Advertisement

ಕೊಂಕಣಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ 

10:29 AM Jan 04, 2018 | Team Udayavani |

ಮಹಾನಗರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಯೋಜಿಸುವ ಕೊಂಕಣಿ ಮಾನ್ಯತಾ ದಿವಸದ ಬೆಳ್ಳಿ
ಹಬ್ಬದ ಸರಣಿ ಕಾರ್ಯಕ್ರಮದ ಅಂಗವಾಗಿ ಕೊಡಿಯಾಲ ಖಬರ ಕೊಂಕಣಿ ಪಾಕ್ಷಿಕ ಪತ್ರಿಕೆಯ ದಶಮಾನೋತ್ಸವದ ಸಂದರ್ಭ ಪತ್ರಿಕೆಯ ಸಹಯೋಗದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಲಯನ್ಸ್‌ ಸೇವಾ ಮಂದಿರದಲ್ಲಿ ಆಯೋಜಿಸಲಾಯಿತು.

Advertisement

ಸಮ್ಮೇಳನವನ್ನು ಉದ್ಘಾಟಿಸಿದ ಲೆಕ್ಕ ಪರಿಶೋಧಕ ಹಾಗೂ ಸಮಾಜ ಸೇವಕ ನಂದಗೋಪಾಲ ಶೆಣೈ, ಕೊಂಕಣಿ ಭಾಷೆಯಲ್ಲಿ 10 ವರ್ಷ ಪತ್ರಿಕೆಯನ್ನು ಪ್ರಕಟಿಸಿರುವುದು ಸಾಧನೆಯೇ ಸರಿ. ಇಂದು ಕೊಡಿಯಾಲ ಖಬರ ಕೇವಲ ಒಂದು ಪತ್ರಿಕೆಯಾಗಿ ಉಳಿದಿಲ್ಲ. ಅದು ಒಂದು ಸಂಸ್ಥೆಯಾಗಿ ಬೆಳೆದಿದೆ. ನಾವೆಲ್ಲರೂ ಅದರೊಂದಿಗೆ ಸೇರಿ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಆರ್‌.ಪಿ. ನಾಯ್ಕ, ಮಂಗಳೂರು ವಿಶ್ವವಿದ್ಯಾಲಯದಡಿ ಈಗಾಗಲೇ ಕೊಂಕಣಿ ಎಂ.ಎ. ವಿಷಯ ನಡೆಯುತ್ತಿದೆ. ಧಾರವಾಡ ಹಾಗೂ ಹಂಪಿ ವಿಶ್ವವಿದ್ಯಾಲಯಗಳ ಸಹಯೋಗದಿಂದ ಇನ್ನಷ್ಟು ಸಂಶೋಧನಾ ಕಾರ್ಯ ಕ್ರಮಗಳನ್ನು ನಡೆಸುವ ಯೋಜನೆಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಡೆಮಿಯ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಉಡುಪಿಯ ಸಮಾಜ ಸೇವಕ ವಿಶ್ವನಾಥ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಲೇಖಕ ಡಾ| ಕೆ. ಮೋಹನ ಪೈ, ಆನೀ ಕೊಂಕಣಿ ಸಂಶೋಧಕ ಪೌಲ ಮೋರಾಸ್‌, ಅಕಾಡೆಮಿಯ
ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಅಕಾಡೆಮಿಯ ರಿಜಿಸ್ಟ್ರಾರ್‌ ಡಾ| ಬಿ. ದೇವದಾಸ ಪೈ ಹಾಗೂ ಸಮಾಜ ಸೇವಕ
ಪ್ರಶಾಂತ ರಾವ್‌ ಉಪಸ್ಥಿತರಿದ್ದರು. ಉಪ ಸಂಪಾದಕಿ ವಿದ್ಯಾ ಬಾಳಿಗಾ ವಂದಿಸಿದರು. ರತ್ನಾಕರ ಕುಡ್ವ ಕಾರ್ಯಕ್ರಮ ನಿರೂಪಿಸಿದರು.

ಸ್ಮರಣಿಕೆ
ಸಮಾರೋಪದಲ್ಲಿ ಕೊಡಿಯಾಲ ಖಬರ ಪತ್ರಿಕೆಯ ಬ್ಹೊಂವಡಿ ಆಟಯತಾ ಅಂಕಣದ ಬರಹಗಾರ ಕೆ.ಸಿ. ಪ್ರಭು ಕಲಾಕಾರರಿಗೆ ಸ್ಮರಣಿಕೆ ನೀಡಿದರು. ಪತ್ರಿಕೆಯ ಜಾಹಿರಾತು ವಿಭಾಗದ ಸಂಚಾಲಕಿ ಜ್ಯೋತಿ ಶೆಣೈ, ವಿಘ್ನೇಶ 
ಬಾಳಿಗಾ, ಪ್ರವೀಣ ಕಾಮತ್‌, ಸುಮಾ ಪಂಡಿತ, ಸುರೇಶ ಶೆಣೈ ಸಹಕರಿಸಿದರು. ಅಕಾಡೆಮಿಯ ಸದಸ್ಯ ನಾಗೇಶ
ಅಣ್ವೇಕರ, ರಾಮ ಮೇಸ್ತ ಮತ್ತು ಲಕ್ಷ್ಮಣ ಪ್ರಭು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next