Advertisement

ಕೊಂಕಣಿ ತ್ರಿವೇಣಿ ಕಲಾ ಸಂಗಮ ಮುಂಬಯಿ 37ನೇ ಸ್ಥಾಪಕ ದಿನಾಚರಣೆ

05:30 PM Apr 09, 2017 | |

ಮುಂಬಯಿ: ನಾಟಕದಿಂದ ನಮ್ಮ ಸಂಸ್ಕೃತಿಯ ಅನಾವರಣವಾಗುತ್ತದೆ. ಅದನ್ನು ಇಂದಿಲ್ಲಿ ಕಿಕ್ಕಿರಿದು ತುಂಬಿದ ಕಲಾಭಿಮಾನಿ ಗಳಿಂದಲೇ ತಿಳಿಯ ಬಹುದು. ಯುವಜನತೆಯನ್ನು ಆಕರ್ಷಿಸುವತ್ತ ರಂಗಭೂಮಿ ಸಜ್ಜಾಗಬೇಕು.  ಯುವ ಪೀಳಿಗೆಯಿಂದ ಮಾತ್ರ ಸಮುದಾಯ, ಸಮಾಜದ ಭವಿಷ್ಯ  ಸಾಧ್ಯ. ಜಿಎಸ್‌ಬಿ ಸಮು ದಾಯದ ಚಿಂತನೆ ಹಾಗೂ ಮನೋಭಾವ ತುಂಬಾ ವಿಶಾಲ ವಾದದ್ದು. ಸುಶಿಕ್ಷಿತರಾಗಿದ್ದರೂ ಸಾಕ್ಷರತ, ಜಾಗತಿಕ ವಿದ್ವತ್ತು ಗಳಿಸಿ ಭವಿಷ್ಯತ್ತಿನ ಜನಾಂಗವನ್ನು ಪ್ರೇರೆಪಿಸುವ ಅಗತ್ಯವಿದೆ. ಮಂಗಳೂರಿನಲ್ಲಿ ವಿಶ್ವ  ಕೊಂಕಣಿ ಸೆಂಟರ್‌ಇದ್ದು ಇದಕ್ಕೆ ಭೇಟಿ ನೀಡಿ ಸಮುದಾಯದ ಪರಂಪರೆಗಳ ಅಧ್ಯಯನ ನಡೆಸಿ. ನಾನು ಕೊಂಕಣಿ ಎನ್ನುವ ಅಭಿಮಾನ ಬೆಳೆಸಿ ಮಾತೃಭಾಷೆ ಉಳಿಸಿ ಬೆಳೆಸಿ  ಎಂದು ಮಂಗಳೂರಿನ ಹಾಂಗ್ಯೋ ಐಸ್‌ಕ್ರೀಂ ಪ್ರೈವೇಟ್‌  ಲಿ. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರದೀಪ್‌ ಜಿ. ಪೈ   ತಿಳಿಸಿದರು.

Advertisement

ಬೊರಿವಿಲಿ ಪಶ್ಚಿಮದ ಪ್ರಬೋಧನರ್‌ ಠಾಕ್ರೆ ಸಭಾಗೃಹದಲ್ಲಿ ಎ. 8ರಂದು  ಕಲಾ ಪೋಷಕ ಸಂಸ್ಥೆ ಕೊಂಕಣಿ ತ್ರಿವೇಣಿ ಕಲಾ ಸಂಗಮ್‌ ಮುಂಬಯಿ ಸಂಸ್ಥೆಯ 37ನೇ ಸ್ಥಾಪಕ ದಿನಾಚರಣಾ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಉಪ ಉಪಸ್ಥಿತರಿದ್ದು ಅವರು ಮಾತನಾಡಿದರು.

ಅತಿಥಿಗಳಾಗಿ ಮಹಾನಗರದ ನ್ಯಾಯವಾದಿ ಎಂ. ವಿ. ಕಿಣಿ, ಎನ್‌ಕೆಜಿಎಸ್‌ಬಿ ಬ್ಯಾಂಕಿನ ಕಾರ್ಯಾಧ್ಯಕ್ಷ ಕಿಶೋರ್‌ ಡಿ. ಕುಲಕರ್ಣಿ, ಶ್ಯಾಮರಾವ್‌ ವಿಠಲ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಉದಯ ಕುಮಾರ್‌ ಗುರRರ್‌, ನ್ಯಾಚುರಲ್‌ ಐಸ್‌ಕ್ರೀಂ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಕಾರ್ಯಾಧ್ಯಕ್ಷ ರಘುನಂದನ್‌ ಎಸ್‌. ಕಾಮತ್‌, ಉದ್ಯಮಿಗಳಾದ ಕೆ. ಶ್ರೀನಿವಾಸ ಪ್ರಭು ಹಾಗೂ ಶೋಭಾ ಕುಲ್ಕರ್ಣಿ, ಸ್ಥಾನೀಯ ನಗರ ಸೇವಕ ಜಿತೇಂದ್ರ ಪಾಟೀಲ್‌ ಉಪಸ್ಥಿತರಿದ್ದು ಸಂಸ್ಥೆಯ ಸುದೀರ್ಘಾವಧಿಯ ಸೇವೆಯನ್ನು ಪ್ರಶಂಸಿ ತಂಡದ ಕಲಾವಿದರನ್ನು ಗೌರವಿಸಿದರು.

