ಮಂಗಳೂರು: ಈಗಾಗಲೇ ಟ್ರೈಲರ್‌ನಲ್ಲೇ ಗಮನ ಸೆಳೆದಿರುವ ಶ್ರೀ ಮಹಾಮಾಯಿ ಕ್ರಿಯೇಷನ್ಸ್ ರವರಿಂದ ತಯಾರಾಗಿರುವ ಚೊಚ್ಚಲ ಕೊಂಕಣಿ ಚಿತ್ರ ‘ಅಂತು’ ಆಕ್ಟೋಬರ್ 20 ರಂದು ತೆರೆ ಕಾಣುತ್ತಿದೆ.
ಕರೋಪಾಡಿ ಅಕ್ಷಯ್ ನಾಯಕ್ ಅವರು ಚಿತ್ರದ ಕಥೆ, ಚಿತ್ರಕಥೆ, ಛಾಯಾಗ್ರಹಣ, ನಿರ್ದೇಶನ, ಸಂಕಲನದ ಜೊತೆಗೆ ನಿರ್ಮಾಪಕನಾಗಿ ಜವಾಬ್ದಾರಿಯನ್ನೂ ಹೊತ್ತುಕೊಂಡು ವಿಶೇಷ ಶ್ರಮ ವಹಿಸಿ ಚಿತ್ರವನ್ನು ಸಿದ್ಧಪಡಿಸಿದ್ದಾರೆ.
ಒಂದು ಸುಂದರ ಸಂಸಾರದಲ್ಲಿ ಸಣ್ಣದಾಗಿ ಹೊಗೆಯಾಡುವ ಅಸಮಧಾನ, ಮನೆ ಯಜಮಾನನ ಅಸಹಾಯಕತೆ, ಹಿರಿಯ ಮಗಳ ತ್ಯಾಗದ ಕಥೆಯ ಜೊತೆ ಜೊತೆಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸುಂದರ ಚಿತ್ರಣವೇ ಅಂತು ಚಿತ್ರದ ಚೌಕಟ್ಟು.
ಮನಮೋಹಕ ಪರಿಸರದಲ್ಲಿ ಅಷ್ಟೇ ಮೋಹಕವಾಗಿ ಚಿತ್ರೀಕರಣಗೊಂಡಿರುವ ಈ ಅಂತು ಚಿತ್ರದ ಇನ್ನೊಂದು ವಿಶೇಷತೆ ಅಂದರೆ ಇದರಲ್ಲಿ ಅಭಿನಯಿಸಿರುವ ಪ್ರತೀಯೊಬ್ಬ ಕಲಾವಿದರೂ ಜಿಎಸ್ ಬಿ ಕೊಂಕಣಿ ಸಮುದಾಯದವರು. ಈ ಸಮುದಾಯದಲ್ಲಿರುವ ಕಲಾವಿದರನ್ನೆಲ್ಲ ಹೆಕ್ಕಿ ತೆಗೆದಿರುವ ಹಿರಿಮೆ ಅಂತು ಚಿತ್ರತಂಡದ್ದು.
ಚಿತ್ರದ ಭಾಷೆ ಕೊಂಕಣಿ ಆದರೂ ಪ್ರತೀಯೊಬ್ಬ ಸಿನಿಮಾ ಪ್ರೇಮಿಯೂ ನೋಡಬಹುದಾದ , ನೋಡಿಸಿಕೊಂಡೋಗುವ ಚಿತ್ರ ಅಂತು.
ಚಿತ್ರ ಶುಕ್ರವಾರ ದೀಪಾವಳಿಯ ಸುಸಂದರ್ಭದಲ್ಲಿ 12.30 ಕ್ಕೆ ಬಿಗ್ ಸಿನೆಮಾ ಮಂಗಳೂರಿನಲ್ಲಿ ತೆರೆ ಕಾಣಲಿದೆ.
ಕೊಂಕಣಿ ಭಾಷಿಗರು ಮತ್ತುಭಾಷಾಪ್ರೇಮಿಗಳು,ಮಿತ್ರರು ಹಾಗೂ ನಮ್ಮ ಹಿತೈಷಿಗಳು ಮತ್ತು ಚಿತ್ರ ಅಭಿಮಾನಿಗಳುತಾವುಗಳು ಕುಟುಂಬ ಸಮೇತರಾಗಿ ಬಂದು ನಮ್ಮ ಚಿತ್ರವನ್ನು ವೀಕ್ಷಿಸಿ ಚಿತ್ರ ತಂಡದವರನು ಹರಸಿ ಹಾರೈಸುವಿರೆಂಬ ಆಕಾಂಕ್ಷೆ ಕರೋಪಾಡಿ ಅಕ್ಷಯ್ ನಾಯಕ್ ಮತ್ತು ಚಿತ್ರತಂಡದ್ದು.