Advertisement

ನಾಲ್ಕು ರಾಜ್ಯಗಳಲ್ಲಿ ಕೊಂಕಣಿ ಭಾಷೆಯ ಪ್ರಭಾವವಿದೆ : ಗೋವಾ ರಾಜ್ಯಪಾಲ ಪಿಳ್ಳೆ

05:13 PM Aug 26, 2022 | Team Udayavani |

ಪಣಜಿ: ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು ಮತ್ತು ಕೊಂಕಣಿ ಭಾಷೆಯ ಪ್ರಚಾರಕ್ಕೆ ಗರಿಷ್ಠ ಪ್ರಯತ್ನ ಮಾಡುವುದಾಗಿ ರಾಜ್ಯಪಾಲರಾದ ಪಿ.ಎಸ್.ಶ್ರೀಧರನ್ ಪಿಳ್ಳೆ  ಹೇಳಿದರು. ದೇಶದ ನಾಲ್ಕು ರಾಜ್ಯಗಳಲ್ಲಿ ಕೊಂಕಣಿ ಭಾಷೆಯ ಪ್ರಭಾವವಿದೆ. ಕೊಂಕಣಿ ಗೋವಾದ ಮಾತೃಭಾಷೆ. ಆರು ತಿಂಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುತ್ತೇನೆ ಎಂದು ರಾಜ್ಯಪಾಲ ಶ್ರೀಧರನ್ ಪಿಳ್ಳೆ ಹೇಳಿದರು.

Advertisement

ವಾಸ್ಕೊ ಮುರಗಾಂವ ತಾಲೂಕಿನ ಏಳು ಪಂಚಾಯಿತಿಗಳ ಅಧ್ಯಕ್ಷರು ಹಾಗೂ  ಸದಸ್ಯರ ಸಭೆಯಲ್ಲಿ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳೆ ಪಾಲ್ಗೊಂಡರು. ಪ್ರಜಾಪ್ರಭುತ್ವದಲ್ಲಿ ಜನರಿಂದ ಚುನಾಯಿತರಾದವರು ಜನಪ್ರತಿನಿಧಿಗಳು ಮತ್ತು ಜನರೇ ಸರ್ವಶ್ರೇಷ್ಠರು. ನಾವು ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿದ್ದೇವೆ. ಸಂವಿಧಾನದಲ್ಲಿ ಜನರೇ ಸರ್ವಶ್ರೇಷ್ಠರು. ಮುರಗಾಂವ ತಾಲೂಕಿನ ಎಲ್ಲ ಏಳು ಪಂಚಾಯಿತಿಗಳ ಚುನಾಯಿತ ಪಂಚಾಯಿತಿ ಸದಸ್ಯರು ಸದಾ ಜನಸೇವೆಗೆ ಸಿದ್ಧರಾಗಿರಬೇಕು ಹಾಗೂ ಜನರ ಕೊಡುಗೆಯನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಜನರ ಸೇವೆ ಮಾಡುತ್ತಾ ಹಳ್ಳಿಯ ಸೊಬಗನ್ನು ಕಾಪಾಡಿ ಎಂದು ಈ ಸಂದರ್ಭದಲ್ಲಿ ರಾಜ್ಯಪಾಲರು ಸಲಹೆ ನೀಡಿದರು. ನಾವು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಾಗಿದ್ದು, ಸಮಾಜಕ್ಕಾಗಿ ದುಡಿಯಲು ನಮ್ಮನ್ನು ಮುಡಿಪಾಗಿಡಬೇಕು. ನಾವು ಜನರ ಸೇವಕರಾಗಿದ್ದು, ಮೊದಲು ಗ್ರಾಮದ ಜನರ ಸೇವೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕುಠಾಳಿ ಶಾಸಕ ಆಂಟೊನಿ ವಾಜ್, ಪಂಚಾಯಿತಿ ಸಚಿವ ಮಾವಿನ್ ಗುದಿನ್ಹೊ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next