Advertisement

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

03:47 PM Oct 02, 2024 | Team Udayavani |

■ ಉದಯವಾಣಿ ಸಮಾಚಾರ
ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಜನಿಸಿದ್ದ ಮಗುವು ಹೆಣ್ಣೆಂದು ಹೇಳಿದ್ದ ಆಸ್ಪತ್ರೆಯ ವೈದ್ಯರು,
ಆ ಮಗು ಚಿಕಿತ್ಸೆ ವೇಳೆ ಸತ್ತಿದ್ದರಿಂದ ನಿಮ್ಮ ಮಗು ಸತ್ತಿದೆ ಎಂದು ಗಂಡು ಮಗುವನ್ನು ತಾಯಿಯ ಕೈಗೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿಸಿದೆ.

Advertisement

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಳ್ಳಿ ಗ್ರಾಮದ ನಿವಾಸಿ ಗೌರಿ ಎನ್ನುವ ಗರ್ಭಿಣಿ ಕೊಪ್ಪಳದ ತಾಯಿ ಮತ್ತು ಹೆರಿಗೆ ಆಸ್ಪತ್ರೆಗೆ
ಸೆ.23ರಂದು ದಾಖಲಾಗಿದ್ದರು. ಸೆ.25ರಂದು ಹೆರಿಗೆಯಾಗಿತ್ತು.

ಹೆರಿಗೆಯಾದ ವೇಳೆ ನಿಮಗೆ ಹೆಣ್ಣು ಮಗು ಜನಿಸಿದೆ, ತೂಕ ಕಡಿಮೆಯಿದೆ ಎಂದು ಹೇಳಿ ಮಕ್ಕಳ ವಿಶೇಷ ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ, ಮಂಗಳವಾರ ಆ ಮಗುವು ಸಾವನ್ನಪ್ಪಿದೆ. ಆಗ ಆಸ್ಪತ್ರೆಯ ವೈದ್ಯರು ನಿಮ್ಮ ಮಗು ಸಾವನ್ನಪ್ಪಿದೆ ಎಂದು ಹೇಳಿ ತಾಯಿಗೆ ಹಾಗೂ ಸಂಬಂಧಿಕರಿಗೆ ಗಂಡು ಮಗುವನ್ನು ಕೊಟ್ಟಿದ್ದಾರೆ.

ಮಗು ನೋಡಿದ ತಾಯಿ ಹಾಗೂ ಸಂಬಂಧಿಕರು ತಬ್ಬಿಬ್ಬಾಗಿ ನೀವು ನಮಗೆ ಹೆಣ್ಣು ಮಗು ಜನಿಸಿದೆ ಎಂದು ಹೇಳಿದ್ದೀರಿ. ಈಗ ಮೃತ ಗಂಡು ಮಗುವನ್ನು ಕೊಟ್ಟಿದ್ದೀರಿ ಎಂದು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಮಗುವಲ್ಲ ಎಂದಿದ್ದಾರೆ. ಅಚ್ಚರಿಯೆಂದರೆ ದಾಖಲಾತಿಯಲ್ಲೂ ಹೆಣ್ಣು ಮಗು ಎಂದೇ ನಮೂದು ಮಾಡಲಾಗಿದೆ. ಇದು, ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ. ಪಾಲಕರು ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಎಚ್ಚೆತ್ತ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಕೃಷ್ಣಾ ಓಂಕಾರ ಅವರು ವೈದ್ಯರು ಸಮಿತಿ ರಚನೆ ಮಾಡಿ ಏಲ್ಲಿ ತಪ್ಪಾಗಿದೆ ತಕ್ಷಣ ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ. ತಾಯಿ ಸೇರಿದಂತೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

Advertisement

ನಮ್ಮ ಆಸ್ಪತ್ರೆಗೆ ಗೌರಿ ಎನ್ನುವ ಗರ್ಭಿಣಿ ದಾಖಲಾಗಿದ್ದಳು. ಹೆರಿಗೆಯಾದ ವೇಳೆ ಮಗುವಿನ ತೂಕ ಕಡಿಮೆ ಇದೆ ಎಂದು ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಮಗು ಮಂಗಳವಾರ ಮೃತಪಟ್ಟಿದೆ. ಜನಿಸಿದ್ದಾಗ ಗಂಡು ಮಗು ಎಂದು ನಮೂದಿಸುವ ಬದಲು ಸಿಬ್ಬಂದಿ ತಪ್ಪಿನಿಂದ ಹೆಣ್ಣೆಂದು ನಮೂದು ಮಾಡಿದ್ದಾರೆ. ಮೃತಪಟ್ಟ ಬಳಿಕ ನಮಗೂ ಈ ಮಾಹಿತಿ ಗೊತ್ತಾಗಿದೆ. ಈ ಕುರಿತು ತನಿಖಾ ಸಮಿತಿ ರಚನೆ ಮಾಡಿ ವರದಿ ಕೊಡಲು ಹೇಳಿದ್ದೇನೆ. ವರದಿ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು.
●ಕೃಷ್ಣಾ ಓಂಕಾರ, ಜಿಲ್ಲಾ ಶಸ್ತ್ರಚಿಕಿತ್ಸಕ, ಜಿಲ್ಲಾಸ್ಪತ್ರೆ ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next