ನಿರ್ಮೂಲನೆಯಾಗಬೇಕು ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಸಿಇಒ ಅರವಿಂದ ಸುತಗುಂಡಿ ಅವರು ಹೇಳಿದರು.
Advertisement
ಸುಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದ ವೇಳೆ ಮಕ್ಕಳ ಮತ್ತು ಮಹಿಳೆಯರ ಸುರಕ್ಷತಾ ಜಾಗೃತಿ ಮತ್ತುಸಮಾಜದ ಅನಿಷ್ಠ ದೇವದಾಸಿ ಪದ್ಧತಿ ಕುರಿತು ಶನಿವಾರದಿಂದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವರ ಹೆಸರಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಬಲಿ ತೆಗೆದುಕೊಳ್ಳುವ ದೇವದಾಸಿ ಪದ್ಧತಿಯಂತ ಅಂಧ ಆಚರಣೆಗಳು ಮಕ್ಕಳ ಮತ್ತು ಮಹಿಳೆಯರ ಮೇಲೆ ದುಷ್ಟರಿಣಾಮವನ್ನುಂಟು ಮಾಡುತ್ತದೆ. ಬಾಲ್ಯವಿವಾಹ ಪದ್ಧತಿ ನಿಲ್ಲಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು.
Related Articles
Advertisement
ಜಾಗೃತಿ ಕಾರ್ಯಕ್ರಮದಲ್ಲಿ ಅನಿಷ್ಠ ಪದ್ಧತಿಗಳ ಕುರಿತು ಜಾಗೃತಿ ಮೂಡಿಸಲು ಆಟೋ ಪ್ರಚಾರ ಮಾಡಲಾಯಿತು. ಮಾಹಿತಿ ಕೇಂದ್ರದ ಮೂಲಕ ಹಾಗೂ ಕರ ಪತ್ರಗಳನ್ನು ವಿತರಿಸುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಕೊಪ್ಪಳದ ದೇವದಾಸಿ ಪುನರ್ವಸತಿ ಯೋಜನಾ ಧಿಕಾರಿ ದಾದೇಸಾಬ್ ಎಚ್., ಸಕ್ಕುಬಾಯಿ ಎಸ್.ಎಚ್., ಗಂಗಾವತಿ ತಾಲೂಕಿನದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಭೀಮಣ್ಣ ಟಿ.ಜಿ., ಯಲಬುರ್ಗಾ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾ ಧಿಕಾರಿ ರೇಣುಕಾ ಎಂ. ಕುಷ್ಟಗಿ, ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾ ಧಿಕಾರಿ ಮರಿಯಪ್ಪ ಎಂ. ಮತ್ತು ದೇವದಾಸಿ ಯೋಜನೆಯ ಸ್ವಯಂ ಸೇವಕರು ಹಾಗೂ ಸಖೀ ಒನ್ ಸ್ಟಾಪ್ ಸೆಂಟರ್ ಮಲ್ಟಿಪರ್ಪಸ್ ವರ್ಕರ್ ಸರೋಜಾ ಹಿರೇಮಠ ಅವರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.