Advertisement

koppal: ಸಹಕಾರ ಕ್ಷೇತ್ರ ಬೆಳವಣಿಗೆಗೆ ಸಹಕರಿಸಿ-ಶೇಖರಗೌಡ ಮಾಲಿಪಾಟೀಲ್‌

06:26 PM Nov 21, 2023 | Team Udayavani |

ಕೊಪ್ಪಳ: ಸಹಕಾರಿ ಕ್ಷೇತ್ರವು ಸಂಘ ಸಂಸ್ಥೆಗಳು ಬೆಳೆಯಬೇಕೆಂದರೆ ಸರ್ವ ವರ್ಗದ ಜನರ ಸಹಕಾರವೂ ಅಗತ್ಯವಾಗಿ ಬೇಕಾಗುತ್ತದೆ ಎಂದು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್‌ ಹೇಳಿದರು.

Advertisement

ನಗರದ ಗಾಣಿಗ ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಸಹಕಾರ ಇಲಾಖೆ, ಜಯದೇವ್‌ ಹಿಂದುಳಿದ ವರ್ಗದವರ ಪತ್ತಿನ ಸಹಕಾರ ಸಂಘ ಗಾಣದ ಕಣ್ಣಪ್ಪ ಜ್ಯೋತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ, ಪುಷ್ಕರಣಿ ಮಹಿಳಾ ವಿವಿಧೊದ್ದೇಶ ಸಹಕಾರ ಸಂಘ, ಅಮೃತ ಗ್ರಾಹಕರ ಸಹಕಾರ ಸಂಘದ ಆಶ್ರಯದಲ್ಲಿ 6ನೇ ದಿನದ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಚಳವಳಿ ಯಶಸ್ವಿಯಾಗಬೇಕಾದರೆ ಮಹಿಳೆಯರು, ಯುವಜನರು ಪಾಲ್ಗೊಳ್ಳುವುದು ಅತೀ ಮುಖ್ಯವಾಗಿದೆ. ನಾವೆಲ್ಲರೂ ಇಂತಹ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸರ್ಕಾರ ಮಹಿಳೆಯರು, ಯುಜನರು ಮತ್ತು ದರ್ಬಲ ವರ್ಗದವರಿಗೆ ಕೊಡಮಾಡುವ ಸೌಲಭ್ಯಗಳನ್ನು ಪಡೆದು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ಆರ್‌ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಶರಣಪ್ಪ ಹ್ಯಾಟಿ ಮಾತನಾಡಿ, ಇಂದಿನ ಯುವಕರೇ ನಾಳಿನ ಭದ್ರ ಬುನಾದಿಗಳು. ಈ ನಿಟ್ಟಿನಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ನಾವು ನಿವೆಲ್ಲರೂ ಕೈ ಜೊಡಿಸಿ, ಸಹಕಾರ ಕ್ಷೇತ್ರವನ್ನು ಉತ್ತಂಗಕ್ಕೆ ತೆಗೆದುಕೊಂಡು ಹೋಗಬೇಕು. ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಅಮರೇಶ ಉಪಲಾಪುರ ಮಾತನಾಡಿ, ಮಹಿಳೆಯರು ಮತ್ತು ಯುವಜನರನ್ನು ಮುಖ್ಯವಾಹಿನಿಗೆ ತರುವುದು ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಹೊಸ ಹೊಸ ಯೋಜನೆಗಳನ್ನು ಸಹಕಾರ ಸಂಘಗಳಲ್ಲಿ ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಹಕಾರ ಕ್ಷೇತ್ರವನ್ನು ಬಲಪಡಿಸೋಣ ಎಂದರು.

ಜಯದೇವ ಹಿಂದುಳಿದ ವರ್ಗಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್‌.ಸಿ. ಗೌಡರ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಚೌಡಮ್ಮ ಚೌದ್ರಿ, ಸಹಕಾರ ರತ್ನ ಪುರಸ್ಕೃತರಾದ ಕೆ. ಬಸವರಾಜ ಹಿಟ್ನಾಳ, ಅಮರೇಶ ಉಪಲಾಪುರ ಅವರನ್ನು ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳು ಸಹಾಯಕ ನಿಬಂಧಕ ಪ್ರಕಾಶ ಸಜ್ಜನ್‌, ಸಾವಿತ್ರಿ ಮುಜುಮದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕರಾದ ತೋಟಪ್ಪ ಎಚ್‌. ಕಾಮನೂರು ಅವರು ಸಹಕಾರ ಸಪ್ತಾಹ ಆಚರಣೆಯ ಮೂಲ ಉದ್ದೇಶ ಹಾಗೂ ಸಹಕಾರ ಸಪ್ತಾಹದ ಆಚರಣೆಯ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಆರ್‌ಕೆಡಿಸಿಸಿ ನಿರ್ದೇಶಕ ಕೆ. ಬಸವರಾಜ ಹಿಟ್ನಾಳ, ರಾಜೇಂದ್ರಕುಮಾರ ಶೆಟ್ಟರ್‌, ಪಿಎಸ್‌ಡಿ ಬ್ಯಾಂಕ್‌ ಅಧ್ಯಕ್ಷ ಗವಿಸಿದ್ದಪ್ಪ ಹುಳ್ಳಿ, ಗಾಣಿಗ ಕಣ್ಣಪ್ಪ ಜ್ಯೋತಿ ಪತ್ತಿನ ಸಹರ್ಕಾರಿ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕರಾದ ಶಕುಂತಲಾ ಹುಡೇಜಾಲಿ, ಮಾರುತಿ ಅಂಗಡಿ, ಜಯದೇವ್‌ ಹಿಂದುಳಿದ ವರ್ಗದವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿರೂಪಾಕ್ಷಪ್ಪ ನೆಲಜೇರಿ, ಸಹಕಾರಿಗಳಾದ ರಮೇಶ ಕವಲೂರು, ಶಾಂಭವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಗಿರಿಜಮ್ಮ ಕನಗೇರಿಮಠ, ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಹಾಲಯ್ಯ ಹುಡೇಜಾಲಿ ಸೇರಿದಂತೆ ವಿವಿಧ ಸಂಘಗಳ ಅಧ್ಯಕ್ಷರು, ಸಿಇಒಗಳು ಸೇರಿ ಹಲವರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಮಾ ಪ್ರಾಥಿಸಿದರು. ಜಿಲ್ಲಾ ಸಹಕಾರ ಯೂನಿಯನ್‌ ವ್ಯವಸ್ಥಾಪಕ ರಾಜಶೇಖರ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ನಾಗರತ್ನಾ ವೀರಣ್ಣ ಸ್ವಾಗತಿಸಿದರು. ಬಸವರಡ್ಡಿ ರಡ್ಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next