Advertisement

ರಂಗೋಲಿ ಬಿಡಿಸಿ ಜನ ಜಾಗೃತಿ

06:59 PM May 10, 2020 | Naveen |

ಕೂಡ್ಲಿಗಿ: ಕೋವಿಡ್ ವೈರಸ್‌ ಕಣ್ಣಿಗೆ ಕಾಣದೆ ಮನುಷ್ಯನನ್ನು ಅತಿಕ್ರಮಿಸಿ ಸಾವಿಗೆ ಶರಣು ಮಾಡಬಲ್ಲದಾಗಿದೆ. ಆದ್ದರಿಂದ ಜನರು ಮಾಸ್ಕ್ ಮತ್ತು ಸ್ಯಾನಿಟೈಸರ್‌ ಬಳಕೆ ಮಾಡುತ್ತಾ ಅನಾವಶ್ಯಕ ಸುತ್ತಾಟ ನಿಲ್ಲಿಸಬೇಕೆಂದು ಸ್ನೇಹ ಸಂಸ್ಥೆ ನಿರ್ದೇಶಕ ಟಿ.ರಾಮಾಂಜನೇಯ ಹೇಳಿದರು.

Advertisement

ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸ್ನೇಹ ಸಂಸ್ಥೆ ಕಡೆಯಿಂದ ಗುಡ್‌ ಡೇ ಕಾರ್ಯಕ್ರಮದ ಮೂಲಕ ದಮನಿತ ಮಹಿಳೆಯರ ಮಕ್ಕಳು ಕೊರೊನಾ ರಂಗೋಲಿ ಬಿಡಿಸಿ ಜನರಿಗೆ ಅರಿವು ಮೂಡಿಸಿದರು. ಕಿಶೋರಿ ಸಂಘದ ಸುಗಮಕಾರ ರಾಧಾ ಮಾತನಾಡಿ ಹಳ್ಳಿಯಲ್ಲೂ ಸಹ ಕಿಶೋರಿಯರ ಸಂಘಟನೆ ಉದ್ದೇಶ ವಿವರಿಸಿದರು. ಈ ಸಂಘಟನೆಗಳಿಂದ 8 ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಮರಬ ಅಮ್ಮನಕೇರಿ ಹಿರೇಹೆಗ್ಡಾಳ, ಕೊಟ್ಟೂರು, ಕೂಡ್ಲಿಗಿಗಳಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು. ರಾಧಿಕಾ, ದೀಪಶ್ರೀ ಚಂದ್ರಕ್‌, ಚೈತ್ರ ಸಮಾನ, ಇಂದು, ಸುಚಿತ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next