ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನು ಬಿಟ್ಟು ಅಗಲಿದಾಗ ಇಡೀ ಕರುನಾಡು ದುಃಖತಪ್ತವಾಗಿತ್ತು. ಅವರವರ ಭಾಷೆಯಲ್ಲೇ ಭಾರತೀಯರನ್ನು ತಲುಪುತ್ತಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕೂ ನಲ್ಲಿಯೂ ಕನ್ನಡಿಗರು ಸೇರಿದಂತೆ ವಿವಿಧ ಭಾಷೆಯ ಜನರು ಪುನೀತ್ ರಾಜ್‌ಕುಮಾರ್ ಕುರಿತು ಹೆಚ್ಚು ಮಾತನಾಡಿದ್ದರಿಂದ ಅವರು ಈ ವರ್ಷ ಕೂ ನಲ್ಲಿ ಹೆಚ್ಚು ಉಲ್ಲೇಖಿಸಲಾದ ಸೆಲೆಬ್ರಿಟಿಯಾಗಿದ್ದಾರೆ.
ಪ್ರತಿ ಭಾರತೀಯರು ತಮ್ಮ ಆಯ್ಕೆಯ ಭಾಷೆಯಲ್ಲಿ ಆನ್‌ಲೈನ್‌ನಲ್ಲಿ ಮುಕ್ತವಾಗಿ ಅಭಿವ್ಯಕ್ತಿಸಲು ಅವಕಾಶ ಒದಗಿಸುವ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಅಪ್ಲಿಕೇಶನ್ ತನ್ನ ಮೊದಲ ‘ವಾಯ್ಸ್ ಆಫ್ ಇಂಡಿಯಾ’ ವರದಿಯನ್ನು ಬಿಡುಗಡೆ ಮಾಡಿದೆ. ಇದು ಭಾಷಾ ವೈವಿಧ್ಯವಿರುವ ಭಾರತೀಯರ ಅಭಿಪ್ರಾಯಗಳ ಕುರಿತು ಅನನ್ಯ ಒಳನೋಟಗಳನ್ನು ತೆರೆದಿಡುತ್ತದೆ.
ವೈವಿದ್ಯತೆ ಎನ್ನುವುದು ಆಲೋಚನೆಯಲ್ಲೆ ಮಿಳಿತಗೊಂಡಿದೆ ಎನ್ನುವುದನ್ನು ಇದು ತೋರಿಸುತ್ತದೆ. ವಿವಿಧ ಪ್ರದೇಶದ ಜನರು ಅವರವರ ಭಾಷೆ, ಅಲ್ಲಿನ ಸೊಗಡು, ಆ ಭಾಗದ ಜನರ/ಸೆಲೆಬ್ರಿಟಿಗಳ ಸಂಭ್ರಮಿಸುವ ಬಗೆಯನ್ನು ಈ ದತ್ತಾಂಶಗಳಿಂದ ಕಾಣಬಹುದು. ಭಾರತವು ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿದ್ದರೂ, ಎಲ್ಲಾ ಭಾರತೀಯರು ಆನ್‌ಲೈನ್‌ನಲ್ಲಿ ತಮ್ಮ ಮಾತೃಭಾಷೆಯಲ್ಲಿ ಅಭಿವ್ಯಕ್ತಿಸಬೇಕು ಎನ್ನುವ ಇಂಗಿತವನ್ನು ಎಂದು ‘ವಾಯ್ಸ್ ಆಫ್ ಇಂಡಿಯಾ’ ಪುನರುಚ್ಚರಿಸುತ್ತದೆ.
ಇದನ್ನೂ ಓದಿ:‘ರೈಡರ್’ ಚಿತ್ರವಿಮರ್ಶೆ: ಫ್ಯಾಮಿಲಿ ಪ್ಯಾಕೇಜ್ ನಲ್ಲಿ ಪ್ರೇಮ್ ಕಹಾನಿ
2021 ಕರ್ನಾಟಕದ ಜನರು ತಮ್ಮ ಮಾತೃಭಾಷೆಯಲ್ಲಿ ಆನ್‌ಲೈನ್‌ನಲ್ಲಿ ಸಕ್ರಿಯವಾಗಿ ಅಭಿವ್ಯಕ್ತಿಸಲು ಸಾದ್ಯವಾದ ವರ್ಷ. ಬಳಕೆದಾರರು ಕೂ ಒಪ್ಪಿಕೊಳ್ಳುವ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಅಷ್ಟೇ ಇದ್ದ ಡಿಜಿಟಲ್ ಅಭಿವ್ಯಕ್ತಿಯು ಕನ್ನಡದ ಸ್ವಾದವನ್ನು ಪಡೆದುಕೊಂಡಿತು. ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ವಿಷಯಗಳ ಕುರಿತು ಸಂವಾದಿಸಲು, ಚರ್ಚಿಸಲು ಮತ್ತು ತೊಡಗಿಸಿಕೊಳ್ಳಲು ಸಾಧ್ಯವಾಯಿತು. Koo ಆಪ್‌ನಲ್ಲಿ ಬಿಡುಗಡೆಯಾದ ಮೊದಲ ಭಾಷೆ ಕನ್ನಡ ಎನ್ನುವುದು ಕನ್ನಡಿಗರ ಹೆಮ್ಮೆಯಾಗಿದೆ.
