Advertisement
ಉ.ಕ. ಜಿಲ್ಲೆಯ ಆಯ್ದ ಹಳ್ಳಿಗಳಲ್ಲಿ ಕೊಂಕಣಿ ಭಾಷಾ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಮಾರೋಪವನ್ನು ದುಬಾೖಯಲ್ಲಿ ನಡೆಸಲಾಗುವುದು ಎಂದರು. ಕೊಂಕಣಿ ಸಂಗೀತ, ರಂಗಭೂಮಿಯ ಬಗ್ಗೆ ಸರ್ಟಿಫಿಕೆಟ್ ಕೋರ್ಸು ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಮಂಗಳೂರು ವಿ.ವಿ.ಯಲ್ಲಿ ಕೊಂಕಣಿ ಭಾಷೆ ಎಂ.ಎ. ತರಗತಿ ನಡೆಯುತ್ತಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸದೇ ಇದ್ದರೆ ಪಿಯುಸಿಯಲ್ಲಿ ಕೊಂಕಣಿ ಆರಂಭ ಸಾಧ್ಯ ವಾಗದು ಆದ್ದರಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಕೊಂಕಣಿ ಯನ್ನು ತೃತೀಯ ಭಾಷೆಯನ್ನಾಗಿ ಪ್ರೌಢಶಾಲೆಯಲ್ಲಿ ಕಲಿಯಬೇಕು ಎಂದು ಅವರು ಹೇಳಿದರು.
ಕೊಂಕಣಿಯ ಸಾಮಾಜಿಕ ವಿಚಾರಗಳನ್ನು ತಿಳಿಸುವ 100 ಪುಸ್ತಕಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಈಗಾಗಲೇ 70 ಕೃತಿಗಳು ಸಿದ್ಧವಾಗಿವೆ. ಇನ್ನೂ 30 ಕೃತಿಗಳ ರಚನೆಯಾಗುತ್ತಿದ್ದು ಸದ್ಯವೇ ಇವುಗಳನ್ನು ಪ್ರಕಟಿಸಲಾಗುವುದು. ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ಪ್ರಸಾರಕ್ಕೆ ಪ್ರಯತ್ನ ಸಾಗಿದೆ ಎಂದರು. ಅಕಾಡೆಮಿ ಸದಸ್ಯರಾದ ನಾಗೇಶ್ ಅಣೆಕರ್, ದಾಮೋದರ್ ಬಂಡಾರ್‌ಕರ್, ಸಂತೋಷ್ ಶೆಣೈ ಪತ್ರಿಕಾ ಗೋಷ್ಠಿಯಲ್ಲಿದ್ದರು.
Related Articles
ಕೊಂಕಣಿ ಭವನಕ್ಕೆ ಮಂಗಳೂರು ನಗರದಲ್ಲಿ ಗುರುತಿ ಸಲಾದ ಜಾಗವನ್ನು ಅಕಾಡೆಮಿಗೆ ನೀಡಲು ಸರಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ದಾನಿಗಳು ಜಾಗ ನೀಡಿದಲ್ಲಿ ಭವನ ನಿರ್ಮಿಸಲಾಗುವುದು. ಧಾರವಾಡ ವಿ.ವಿ.ಯೂ ಕೊಂಕಣಿ ಭವನ ನಿರ್ಮಿಸಲು ಉತ್ಸಾಹ ತೋರಿಸಿದೆ. ಉತ್ತರ ಕನ್ನಡದಲ್ಲಿಯೂ ಭವನಕ್ಕಾಗಿ ಜಾಗ ನೀಡಲು ದಾನಿಗಳು ಮುಂದೆ ಬಂದಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯಕ್ ಉತ್ತರಿಸಿದರು.
Advertisement