ಕೊಪ್ಪಳ: ಮದುವೆಯಾಗಿ ಕೆಲವೇ ವರ್ಷಗಳಲ್ಲಿ ವೈ ಮನಸ್ಸುಗಳಿಂದ ಜಿಲ್ಲೆಯ ವಿವಿಧ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 14 ಜೋಡಿಗಳಿಗೆ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶರು ಮನವೊಲಿಕೆ ಮಾಡಿ ಪತಿ-ಪತ್ನಿಗೆ ಬುದ್ದಿ ಹೇಳಿದ್ದಲ್ಲದೇ ಸಂಧಾನ ಮಾಡಿ ಮತ್ತೆ ಕುಟುಂಬದ ಬೆಸುಗೆ ಭಾಗ್ಯ ಕರುಣಿಸಿದರು.
Advertisement
ಹೌದು.. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸಿ ಅವರು ವಿಶೇಷ ಮುತುವರ್ಜಿ ವಹಿಸಿ ಸೆ.14ರಂದು ಆಯೋಜನೆ ಮಾಡಿದ್ದ ರಾಷ್ಟೀಯ ಲೋಕ್ ಅದಾಲತ್ ಕಾರ್ಯಕ್ರಮವು ಇಂತಹ ವಿಶೇಷತೆಯ ಮೂಲಕ ಹೊಸ ಇತಿಹಾಸ ಬರೆಯಿತು. ರಾಜೀ ಸಂಧಾನದ ಮೂಲಕ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗಿದ್ದು ಅದಾಲತ್‌ನ ವಿಶೇಷತೆಯಾಗಿತ್ತು.
ಹಾಗೂ ವಕೀಲರು ಆಪ್ತ ಸಮಾಲೋಚನೆ ಮೂಲಕ 14 ಜೋಡಿಗಳ ಸಂಸಾರದ ಅಪಸವ್ಯ ಹೋಗಲಾಡಿಸಿದರು. ನ್ಯಾಯಾಧೀಶರು ಮತ್ತು ವಕೀಲರು ಆ ಜೋಡಿಗಳಿಗೆ ಅರಿವಿನ ಜ್ಞಾನ ಮೂಡಿಸಿದರು. ಅಜ್ಞಾನದ ದಾರಿ ತಪ್ಪಿಸಿ ಜೀವನದ ಪಯಣದತ್ತ ಸಾಗಲು ತಿಳಿ ಹೇಳಿದರು. ಎಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ವಕೀಲರ ಸಮ್ಮುಖದಲ್ಲಿ ಕೋರ್ಟ್ ಆವರಣದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಜೋಡಿ ಮತ್ತೆ ಹೂವಿನ ಹಾರ ಬದಲಿಸಿಕೊಂಡು ಸಂಸಾರದ ಮತ್ತೂಂದು ಹೆಜ್ಜೆ ಹಾಕಿದರು.
Related Articles
ಪ್ರಕರಣಗಳ ಪೈಕಿ 3,328 ಪ್ರಕರಣ ಇತ್ಯರ್ಥ ಮಾಡಲಾಯಿತು.
Advertisement
ವಿಮೆ, ನೀರಿನ ಬಿಲ್, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣ ಇತ್ಯರ್ಥ ಮಾಡಲಾದ ಒಟ್ಟು ಮೌಲ್ಯ 55,38,75,322 ಆಗಿದೆ ಹಾಗೂ ಪೂರ್ವ ದಾವೇ ಪ್ರಕರಣಗಳಿಗೆ ಸಂಬಂಧಿ ಸಿದಂತೆ ಒಟ್ಟು 35,403 ಪ್ರಕರಣಗಳ ಪೈಕಿ 32,393 ಪ್ರಕರಣ ಇತ್ಯರ್ಥಪಡಿಸಲಾಗಿದೆ.
ಇದರ ಒಟ್ಟು ಮೌಲ್ಯ 2,40,85,455 ಇದ್ದು, ಒಟ್ಟು 39,583 ಪ್ರಕರಣಗಳ ಪೈಕಿ 35,721 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇತ್ಯರ್ಥಪಡಿಸಿದ ಒಟ್ಟು ಮೌಲ್ಯ 57,79,60,777 ರೂ.ನಷ್ಟಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್ ದರಗದ ಅವರು ತಿಳಿಸಿದ್ದಾರೆ.