀರು ಹರಿಯಲಿದೆ. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 25 ಕ್ಯೂಸೆಕ್‌ನಂತೆ ಅಥವಾ ಕಾಲುವೆ ಮಟ್ಟ 1585 ಅಡಿ ತಲುಪವರೆಗೆ ಈ ಕಾಲುವೆಯ ನೀರಿನ ಲಭ್ಯತೆ ಇರುವರೆಗೆ ಮಾತ್ರ. ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸಲಿದೆ.

ಈ ಅವಧಿಯಲ್ಲಿ ಕಾಲುವೆಯಲ್ಲಿ ನೀರು ಹರಿಸುವಾಗ, ನಾನಾ ನಗರ, ಪಟ್ಟಣ ಮತ್ತು ಇತರೆ ಕಾಲುವೆ ಅವಲಂಬಿತ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸಲು ಹಾಗೂ ಮುಂದಿನ ಬೇಸಿಗೆ ಅವ ಗೆ ಅವಶ್ಯವಿರುವ ನೀರಿನ ಪ್ರಮಾಣ ಪೂರೈಸಿ ಸಂಗ್ರಹಿಸಲು ಸಂಬಂ ಧಿಸಿದ ನೀರಾವರಿ ಇಲಾಖೆಗಳಿಗೆ ಹಾಗೂ ಜಿಲ್ಲಾಧಿಕಾರಿಳಿಗೆ ನಿರ್ದೇಶಿಸಿ ಕ್ರಮ ಜರುಗಿಸಲು ಕ್ರಮ ಕೈಗೊಂಡಿದೆ ಎಂದು ಮುನಿರಾಬಾದ್‌ ನೀರಾವರಿ ವೃತ್ತವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮಧ್ಯೆ ಅಗತ್ಯಕ್ಕೆ ತಕ್ಕಂತೆ ವಿತರಣಾ ಕಾಲುವೆಗಳನ್ನು ಬಂದ್‌ ಮಾಡಿ ಕೊನೆಯ ಭಾಗದ ರೈತರಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ. ಏ. 11ರಿಂದ ಮೇ 5ರ ತನಕ ಎಡದಂಡೆ ಕಾಲುವೆಯ 1ರಿಂದ 11ಎ ವಿತರಣಾ ಕಾಲುವೆ ವ್ಯಾಪ್ತಿಯ ವಿಜಯನಗರ ಕಾಲುವೆಗಳಿಗೆ ಪ್ರತಿದಿನ 100 ಕ್ಯೂಸೆಕ್‌ ನಂತೆ ನೀರು ಪೂರೈಸಲಾಗುತ್ತದೆ ಎಂದು ಸರಕಾರ ಪ್ರಕಟಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next