ಮುಂಬಯಿ: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಮುಂಬಯಿ ಅಂಗ ಸಂಸ್ಥೆಯ 8ನೇ ವಾರ್ಷಿಕ ಮಹಾಸಭೆ ಹಾಗೂ ಶ್ರೀ ಸತ್ಯನಾರಾಯಣ ಮಹಾ ಪೂಜೆಯು ಸೆ. 3ರಂದು ಬೆಳಗ್ಗೆ ಚೆಂಬೂರು ಛೆಡ್ಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪುರೋಹಿತ ಸುಬ್ರಹ್ಮಣ್ಯ ಐತಾಳ್ ಅವರು ಮುಂಬಯಿ ಅಂಗ ಸಂಸ್ಥೆಯ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆ ನೆರವೇರಿಸಿ ಅನುಗ್ರಹಿಸಿದರು. ರವಿ ರಾವ್ ಮತ್ತು ವೀಣಾ ಆರ್. ರಾವ್ ದಂಪತಿ ಪೂಜಾದಿಗಳಲ್ಲಿ ಸಹಕರಿಸಿದರು. ಅತ್ಯಧಿಕ ಸಂಖ್ಯೆಯಲ್ಲಿ ಸಂಸ್ಥೆಯ ಸದಸ್ಯರು, ಕೂಟದ ಬಂಧುಗಳು ಪೂಜಾದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಪೂರ್ವಾಹ್ನ ಸಂಸ್ಥೆಯ ಅಧ್ಯಕ್ಷ ಯು. ಎನ್. ಐತಾಳ್ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಿತು. ಮುಂಬಯಿ ಅಂಗ ಸಂಸ್ಥೆಯ ಉಪಾಧ್ಯಕ್ಷ ಪಿ. ವಿ. ಐತಾಳ, ಜೊತೆ ಕಾರ್ಯದರ್ಶಿ ನಾಗರತ್ನ ಹೊಳ್ಳ, ಆಡಳಿತ ವಿಶ್ವಸ್ಥ ಸದಸ್ಯರಾದ ಎಚ್. ಕೆ. ಕಾರಂತ್ ಮತ್ತು ರಮೇಶ್ ಎಂ. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮತ್ತು ಕೂಟ ಬ್ರಾಹ್ಮಣರ ಮುಖವಾಣಿ ಗುರು ನರಸಿಂಹವಾಣಿ ತ್ತೈಮಾಸಿಕದ ಸಂಪಾದಕ ಪಿ. ಸಿ. ಎನ್. ರಾವ್ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ವರ್ಷಾವಧಿ ಕಾರ್ಯಕ್ರಮಗಳ ಸ್ಥೂಲ ಮಾಹಿತಿ ನೀಡಿದರು. ಕೋಶಾಧಿಕಾರಿ ದೀಪಕ್ ಕಾರಂತ್ ಗತವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ಮಂಡಿಸಿದರು.
ಮಹಾಸಭೆಯಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕೇಂದ್ರ ಸಮಿತಿಯ ಅಧ್ಯಕ್ಷ ಪಿ. ವೆಂಕಟ ರಾವ್, ಬಾಂಬೇ ಸೌತ್ ಕೆನರಾ ಬ್ರಾಹ್ಮಿನ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ತ ಕಾರ್ಯಾಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಪ್ರಧಾನ ಅಭ್ಯಾಗತರಾಗಿ ಹಾಜರಿದ್ದು, ಮುಂಬಯಿ ಅಂಗ ಸಂಸ್ಥೆಯ ಪದಾಧಿಕಾರಿಗಳು ಅವರನ್ನು ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಗೌರವಿ
ಸಿದರು. ಅತಿಥಿಗಳು ಸಂದ ಭೋìಚಿತವಾಗಿ ಮಾತ ನಾಡಿದರು ಮತ್ತು ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ವಾರ್ಷಿಕವಾಗಿ ಕೊಡಮಾಡುವ ಪ್ರತಿಭಾ ಪುರಸ್ಕಾರವನ್ನು ಕು| ಅನಿಷಾ ಆರ್. ಹೆರಳ, ರಕ್ಷಿತ್ ರವಿ ರಾವ್, ಶಶಾಂಕ್ ಪತ್ತುಮುಡಿ, ಕು| ಪವಿತ್ರಾ ಎಸ್. ಹೊಳ್ಳ, ಕು| ಅರ್ಪಿತಾ ಬಂಟ್ವಾಳ, ವಿನಯ ರವಿ ಕಾರಂತ್ ಅವರಿಗೆ ಪ್ರದಾನಿಸಿದರು. ಅಲ್ಲದೆ ಮಕ್ಕಳಿಗೆ ವೇತನವನ್ನಿತ್ತು ಅಭಿನಂದಿಸಲಾಯಿತು. ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರನೇಕರು ಹಾಜರಿದ್ದರು. ನಾಗರತ್ನ ಹೊಳ್ಳ ಪ್ರಾರ್ಥನೆಗೈದರು. ಪಿ. ವಿ. ಐತಾಳ ಅವರು ಕಾರ್ಯಕ್ರಮ ನಿರ್ವಹಿಸಿ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಪಿ. ಸಿ. ಎನ್. ರಾವ್ ವಂದಿಸಿದರು.
ಚಿತ್ರ – ವರದಿ: ರೋನ್ಸ್ ಬಂಟ್ವಾಳ್