Advertisement

ಕೊಂಕಣಿ ಭಾಷಿಕರ ಅಧ್ಯಯನ, ದಾಖಲೀಕರಣ: ಪ್ರೊ|ಭೈರಪ್ಪ

08:20 AM Jun 04, 2018 | Team Udayavani |

ಮಂಗಳೂರು: ಕೊಂಕಣಿ ಅಧ್ಯಯನ ಪೀಠವು “ಕೊಂಕಣಿ ಭಾಷಿಕರ ಚಾರಿತ್ರಿಕ ವಲಸೆ ಮತ್ತು ನೆಲೆಗಳು, ಚಾರಿತ್ರಿಕ ಅಧ್ಯಯನ ಮತ್ತು ದಾಖಲೀಕರಣದೊಂದಿಗೆ ಡಿ.ಎನ್‌.ಎ.ಯನ್ನು ಕೂಡ ಪರಿಶೀಲನೆ ಮಾಡುವ ಕಾರ್ಯ ಹಮ್ಮಿಕೊಂಡಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ. ಭೈರಪ್ಪ ಹೇಳಿದರು.  ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ವಿದ್ಯಾರ್ಥಿಗಳು ತಮಗೆ ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಮಾತನಾಡಿದರು.

Advertisement

ಮುಖ್ಯ ಅತಿಥಿಯಾಗಿದ್ದ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಮಾತನಾಡಿ, ಮಂಗಳೂರು ವಿ.ವಿ.ಯಲ್ಲಿ ನೂತನವಾಗಿ ಸ್ಥಾಪಿತವಾದ ಕೊಂಕಣಿ ಅಧ್ಯಯನ ಪೀಠದ ಉದ್ದೇಶಗಳು ಸಾರ್ಥಕವಾಗಿ ಈಡೇರಲು ಪ್ರೊ| ಭೈರಪ್ಪ ಅವರ ಅನುಭವಪೂರ್ಣ ಮಾರ್ಗದರ್ಶನ ಪೂರಕವಾಗಿ ಪರಿಣಮಿಸಿತು. ಇದರಿಂದಾಗಿ ಕೊಂಕಣಿ ಭಾಷಿಕ ವಿದ್ಯಾರ್ಥಿಗಳು ಕೊಂಕಣಿ ಎಂ.ಎ. ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಸಾಧ್ಯವಾಗಿದೆ. ಅಲ್ಲದೆ ವಿಶ್ವ ಕೊಂಕಣಿ ಕೇಂದ್ರದ “ಕೊಂಕಣಿಗಳ ವಲಸೆ ಮತ್ತು ನೆಲೆಗಳ ಚಾರಿತ್ರಿಕ ಅಧ್ಯಯನ ಹಾಗೂ ದಾಖಲೀಕರಣ ಯೋಜನೆಯನ್ನೂ ಅಧ್ಯಯನ ಪೀಠದ ಸಹಕಾರದಿಂದ ಕಾರ್ಯರೂಪಕ್ಕಿಳಿಸಲು ಸುಲಭವಾಯಿತು’ ಎಂದರು.

ಮಂಗಳೂರು ವಿವಿ ಕುಲಸಚಿವ ಪ್ರೊ| ಬಿ.ಎಸ್‌. ನಾಗೇಂದ್ರ ಪ್ರಕಾಶ, ದುಬಾೖಯ ಉದ್ಯಮಿ ಗೋಕುಲನಾಥ ಪ್ರಭು, ಕೊಂಕಣಿ ಅಧ್ಯಯನ ಪೀಠದ ಎಂ.ಎ. ವಿದ್ಯಾರ್ಥಿಗಳಾದ ಫಾ| ಸಾಂತುಮಾಯೋರ್‌, ಪ್ರೇಮ್‌  ಮೊರಾಸ್‌, ಬಿಂದು ಮಾಧವ ಶೆಣೈ, ಗುರುಮೂರ್ತಿ, ಶ್ವೇತಾ, ಫ್ಲೆàವಿ, ವಿದ್ಯಾ ಬಾಳಿಗಾ ಮತ್ತು  ಆಕಾಶ ವಾಣಿಯ ಕನ್ಸೆಪಾr ಫೆರ್ನಾಂಡಿಸ್‌ ಉಪಸ್ಥಿತರಿದ್ದರು ಕೊಂಕಣಿ ಅಧ್ಯಯನ ಪೀಠದ ಸಂಚಾಲಕ ಡಾ| ಜಯವಂತ ನಾಯಕ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next