ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಮಾ. 15ರಂದು ರಥೋತ್ಸವ ನಡೆಯಲಿದೆ.
400 ವರುಷಗಳ ಇತಿಹಾಸ ಹೊಂದಿರುವ ಹಳೆಯ ರಥವನ್ನು ಬದಲಾಯಿಸಿ, ದಾನಿಗಳಾದ ಉದ್ಯಮಿ ಸುನಿಲ್ ಶೆಟ್ಟಿಯವರು ಸೇವಾಕರ್ತರಾಗಿ ಖರ್ಚುವೆಚ್ಚ ಭರಿಸಿ ರಥಶಿಲ್ಪಿಗಳಿಂದ ನಿರ್ಮಿಸಲಾಗಿರುವ ನೂತನ ರಥದಲ್ಲಿ ಉತ್ಸವ ಮೂರ್ತಿಯನ್ನು ಒಯ್ಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು.
ರಥೋತ್ಸವದ ಸಂದರ್ಭ ನೂಕುನುಗ್ಗಲು ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಪರಿಸರ ಮಾಲಿನ್ಯವಾಗದಂತೆ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಪ್ರಭಾರ ಕಾರ್ಯನಿರ್ವಹಣಾಧಿ ಕಾರಿ ಹಾಗೂ ಅಪರ ಜಿಲ್ಲಾ ಧಿಕಾರಿಯಾಗಿರುವ ವೀಣಾ ಬಿ.ಎನ್. ತಿಳಿಸಿದ್ದಾರೆ.