Advertisement

Veerappa Moily; ಪದ್ಮರಾಜ್‌ ಮೂಲಕ ದ.ಕ. ಜಿಲ್ಲೆಯ ಅಭಿವೃದ್ಧಿ, ಹಿಂದುಳಿದ ವರ್ಗಕ್ಕೆ ಶಕ್ತಿ

12:19 AM Apr 22, 2024 | Team Udayavani |

ಉಳ್ಳಾಲ: ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಇತಿಹಾಸ ಮರುಕಳಿಸಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿರುವ ಪದ್ಮರಾಜ್‌ ಆರ್‌. ಪೂಜಾರಿ ಅವರ ಗೆಲುವು ನಿಶ್ಚಿತ. ಅವರ ಗೆಲುವಿನೊಂದಿಗೆ ದ.ಕ. ಜಿಲ್ಲೆಯ ಅಭಿವೃದ್ಧಿ ಹಾಗೂ ಹಿಂದುಳಿದ ವರ್ಗದ ಜನರಿಗೆ ಶ್ರೇಯಸ್ಸು ಲಭ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

Advertisement

ಮಂಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಪರವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಲ್ಯ ನಾರಾಯಣಗುರು ಮಂದಿರದಿಂದ ಉಳ್ಳಾಲ ಕೋಡಿವರೆಗೆ ನಡೆದ ರೋಡ್‌ಶೋ ಸಂದರ್ಭ ಬೃಹತ್‌ ವಾಹನ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಬಾರಿ ಕಾಂಗ್ರೆಸ್‌ ಸುಶಿಕ್ಷಿತ, ಸಾಮಾಜಿಕ ನ್ಯಾಯ ನೀಡುವ ಕಾನೂನು ಪದವೀಧರರಾಗಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ದ.ಕ. ಜಿಲ್ಲೆಯ ಬಿಜೆಪಿಯ ಮೂರು ದಶಕಗಳ ಆಡಳಿತ ಈ ಬಾರಿ ಕೊನೆಗೊಳ್ಳಲಿದೆ ಮತ್ತು ದೇಶದಲ್ಲಿಯೂ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದರು.

ಗ್ಯಾರಂಟಿಯೇ ಶ್ರೀರಕ್ಷೆ: ಪದ್ಮರಾಜ್‌
ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಮಾತನಾಡಿ, ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ಕಾಂಗ್ರೆಸ್‌ ಆಡಳಿತದ ಕಾಲದಲ್ಲಿದ್ದ ತುಳುನಾಡಿನ ವೈಭವ ಈ ಮೂಲಕ ಮರಳಿ ಬರಲಿದೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ, ಕೇಂದ್ರ ಹಣಕಾಸು ಸಚಿವರಾಗಿ ಬಡವರ ಕಣ್ಣೊರೆಸುವ ಕಾರ್ಯ ಮಾಡಿದ್ದ ಜನಾರ್ದನ ಪೂಜಾರಿ ಅವರ ಆದರ್ಶವನ್ನಿಟ್ಟುಕೊಂಡು ಸಮಾಜ ದಲ್ಲಿರುವ ಬಡಜನರ ಕಣ್ಣೊರೆಸುವ ಕಾರ್ಯ ನಡೆಸುತ್ತೇನೆ ಎಂದರು.

ಪದ್ಮರಾಜ್‌ಗೆ ಗೆಲುವು: ನಿಕೇತ್‌
ಕೆಪಿಸಿಸಿ ವಕ್ತಾರ ನಿಕೇತ್‌ರಾಜ್‌ ಮೌರ್ಯ ಮಾತನಾಡಿ, ಈ ಬಾರಿ ಕೇಸರಿ ಶಾಲು ಮತ್ತು ಹಳದಿ ಶಾಲು ಹಾಕಿದವರು ಪದ್ಮರಾಜ್‌ ಜತೆಗಿದ್ದಾರೆ. ಈ ನಿಟ್ಟಿನಲ್ಲಿ ಲಕ್ಷಾಂತರ ಮತಗಳ ಅಂತರದಲ್ಲಿ ಪದ್ಮರಾಜ್‌ ಜಯಶಾಲಿಯಾಗಲಿದ್ದಾರೆ. ಶಿಕ್ಷಣ, ಆರೋಗ್ಯ ನಮ್ಮ ಉಸಿರಾಗಿದ್ದು, ತುಳು ಭಾಷೆಗೋಸ್ಕರ ಪದ್ಮರಾಜ್‌ ಸಂಸತ್ತಿನಲ್ಲಿ ಧ್ವನಿಯೆತ್ತಲಿ¨ªಾರೆ ಎಂದರು.

Advertisement

ಸಿನೆಮಾ ನಟಿ ಕಾವ್ಯಾ ಶಾ, ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ರಾಜೀವ್‌ ಗಾಂಧಿ ವಿ.ವಿ. ಸಿಂಡಿಕೇಟ್‌ ಸದಸ್ಯ ಯು.ಟಿ. ಇಫ್ತಿಕರ್‌ ಫ‌ರೀದ್‌, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಶಾಲೆಟ್‌ ಪಿಂಟೋ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಶೆಟ್ಟಿ ಬೋಳಾÂರು, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೃಪಾ ಆಳ್ವಾ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಕಾಲದಲ್ಲಿ ಅಭಿವೃದ್ಧಿ, ಬಿಜೆಪಿಯಿಂದ ಭಾಷಣ ಮಾತ್ರ
ದ.ಕ. ಜಿಲ್ಲೆಯ ಜನರು ಈ ಬಾರಿ ಬದಲಾವಣೆ ನಿರೀಕ್ಷಿಸುತ್ತಿದ್ದಾರೆ. 33 ವರ್ಷದ ಹಿಂದೆ ಜಿಲ್ಲೆಯಲ್ಲಿ ಆದ ಯೋಜನೆಗಳೇ ಈಗ ನೆನಪಿನಲ್ಲಿವೆ. ಕಾಂಗ್ರೆಸ್‌ ಸಂಸದರು ಕೊಟ್ಟಂತಹ ಯೋಜನೆಗಳು, ಮಂಗಳೂರು ವಿಮಾನ ನಿಲ್ದಾಣ, ಎಂಆರ್‌ ಪಿಎಲ್ , ಎಂಸಿಎಫ್, ಕೆಐಒಸಿಎಲ್ , ಎನ್‌ಎಂಪಿಟಿ, ಎನ್‌ ಐಟಿಕೆ ಸಹಿತ ವಿವಿಧ ಯೋಜನೆಗಳು ಕಾಂಗ್ರೆಸ್‌ ಸಂಸದರು ಇದ್ದ ಕಾಲದಲ್ಲಿ ನಡೆದದ್ದಾಗಿದೆ. 1991ರಿಂದ ಬಿಜೆಪಿ ಆಡಳಿತದಲ್ಲಿ ಇಂತಹ ಯಾವುದಾದರು ಒಂದು ಯೋಜನೆಯನ್ನು ಮಾಡಿದೆ ಎಂದು ಹೇಳುವ ಧೈರ್ಯ ಮಾಡಲಿ ಎಂದು ಪದ್ಮರಾಜ್‌ ಅರ್‌. ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next