ಕೊಹ್ಲಿಯ ಕನ್ನಡ ಕೂ
ಸಾಮಾಜಿಕ ಜಾಲತಾಣದಲ್ಲಿ ಎಂದೂ ಕನ್ನಡ ಬಳಸಿರದ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕನ್ನಡ ಕೂ ಈ ವರ್ಷದಲ್ಲೇ ಅತಿ ಹೆಚ್ಚು ಜನ ಇಷ್ಟಪಟ್ಟ ಕೂ ಆಗಿದೆ. ಕ್ರಿಕೆಟ್‌ನಿಂದ ಎಬಿ ಡಿವಿಲಿಯರ್ಸ್ ನಿವೃತ್ತಿಯ ಕುರಿತು ವಿರಾಟ್ ಕೊಹ್ಲಿ ಕನ್ನಡದಲ್ಲಿ ಕೂ ಮಾಡಿದ್ದರು. ಬೆಂಗಳೂರು ತಂಡ ಆರ್‌ಸಿಬಿಯಲ್ಲಿ ಎಬಿಡಿ ಸಹ ಆಟಗಾರನಾಗಿದ್ದ ವಿರಾಟ್ ಕೊಹ್ಲಿ ಆಪ್ ನಲ್ಲಿನ ಬಹು-ಭಾಷಾ ವೈಶಿಷ್ಟ್ಯಗಳನ್ನು ಬಳಸಿ ಕನ್ನಡದಲ್ಲಿ ಕೂ (ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ) ಮಾಡುವ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾಗಿದ್ದರು.
ಕನ್ನಡಿಗರು ಹೆಚ್ಚು ಕೂ ಮಾಡಿದ ವಿಷಯಗಳ ಇಣುಕುನೋಟ ಇಲ್ಲಿದೆ:
ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳು
#ಸಂಗೊಳ್ಳಿ ರಾಯಣ್ಣ, #100ಲಸಿಕೆ #ಕೆಂಪೇಗೌಡ-ಜಯಂತಿ #ಕನಕದಾಸಜಯಂತಿ ಹೀಗೆ ಕನ್ನಡದ ಪ್ರಮುಖ ವಿಷಯಗಳು ಕುರಿತು ಈ ವರ್ಷ ಹೆಚ್ಚು ಮಾತನಾಡಿದ್ದಾರೆ.
ಪೌರಾಣಿಕ ಯೋಧ ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ಕೂ- ಕನ್ನಡ ಸಮುದಾಯವು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು ಮತ್ತು ಭಾರತವು 100 ಕೋಟಿ ಲಸಿಕೆಯನ್ನು ಸಾಧಿಸಿದ ಮೈಲಿಗಲ್ಲನ್ನು ಆಚರಿಸಿತು. ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡ ಅವರ ಜನ್ಮದಿನದಂದು ಸಮುದಾಯವು ಶ್ರದ್ಧಾಂಜಲಿ ಸಲ್ಲಿಸಿತು ಮತ್ತು ಕನಕದಾಸ ಜಯಂತಿಯಂದು ಹೆಸರಾಂತ ಕವಿ ಮತ್ತು ಸಂಗೀತಗಾರ ಕನಕದಾಸರನ್ನು ಕುರಿತು ಮಾತಾಡಲಾಯಿತು.
ಇಂದು, ವೇದಿಕೆಯು 10 ಭಾಷೆಗಳಲ್ಲಿ ಲಭ್ಯವಿದೆ – ಹಿಂದಿ, ಮರಾಠಿ, ಕನ್ನಡ, ತೆಲುಗು, ಬೆಂಗಾಲಿ, ತಮಿಳು, ಅಸ್ಸಾಮಿ, ಗುಜರಾತಿ, ಪಂಜಾಬಿ ಮತ್ತು ಇಂಗ್ಲಿಷ್. ಇದು ಇತ್ತೀಚೆಗೆ 20 ಮಿಲಿಯನ್ ಡೌನ್‌ಲೋಡ್‌ಗಳ ಮೈಲಿಗಲ್ಲನ್ನು ತಲುಪಿದೆ ಮತ್ತು ಮುಂದಿನ ವರ್ಷದಲ್ಲಿ 100 ಮಿಲಿಯನ್ ಡೌನ್‌ಲೋಡ್‌ಗಳ ಗುರಿಯನ್ನು ಹೊಂದಿದೆ.