ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ. 25ರಂದು ಸೂರ್ಯಗ್ರಹಣದ ಪ್ರಯುಕ್ತ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಭೋಜನ ