Advertisement

ರೋನ್‌ರೋಚ್‌ ಅವರಿಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ

02:25 AM Jul 11, 2017 | Team Udayavani |

ಬಿಕರ್ನಕಟ್ಟೆ: ಖ್ಯಾತ ಕೊಂಕಣಿ ಸಾಹಿತಿ ರೋನ್‌ ರೋಚ್‌ ಅವರಿಗೆ 2017ನೇ ಸಾಲಿನ ದಿ| ವಿಕ್ಟರ್‌ ರೊಡ್ರಿಗಸ್‌ ಆಂಜೆಲೊರ್‌ ಸ್ಮಾರಕ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ರವಿವಾರ ನಗರದ ಬಿಕರ್ನಕಟ್ಟೆ ಬಾಲ ಯೇಸು ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಮಂಗಳೂರು ಧರ್ಮಪ್ರಾಂತದ ಎಪಿಸ್ಕೋಪಲ್‌ ವಿಗಾರ್‌ ಕಾರ್ಮೆಲೈಟ್‌ ಧರ್ಮಗುರು ರೆ| ಡಾ| ಪಿಯುಸ್‌ ಡಿ’ಸೋಜಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ದಿವಂಗತ ವಿಕ್ಟರ್‌ ರೊಡ್ರಿಗಸ್‌ ಅವರ ಸೇವಾ ಮನೋಭಾವವನ್ನು ಕೊಂಡಾಡಿದ ಅವರು ಪ್ರಶಸ್ತಿ ವಿಜೇತ ರೋನ್‌ ರೋಚ್‌ ಅವರ ಕೊಂಕಣಿ ಸಾಹಿತ್ಯದ ಸೇವೆಯನ್ನು ಪ್ರಶಂಸಿಸಿ ಅಭಿನಂದಿಸಿದರು.

Advertisement

ಪ್ರಶಸ್ತಿಯು 10,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಫಲಪುಷ್ಪ, ಶಾಲು ಮತ್ತು ಸಮ್ಮಾನವನ್ನು ಒಳಗೊಂಡಿದೆ. ಮುಖ್ಯ ಅತಿಥಿ ಧರ್ಮಗುರು ರೆ| ಡಾ| ವಿಲ್ಫೆ†ಡ್‌ ರೊಡ್ರಿಗಸ್‌ ಅವರು ಕೊಂಕಣಿ ಪ್ರತಿಕೆ “ನಮಾನ್‌ ಬಾಳೊಕ್‌ ಜೆಜು’ 2001ರಲ್ಲಿ ಆರಂಭಿಸುವಾಗ ದಿವಂಗತ ವಿಕ್ಟರ್‌ ರೊಡ್ರಿಗಸ್‌ ಅವರು ನೀಡಿದ ಸಹಕಾರವನ್ನು ಸ್ಮರಿಸಿದರು. ಇನ್ನೋರ್ವ ಮುಖ್ಯ ಅತಿಥಿ ಖ್ಯಾತ ಕೊಂಕಣಿ ಸಾಹಿತಿ ನವೀನ್‌ ಕುಲಶೇಖರ್‌ ಅವರು ಕೊಂಕಣಿ ಭಾಷೆ, ಸಾಹಿತ್ಯವನ್ನು ಅಳಿಯದೆ ಉಳಿಸಲು ಹೆಚ್ಚೆಚ್ಚು ಜನರು ಪತ್ರಿಕೆಗಳನ್ನು ಖರೀದಿಸಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು. 

ಪ್ರಶಸ್ತಿ ಸ್ವೀಕರಿಸಿದ ರೋನ್‌ ರೋಚ್‌ ಅವರ ಪರವಾಗಿ ಅವರ ಪತ್ನಿ ಗ್ರೇಸ್‌ ಮಾರಿಯಾ ಅವರು ತಮ್ಮ ಪತಿಯ ಕೊಂಕಣಿ ಸಾಹಿತ್ಯ ಸೇವೆಯನ್ನು ಪರಿಗಣಿಸಿ ನೀಡಿದ ಪ್ರಶಸ್ತಿಗೋಸ್ಕರ ಕೃತಜ್ಞತೆ ಸಲ್ಲಿಸಿದರು. ಸಮನ್ವಯ ಸಂಸ್ಥೆಯ ನಿರ್ದೇಶಕ ರೆ| ಡಾ| ರೊನಾಲ್ಡ್‌ ಕುಟಿನ್ಹೊ ಅವರು ಸ್ವಾಗತಿಸಿ, ಸೆಲಿನ್‌ ರೊಡ್ರಿಗಸ್‌ ವಂದಿಸಿದರು. ರೆ| ಡಾ| ಪಿಯುಸ್‌ ಪಿಂಟೊ ಅವರು ಪ್ರಶಸ್ತಿ ವಿಜೇತರನ್ನು ಪರಿಚಯಿಸಿ, ಡೊಲ್ಫಿ ಲೋಬೊ ಕಾಸ್ಸಿಯಾ ನಿರೂಪಿಸಿದರು. ದಿ| ವಿಕ್ಟರ್‌ ರೊಡ್ರಿಗಸ್‌ ಅವರ ಜೀವನಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಹಲವಾರು ಕೊಂಕಣಿ ಸಾಹಿತಿಗಳು ಮತ್ತು ಪ್ರಶಸ್ತಿ ವಿಜೇತರ ಬಂಧು ಮಿತ್ರರು ಹಾಗೂ ದಿವಂಗತ ವಿಕ್ಟರ್‌ರವರ ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next