ಕೂಡ್ಲಿಗಿ: ತಾಲೂಕಿನಲ್ಲಿ ಮೂರು ಉತ್ತಮ ಮಳೆಯಾಗಿದ್ದು ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆ ಚುರುಕುಗೊಂಡಿದೆ. ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿದ್ದು ಕೂಡ್ಲಿಗಿ, ಕೊಟ್ಟೂರು, ಗುಡೇಕೋಟೆ, ಹೊಸಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಈ ವರ್ಷ 80,000 ಹೆಕ್ಟೇರ್ ಪ್ರದೇಶಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದು, ಇದರಲ್ಲಿ ಮೆಕ್ಕೆಜೋಳ- 17,555 ಹೆಕ್ಟೇರ್, ಹೈಬ್ರೀಡ್ ಜೋಳ -4215 ಹೆಕ್ಟೇರ್, ಭತ್ತ-
450, ಶೇಂಗಾ -42635, ಸಜ್ಜೆ-2600, ರಾಗಿ-2100, ದ್ವಿದಳ ಧಾನ್ಯ- 6000 ಹೆಕ್ಟೇರ್ ಬಿತ್ತನೆ ನಿರೀಕ್ಷೆ ಇದೆ. ರೋಹಿಣಿ ಮಳೆಗೆ ರೈತರು ಜೋಳ ಬಿತ್ತನೆ ಕಡೆಗೆ ಹೆಚ್ಚಿನ ಗಮನಹರಿಸಿದ್ದಾರೆ.
ಆನ್‌ಲೈನ್ ಸೌಲಭ್ಯ: ಈ ವರ್ಷವು ರೈತರು ಆನ್‌ಲೈನ್‌ನಲ್ಲಿ ಸೂಕ್ತ ದಾಖಲೆಗಳನ್ನುಒದಗಿಸಿ ಬಿತ್ತನೆ ಬೀಜ ಪಡೆಯಬಹುದಾಗಿದೆ ಎಂದು ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ರೈತರು ಅಧಿಕೃತ ಮಾರಾಟಗಾರರಲ್ಲಿ ಕಡ್ಡಾಯವಾಗಿ ರಸೀದಿ ಪಡೆದು ಬಿತ್ತನೆಗೆ ಬೀಜ ಗೊಬ್ಬರ ಖರೀದಿಸಬೇಕು. ಕೆಲ ಮಾರಾಟಗಾರರು ಆಮಿಷಕೊಳ್ಳಗಾಗಬೇಡಿ. ದುರಾಸೆಯಿಂದ ನಕಲಿ ಬೀಜಗಳನ್ನು ಮಾರುತ್ತಿರುತ್ತಾರೆ. ಅಂಥವರ ಬಗ್ಗೆ ಎಚ್ಚರದಿಂದರಬೇಕು. ಖಾಸಗಿ ಅಂಗಡಿಯವರು ಕಳಪೆ ಬೀಜ ಮತ್ತು ಅನಧಿಕೃತ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.
ತಾಲೂಕಿನಲ್ಲಿ 4 ರೈತ ಸಂಪರ್ಕ ಕೆಂದ್ರಗಳಲ್ಲಿ 1200 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಮುಂಗಾರಿಗೆ ಬೇಕಾದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಎನ್.ವಿ. ಪ್ರಕಾಶ, ಸಹಾಯಕ ಕೃಷಿ
ನಿರ್ದೇಶಕ ಅಧಿಕಾರಿ, ಕೂಡ್ಲಿಗಿ
ಕೆ. ನಾಗರಾಜ್