Advertisement

ಕೊಲ್ಲೂರು: ಪರಿಸರದಲ್ಲಿ ದಾಖಲೆ ಮಳೆ

01:11 AM Aug 06, 2019 | Team Udayavani |

ಕೊಲ್ಲೂರು: ರವಿವಾರ ರಾತ್ರಿಯಿಂದ ಆರಂಭಗೊಂಡ ಮಳೆಯು ಸೋಮವಾರ ಬೆಳಗ್ಗಿನಿಂದ ಗುಡುಗು ಮಿಂಚು ಸಹಿತ ಗಾಳಿಯೊಡನೆ ಕೊಲ್ಲೂರು ಪರಿಸರದಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದು ಇಂದಿನ ಮಳೆಯು ಈ ಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

Advertisement

ಆ. 5 ರಂದು ಬೆಳಗ್ಗಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಆಗಮಿಸಿದ ನಾನಾ ಭಾಗದ ಭಕ್ತರು ಆಶ್ರಯಕ್ಕಾಗಿ ಅಂಗಡಿ ಮುಂಗಟ್ಟುಗಳನ್ನು ಅವಲಂಭಿಸಬೇಕಾಯಿತು.

ಕೆರಾಡಿ, ಆಜ್ರಿ, ಮುದೂರು ಪರಿಸರದಲ್ಲಿ ಭಾರೀ ಮಳೆ

ಜಡ್ಕಲ್ ಸಹಿತ ಮುದೂರು, ಆಜ್ರಿ, ಕೆರಾಡಿ, ಬೆಳ್ಳಾಲ, ಮೂಡಮುಂದು, ನೇರಳಕಟ್ಟೆ, ನೆಂಪು, ವಂಡ್ಸೆ ಪರಿಸರದಲ್ಲಿ ವರ್ಷಧಾರೆಯಾಗಿದೆ.

ಕೃಷಿ ಭೂಮಿ ಜಲಾವೃತ

Advertisement

ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ಪಶ್ಚಿಮ ಘಟ್ಟದ ತಪ್ಪಲಿನ ಬಹುತೇಕ ಕಡೆಗಳಲ್ಲಿನ ಕೃಷಿ ಭೂಮಿ ಸಂಪೂರ್ಣವಾಗಿ ಜಲಮಯವಾಗಿದೆ. ಹಿಂದೆಂದೂ ಕಂಡರಿಯದಷ್ಟು ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯು ಇದೇ ರೀತಿ ಮುಂದುವರಿದಲ್ಲಿ ಕೃಷಿ ನಾಶ ಭೀತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next