Advertisement

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ತುಬಾಕೆ

06:14 PM Jun 08, 2020 | Naveen |

ಕೂಡ್ಲಿಗಿ: ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ ಎಂದು ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರಗೇಂದ್ರ ತುಬಾಕೆ ಹೇಳಿದರು.

Advertisement

ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಬಸವೇಶ್ವರ ನಗರದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರವನ್ನು ಉಳಿಸಿ, ಬೆಳೆಸುವುದು ಪ್ರತಿ ಮನುಷ್ಯನ ಕರ್ತವ್ಯ. ಪರಿಸರವು ಮಾನವನ ಏಳ್ಗೆಗೆ ಸಕರಾತ್ಮಕವಾಗಿ ಕೊಡುಗೆ ನೀಡಿದೆ ಎಂದರು. ತಹಶೀಲ್ದಾರ್‌ ಎಸ್‌. ಮಹಾಬಲೇಶ್ವರ ಮಾತನಾಡಿ, ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿ ತಮ್ಮ ತಮ್ಮ ಮನೆಗಳ ಮುಂದೆ ಸಸಿಯನ್ನು ನೆಟ್ಟು ಪೋಷಣೆ ಮಾಡಬೇಕು. ತನ್ನ ಉದ್ದಾರಕ್ಕಾಗಿ ಸಮತೋಲನವಾದ ಪರಿಸರ ಹುಡುಕುವತ್ತ ಮಾನವ ದಾಪುಗಾಲು ಹಾಕುತ್ತಿದ್ದಾನೆ. ಈಗಲಾದರೂ ಪರಿಸರದ ಕಾಳಜಿ ನಮ್ಮೆಲ್ಲರ ಹೊಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧಿಧೀಶರಾದ ಕೆ.ಎ. ನಾಗೇಶ, ಇ.ಒ. ಬಸಣ್ಣ, ವಲಯ ಅರಣ್ಯಾಧಿಕಾರಿ ರೇಣುಕ, ಪ.ಪಂ. ಮುಖ್ಯಾಧಿಕಾರಿ ಪಕೃದ್ದೀನ್‌ ಮತ್ತು ಕಿರಿಯ ಆರೋಗ್ಯ ನಿರೀಕ್ಷಕಿ ಲತಾ, ಶಾಸಕರ ಆಪ್ತ ಸಹಾಯಕ ಶ್ರೀಕಾಂತ ಮತ್ತು ಭೀಮಣ್ಣ ಗಜಾಪುರ, ಬಿ.ನಾಗರಾಜ, ಸೋಮಶೇಖರ್‌ ಆರಾಧ್ಯ, ಅಂಗಡಿ ವೀರೇಶ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next