Advertisement
ಕೇಂದ್ರ ಸಚಿವ ಸಂಪುಟ ಪುನಾರಚನೆಯ ಅನಂತರ “ಕೊಂಗುನಾಡು’ ಪದದ ಬಗ್ಗೆ ಭಾರೀ ಊಹಾಪೋಹ ಎದ್ದಿದೆ. ಈ ಬಗ್ಗೆ ಕೇಂದ್ರ ತುಟಿ ಬಿಚ್ಚಿಲ್ಲ. ಆದರೆ ಕೇಂದ್ರದ ನೂತನ ಸಚಿವ, ತಮಿಳುನಾಡು ಮೂಲದ ಎಲ್. ಮುರುಗನ್ ತನ್ನ ಪರಿಚಯ ವಿವರದಲ್ಲಿ ತಾನು “ತಮಿಳುನಾಡಿನ ಕೊಂಗುನಾಡಿನಿಂದ ಬಂದವನು’ ಎಂದು ಉಲ್ಲೇಖೀಸಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಭಾಗದಲ್ಲಿ ಎಐಎಡಿಎಂಕೆ ಪ್ರಬಲವಾಗಿದೆ. 75 ವಿಧಾನಸಭಾ ಸ್ಥಾನಗಳಲ್ಲಿ ಎಐಎಡಿಎಂಕೆ 40ರಲ್ಲಿ ಗೆದ್ದಿದೆ. ಬಿಜೆಪಿ ಕೂಡ ಬಲಿಷ್ಠವಾಗಿದೆ. ತಮಿಳುನಾಡು ಬಿಜೆಪಿಯ ಅಧ್ಯಕ್ಷ ಕೆ. ಅಣ್ಣಾಮಲೈ ಇದೇ ಭಾಗದವರು. ಹೀಗಾಗಿ ಕೇಂದ್ರ ಸರಕಾರವು ಈ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಬಹುದು ಎಂದು ಸ್ಥಳೀಯ ಪತ್ರಿಕೆಯೊಂದು ವಿಶ್ಲೇಷಿಸಿದೆ. ಪುದುಚೇರಿ ಮಾದರಿ
ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ, ಪುದುಚೇರಿಯಲ್ಲಿ ಮಾತ್ರ ಬಿಜೆಪಿ ಸರಕಾರವಿದೆ. ಒಂದು ವೇಳೆ ತಮಿಳುನಾಡಿನಲ್ಲಿರುವ ಈ ಭಾಗವನ್ನು ಪ್ರತ್ಯೇಕಿಸಿದರೆ ಇಲ್ಲೂ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಬಹುದು ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.