Advertisement

ಫಿನ್ಲಂಡ್‌ ಕಾಂಗ್ರೆಸ್‌ ಘಟಕಕ್ಕೆ ಅರಕಲಗೂಡಿನ ಕೋಮಲ್‌ ಕುಮಾರ್‌ ಜವರಪ್ಪ ಅಧ್ಯಕ್ಷ

01:59 AM Jul 12, 2021 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷಕ್ಕೆ ದೇಶದಲ್ಲಿ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿರು ವಂತೆಯೇ, ಸಾಗರೋತ್ತರ ಘಟಕದ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

Advertisement

ಕಾಂಗ್ರೆಸ್‌ನ ಸಾಗರೋತ್ತರ ವಿಭಾ ಗದ ಮುಖ್ಯಸ್ಥರನ್ನಾಗಿ ಸ್ಯಾಮ್‌ ಪಿತ್ರೋಡಾರನ್ನು ನೇಮಿಸಲಾಗಿದೆ. ಈಗ ಫಿನ್ಲಂಡ್‌ ಘಟ ಕದ ಅಧ್ಯಕ್ಷರನ್ನಾಗಿ ಹಾಸನ ಜಿಲ್ಲೆಯ ಅರಕಲಗೂಡು ಮೂಲದ ವಿಜ್ಞಾನಿ ಡಾ. ಕೋಮಲ್‌ ಕುಮಾರ್‌ ಜವರಪ್ಪ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಮಾತನಾಡಿದ ಅವರು, ” ಭಾರತದಲ್ಲಿ ವಿಜ್ಞಾನ, ಆರೋಗ್ಯ ಕ್ಷೇತ್ರದ ಸಂಶೋಧನೆಗಳಿಗೆ ‌ ಅವಕಾಶ ಇಲ್ಲ. ಮತ್ತೆ ನನ್ನ ದೇಶಕ್ಕೆ ವಾಪಸಾಗಿ ಈ ಕ್ಷೇತ್ರಗಳಲ್ಲಿ ತೊಡ ಗಿಸಿಕೊಳ್ಳಲು ಮುಂದಾಗಿದ್ದೇನೆ. ಕಾಂಗ್ರೆಸ್‌ತಣ್ತೀಗಳು ನನ್ನನ್ನು ಆಕರ್ಷಿಸಿವೆ ಮತ್ತು ಪ್ರೇರಣೆಗೆ ಒಳಪಡಿಸಿವೆ’ ಎಂದು ಹೇಳಿದ್ದಾರೆ.

ನಾರ್ವೆಯಲ್ಲಿ ಕಾಂಗ್ರೆಸ್‌ ಘಟ ಕದ ಅಧ್ಯಕ್ಷರನ್ನಾಗಿ ಚಕ್ರ ಬಿಯರ್‌ ಬ್ರ್ಯಾಂಡ್‌ನ‌ ಗರಿಸೋಬರ್‌ ಸಿಂಗ್‌ ಗಿಲ್‌, ಇಟಲಿಗೆ ದಿಲಾºಗ್‌ ಚನ, ಸ್ವಿಟ್ಸರ್ಲೆಂಡ್‌ಗೆ ಜಾಯ್‌ ಕೊಚ್ಚು, ಸ್ವೀಡನ್‌ಗೆ ಸೋನಿಯಾ ಹೆಲ್ಡ್‌ಸ್ಟೆಡ್‌, ಆಸ್ಟ್ರಿಯಾಕ್ಕೆ ಸುನಿಲ್‌ ಕೋರಾ, ಬೆಲ್ಜಿಯಂಗೆ ಸುನಿಲ್‌ ಕೋರಾ, ಬೆಲ್ಜಿಯಂಗೆ ಸುಖ್‌ವೀನ್‌ ಪ್ರೀತ್‌ ಸಿಂಗ್‌, ಪೋಲಂಡ್‌ಗೆ ಅಮರ್‌ಜಿತ್‌ ಸಿಂಗ್‌ ಅವರನ್ನು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next