Advertisement

ಕೊಲ್ಲೂರು: ಕಟ್ಟುನಿಟ್ಟಿನ ಕ್ರಮ

06:18 PM Mar 29, 2020 | Sriram |

ಕೊಲ್ಲೂರು: ಹೆಗ್ಡೆಹಕ್ಲು ಬಳಿ ಚೆಕ್ ಪೋಸ್ಟ್ ನಿರ್ಮಿಸಿರುವ ಪೊಲೀಸರು ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುತ್ತಾರೆ. ಆ ಭಾಗದ ನಿವಾಸಿಗಳು ಚೆಕ್‌ ಪೋಸ್ಟ್‌ ಬಳಿ ವಾಹನ ನಿಲ್ಲಿಸಿ ಯಾವುದೇ ವಸ್ತುಗಳ ಖರೀದಿಗೆ ತೆರಳಬೇಕಾಗಿದೆ. ವಿನಾ ಕಾರಣ ದ್ವಿಚಕ್ರ ವಾಹನಗಳಲ್ಲಿ ಪೇಟೆ ಸುತ್ತುವ ಯುವಕರಿಗೆ ಈ ಕಠಿನ ಕ್ರಮ ಇರಿಸುಮುರಿಸು ಉಂಟುಮಾಡಿದೆ.

Advertisement

ಬೇರೆ ಜಿಲ್ಲೆಗಳಿಂದ ಆಗಮಿಸುವ ತರಕಾರಿ ವಾಹನಗಳ ಹೊರತು ಇನ್ನಿತರ ಯಾವುದೇ ವಾಹನಗಳಿಗೆ ಪ್ರವೇಶ ನಿಷೇಧವಿರುತ್ತದೆ. ಯಾತ್ರಾರ್ಥಿಗಳಿಗೆ ನಿರ್ಬಂಧ ಹೇರಿರು ವುದರಿಂದ ಅನೇಕ ಮಂದಿ ಗಡಿ ಯಿಂದಲೇ ವಾಪಸಾ ಗಿರುತ್ತಾರೆ.

ಅಹರ್ನಿಶಿ ಜಾಗ್ರತರಾಗಿರುವ ಪೊಲೀಸ್‌ ಪಡೆ
ಕೊಲ್ಲೂರು,ಹಾಲ್ಕಲ್‌, ಜಡ್ಕಲ್‌, ಮುದೂರು, ವಂಡ್ಸೆ, ಚಿತ್ತೂರು, ಮಾರಣಕಟ್ಟೆ, ಇಡೂರು, ಹೊಸೂರು ಪರಿಸರದ ಎಲ್ಲ ಗ್ರಾಮಗಳಲ್ಲಿ ಕೋವಿಡ್-19 ವೈರಸ್‌ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊಲ್ಲೂರು ಪೊಲೀಸರು ವಂಡ್ಸೆಯ ದುರ್ಗಾ ಡಿಜೆ ಸೌಂಡ್ಸ್‌ ಹಾಗೂ ಮೇಲುಪೇಟೆ ಫ್ರೆಂಡ್ಸ್‌ ವಂಡ್ಸೆ ಇವರ ಸಹಕಾರದೊಡನೆ ಧ್ವನಿ ವರ್ಧಕದ ಮೂಲಕ ಕೇರಿ-ಕೇರಿಗಳಲ್ಲಿ ಗ್ರಾಮಸ್ಥರು ಮನೆಯಿಂದ ಹೊರಬರದಂತೆ ಮನವಿ ಮಾಡುವುದರ ಮೂಲಕ ಸಂದೇಶ ರವಾನಿಸಿದರು.

ಗ್ರಾಮೀಣ ಪ್ರದೇಶ ಸ್ಥಬ್ಧ
ಪೋಲೀಸರ ಕಟ್ಟುನಿಟ್ಟಾದ ಕ್ರಮದಿಂದಾಗಿ ನೆಂಪು,ನೂಜಾಡಿ, ಬಗ್ವಾಡಿ,ದೇವಲಕುಂದ,ಜಾಡಿ, ಕಟ್‌ ಬೆಲೂ¤ರು , ಆಸುಪಾಸಿನ ಗ್ರಾಮ ನಿವಾಸಿಗಳು ಕೂಡ ಲಾಕ್‌ ಡೌನ್‌ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next