Advertisement

ನಮ್ಮ ಬೆವರಿನ ಪಾಲು ಕೇಳುತ್ತಿದ್ದೇವೆ, ಮೀಸಲಾತಿ ಕೊಡಿ! ಪಂಚಮಸಾಲಿ ಪೀಠದ ಸ್ವಾಮೀಜಿ

01:20 PM Oct 29, 2020 | sudhir |

ಬೆಳಗಾವಿ: ಕೃಷಿಯನ್ನಷ್ಟೇ ನಂಬಿ ಕುಳಿತರೆ ಮುಂದೆ ಬದಲಾಗಲ್ಲ. ಹೀಗಾಗಿ ಮೀಸಲಾತಿ ಅಗತ್ಯ. ನಾವು ನಮ್ಮ ಬೆವರಿನ ಪಾಲನ್ನು ಕೇಳುತ್ತಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಹೇಳಿದರು.

Advertisement

ನಗರದಲ್ಲಿ ಬುಧವಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಆಗ್ರಹಿಸಿ ತಮ್ಮ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಮೀಸಲಾತಿಗಾಗಿ 20 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ.
ಸಹೋದರ ಸಮಾಜಗಳು ಸಂಘಟಿತರಾಗಿ ಸಾಮಾಜಿಕ ನ್ಯಾಯ ಪಡೆದಿವೆ. ನಮ್ಮ ಸಮಾಜ ಒಂದೇ ಬೆಳೆಯಬೇಕು ಎಂದು ಬಯಸಿದವರಲ್ಲ. ಆದರೆ ಇತರೆ ಸಮಾಜದವರು ಸರ್ಕಾರದ ಮೇಲೆ ಒತ್ತಡ ಹಾಕಿ ಮೀಸಲಾತಿ ಪಡೆದಿದ್ದರಿಂದ ನಾವೂ
ಹೋರಾಟಕ್ಕೆ ಇಳಿದಿದ್ದೇವೆ ಎಂದರು.

ಡಾ| ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಮೀಸಲಾತಿ ಅವಕಾಶ ಕಲ್ಪಿಸಿದ್ದಾರೆ. ಶಾಂತಿಯುತ ಮಾರ್ಗದಲ್ಲಿ ಹಕ್ಕು
ಪಡೆದುಕೊಳ್ಳಬೇಕಿದೆ. ದೇಶದ ಪ್ರಗತಿಗಾಗಿ ಪಂಚಮಸಾಲಿ ಸಮುದಾಯದ ಕೊಡುಗೆ ಅಪಾರವಾಗಿದೆ. ಹೀಗಾಗಿ ಸಮಾಜದ ಪ್ರಗತಿಗೆ ಸರ್ಕಾರಗಳು ಮೀಸಲಾತಿ ಕಲ್ಪಿಸುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕುಲಶಾಸ್ತ್ರಿಯ ಅಧ್ಯಯನಕ್ಕೆ ನಮ್ಮ ಸಮಾಜವನ್ನೂ ಪರಿಗಣಿಸುತ್ತಾರೆಂಬ ವಿಶ್ವಾಸ ನಮಗಿದೆ. ನಮ್ಮ ಸಮಾಜದವರೇ ಆದ ಬಿಎಸ್‌ವೈ ನಮ್ಮ ಬೇಡಿಕೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ :ಸಾಹಿತಿ ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣವಾಗಿದ್ದ ಗಂಗಾ ಕುಲಕರ್ಣಿ ವಿಷಸೇವಿಸಿ ಆತ್ಮಹತ್ಯೆ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಉಪಸಭಾಪತಿ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಲಕ್ಷ್ಮೀ ಹೆಬ್ಟಾಳಕರ, ಮಹಾಂತೇಶ ದೊಡಗೌಡರ, ಮುರುಗೇಶ ನಿರಾಣಿ, ವಿನಯ ಕುಲಕರ್ಣಿ, ಜಿಪಂ ಸದಸ್ಯೆ ರೋಹಿಣಿ ಪಾಟೀಲ,
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಕಾಂಗ್ರೆಸ್‌ ಮುಖಂಡ ಚನ್ನರಾಜ ಹಟ್ಟಿಹೊಳಿ, ನಂದಿಹಳ್ಳಿ ಹಾಲಪ್ಪ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next