Advertisement

ʼThalaivar 170ʼ ಸಿನಿಮಾದ ಪ್ರಮುಖ ಪಾತ್ರಕ್ಕೆ ಆಯ್ಕೆಯಾದ ಖ್ಯಾತ ನಟಿ; ಇವರೇನಾ ನಾಯಕಿ?

01:45 PM Oct 02, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ 171ನೇ ಸಿನಿಮಾ ʼಜೈಲರ್‌ʼ ಬಿಗ್‌ ಹಿಟ್‌ ಬಳಿಕ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ʼತಲೈವಾʼ ಅಭಿಮಾನಿಗಳು ಸಿನಿಮಾದ ಬಗ್ಗೆ ದೊಡ್ಡಮಟ್ಟದಲ್ಲಿ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಅದಕ್ಕೆ ತಕ್ಕ ಸಿನಿಮಾದ ಕುರಿತು ಬರುತ್ತಿರುವ ಒಂದೊಂದೇ ಅಪ್ಡೇಟ್‌ ಗಳು ಕುತೂಹಲ ಹೆಚ್ಚಿಸುತ್ತಿದೆ.

Advertisement

‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ಅವರು ʼ ತಲೈವರ್ 170ʼ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿ ಬಹು ತಾರಾಂಗಣವಿರಲಿದೆ ಎನ್ನುವ ಸುದ್ದಿಯೊಂದು ಕಾಲಿವುಡ್‌ ನಲ್ಲಿ ಹಬ್ಬಿತ್ತು. ಲೈಕಾ ಪ್ರೊಡಕ್ಷನ್ಸ್ ಸಿನಿಮಾಕ್ಕೆ ಬಂಡವಾಳ ಹಾಕುತ್ತಿದ್ದು, ಅನಿರುದ್ಧ್ ರವಿಚಂದರ್ ಅವರು ಮ್ಯೂಸಿಕ್‌ ನೀಡಲಿದ್ದಾರೆ.

ಇದೀಗ ಸಿನಿಮಾದ ಕುರಿತು ಚಿತ್ರತಂಡ‌ ಮತ್ತೊಂದು ಅಪ್ಡೇಟ್ ನೀಡಿದೆ. ಸಿನಿಮಾದಲ್ಲಿ ದುಶಾರ ವಿಜಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಲೈಕಾ ಪ್ರೊಡಕ್ಷನ್ಸ್ ಸೋಮವಾರ(ಅ.2 ರಂದು) ಟ್ವೀಟ್‌ ಮಾಡಿ ಹೇಳಿದೆ. ಆದರೆ ಇವರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೋ ಅಥವಾ ಬೇರೆ ಪಾತ್ರದಲ್ಲೋ ಎನ್ನುವುದನ್ನು ಚಿತ್ರತಂಡ ಹೇಳಿಲ್ಲ.

ಇದನ್ನೂ ಓದಿ: ʼSky Forceʼ ಮೂಲಕ ಭಾರತದ ಮೊದಲ ವೈಮಾನಿಕ ದಾಳಿಯ ಕಥೆ ಹೇಳಲು ಹೊರಟ ಅಕ್ಷಯ್‌ ಕುಮಾರ್

ಯಾರು ಈ ದುಶಾರ ವಿಜಯನ್? : ದುಶಾರ ವಿಜಯನ್‌ ಅವರ ಪರಿಚಯ ಕಾಲಿವುಡ್‌ ಮಂದಿಗೆ ಹೊಸತಲ್ಲ. ದುಶಾರ 2019 ರಲ್ಲಿ ಬಂದ “ಬೋಧೈ ಯೇರಿ ಬುಧಿ ಮಾರಿ” ಎನ್ನುವ ಸಿನಿಮಾದ ಮೂಲಕ ಕಾಲಿವುಡ್‌ ಗೆ ಬಂದಿದ್ದರು. ಇದಲ್ಲದೇ ಪಾ.ರಂಜಿತ್  “ಸರ್ಪಟ್ಟ ಪರಂಬರೈ”ನಲ್ಲಿ ಮಾರಿಯಮ್ಮ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ʼನಚ್ಚತಿರಂ ನಗರಗಿರದುʼ, ʼಅನೀತಿʼ, ಮತ್ತು ʼಅನ್ಬುಲ್ಲ ಗಿಲ್ಲಿ” ಚಿತ್ರದಲ್ಲಿ ನಟಿಸಿದ್ದರು. ಧನುಷ್‌ ಅವರ 50ನೇ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Advertisement

ʼ ತಲೈವರ್ 170ʼ ಕುರಿತು: ಸೂಪರ್‌ ಸ್ಟಾರ್‌ ರಜಿನಿಕಾಂತ್ ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. “ಟಿಜೆ ಜ್ಞಾನವೇಲ್ ಅವರು ‘ತಲೈವರ್ 170’ ಸಿನಿಮಾಕ್ಕಾಗಿ ಇಂಡಸ್ಟ್ರಿಯ ಕೆಲ ಖ್ಯಾತ ಕಲಾವಿದರನ್ನು ಆಯ್ದುಕೊಳ್ಳಲಿದ್ದಾರೆ. ಇದು ವಿಶೇಷ ಸಿನಿಮಾವಾಗಿರಲಿದೆ. ಬಾಲಿವುಡ್ ‌ನಿಂದ ಅಮಿತಾಭ್ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂ ಸಿನಿಮಾರಂಗದಿಂದ ಫಾಹದ್ ಫಾಸಿಲ್ ಅವರು ಕಾಣಿಸೊಕೊಳ್ಳಲಿದ್ದು, ಟಾಲಿವುಡ್‌ ರಂಗದಿಂದ ರಾಣಾ ದಗ್ಗುಬಾಟಿ ಹಾಗೂ ಮಾಲಿವುಡ್ ನಟಿ ಮಂಜು ವಾರಿಯರ್ ಕೂಡ ‌ಸಿನಿಮಾದ‌ ಭಾಗವಾಗಲಿದ್ದಾರೆ ಎಂದು ಇತ್ತೀಚೆಗೆ ವರದಿಯೊಂದು ತಿಳಿಸಿತ್ತು.

ಇದಾದ ಬಳಿಕ ರಜಿನಿಕಾಂತ್‌ ಅವರು ಲೋಕೇಶ್‌ ಕನಕರಾಜ್‌ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next