ಕೊಪ್ಪಳ: ವಿವಿಧ ಘಟನೆಗಳನ್ನು ಖಂಡಿಸಿ 60ಕ್ಕೂ ಹೆಚ್ಚು ಸಂಘಟನೆಗಳು ಕೊಪ್ಪಳ ಬಂದ್‌ಗೆ ಕರೆ ನೀಡಿದ್ದು ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಗಡಿ ಮುಂಗಟ್ಟು ಗಳು ಬಂದ್ ಆಗಿದ್ದು ಬಸ್ ಸಂಚಾರ ಸ್ಥಗಿತಗೊಂಡಿವೆ. ಜಿಲ್ಲಾದ್ಯಂತ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.
ವಿಜಯಪುರದ ಬಾಲಕಿ ದಾನಮ್ಮಳ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ವಿರೋಧಿ ಸಿ, ಕೇಂದ್ರ ಸಚಿವ ಅನಂತ ಕುಮಾರಹೆಗಡೆ, ಗೋ ಮಧುಸೂದನ ಸಂವಿಧಾನವಿರೋ ಧಿ ಹೇಳಿಕೆಗಳನ್ನು ಖಂಡಿಸಿ, ಕೋರೆಗಾಂವ್ ನ 200ನೇ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಗಲಭೆ ಹತ್ಯೆಯನ್ನು ಖಂಡಿಸಿ ಹಾಗೂ 2000ರಿಂದ ಕರಾವಳಿ ಭಾಗದಲ್ಲಿ ನಡೆದಿರುವ ಹತ್ಯೆಗಳ ಹಾಗೂ ಅದರ ಹಿಂದಿರುವ ರಾಜಕೀಯ ಹುನ್ನಾರಗಳ ಸಮಗ್ರ ತನಿಖೆಗಾಗಿ ಆಗ್ರಹಿಸಿ ಕೊಪ್ಪಳ ಬಂದ್‌ಗೆ ಕರೆನೀಡಲಾಗಿದೆ.
ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ದಾನಮ್ಮ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯಾ ವಿರೋ ಧಿ ವೇದಿಕೆಯಡಿ ಕೊಪ್ಪಳದಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಕರವೇ ಯುವ ಘಟಕದಿಂದ ವಿನೂತನ ಪ್ರತಿಭಟನೆ
ನಗರ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಕರವೇ ಯುವಘಟಕದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಶರ್ಟ್‌ಗಳನ್ನು ಹರಿದು ಹಾಕಿ ಅರೆ ಬೆತ್ತಲೆಯಾಗಿ ವಿನೂತನ ಪ್ರತಿಭಟನೆ ನಡೆಸಿದರು.