ಸಂಸ್ಕೃತಿಯಿಂದ ಸಂಸ್ಕಾರಯುತ ಜೀವನ ಸಾಧ್ಯ ರಘುನಂದನ್‌ ಕಾಮತ್‌ ಅವರು ಮಾತನಾಡಿ, ನಾನು ಐಸ್‌ಕ್ರೀಂ  ತಯಾರಿಸಲು ಮಾತ್ರ ಕಲಿತಿದ್ದೇನೆ. ಆ ಮೂಲಕ ಕಲಾ ಪೋಷಣೆಗೆ ಪ್ರೋತ್ಸಾಹಿಸುತ್ತಿದ್ದು, ಜಿಎಸ್‌ಬಿ ಸಮೂದಾಯದ ಸಂಸ್ಕೃತಿ, ತಿನಸು, ರೀತಿ ರಿವಾಜುಗಳ ಸ್ವಾದಯುಕ್ತ ರುಚಿಗಳನ್ನು ಐಸ್‌ಕ್ರೀಂ ಮೂಲಕ ಮಾರಾಟ ಮಾಡುತ್ತಿದ್ದೇನೆ. ಆದ್ದರಿಂದ ಜಿಎಸ್‌ಬಿ ಬ್ರ್ಯಾಂಡ್‌ಗಾಗಿ ಸಮ್ಮಾನಿತಗೊಂಡಿರುವುದು ಅಭಿಮಾನ ಎನಿಸುತ್ತಿದೆ. ಸಂಸ್ಕೃತಿಯಿಂದ ಸಂಸ್ಕಾರಯುತ ಜೀವನ ಸಾಧ್ಯ. ಸಾಂಸ್ಕೃತಿಕವಾಗಿ ಬೆಳೆದ ಗೌಡ ಸಾರಸ್ವತರು ಆಚಾರ ವಿಚಾರವನ್ನು ಎಂದಿಗೂ ಮರೆಯಬಾರದು ಎಂದರು.

ನಾಟಕಗಳಂತಹ ಕಾರ್ಯಕ್ರಮದಿಂದ ಒಗ್ಗೂಡುವ ಅವಕಾಶ ಲಭಿಸುತ್ತದೆ. ಇದರಿಂದ ನಮ್ಮ ಸಂಸ್ಕೃತಿ ಪಸರುತ್ತದೆ.  ಆದುದರಿಂದ ರಂಗಕಲಾ ಪೋಷಣೆಗೆ ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಸಮಾಜದ ಮಕ್ಕಳನ್ನು ಒಗ್ಗೂಡುವಂತೆ ಮಾಡಬೇಕು ಎಂದು ನ್ಯಾಯವಾದಿ ಎಂ. ವಿ. ಕಿಣಿ ಕರೆ ನೀಡಿದರು.

Advertisement

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿಯ ಕಾರ್ಯಾಧ್ಯಕ್ಷ ಗೋವಿಂದ ಎಸ್‌. ಭಟ್‌, ಜಿಎಸ್‌ಬಿ ಗಣೇಶೋತ್ಸವ ಮಂಡಲದ ಕಾರ್ಯಾಧ್ಯಕ್ಷ ಎನ್‌. ಎನ್‌. ಪಾಲ್‌, ನಾಗೇಶ್‌ ಘೋವಾRರ್‌, ಆರ್ಚನಾ ಭಟ್‌, ಸುಮಂಗಳ ಎಸ್‌. ಪೈ ಕೋಲಾಪುರ, ಅನುಪಮಾ ಶೆಣೈ, ವಿನಯಾ ಪೈ, ವಿಜಯಶ್ರೀ ಕಾಮತ್‌, ಪ್ರಭು, ಸೀಮಾ ಕಾಮತ್‌,  ಶೈಲಾ ಪೈ,  ವರ್ಷಾ ಪ್ರಭು, ವಾಮನ ನಾಯಕ್‌ ಬಾಲ್ಕೂರು, ಎನ್‌. ಎಸ್‌. ಕಾಮತ್‌ ಖಾರ್‌ದಾಂಡಾ, ವಿನಯ ರಾವ್‌ ಮತ್ತಿತರರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸತ್ಕರಿಸಲಾಯಿತು.

ಹಿರಿಯ ಕಲಾವಿದ ಫ್ರಾನ್ಸಿಸ್‌ ಫೆರ್ನಾಂಡಿಸ್‌ ಕಾಸ್ಸಿಯಾ, ಸಾಣೂರು ಮನೋಹರ್‌ ಕಾಮತ್‌, ಉದಯ ಪಡಿಯಾರ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಲಾ ಸಂಗಮದ ಕಾರ್ಯಾಧ್ಯಕ್ಷ ಉಲ್ಲಾಸ್‌ ಡಿ. ಕಾಮತ್‌ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ. ಅತಿಥಿಗಳನ್ನು  ಸ್ಮರಣಿಕೆ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಉಪ ಕಾರ್ಯಾಧ್ಯಕ್ಷ ಡಾ| ಚಂದ್ರಶೇಖರ್‌ ಎನ್‌. ಶೆಣೈ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ  ಕೊಂಕಣಿ ತ್ರಿವೇಣಿ ಕಲಾ ಸಂಗಮ್‌ ಕಲಾವಿದರಿಂದ  “ಉಣ್‌ ಉದ್ಕ ಘೊಟ್‌’  ನಾಟಕ ಪ್ರದರ್ಶನಗೊಂಡಿತು.

 ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next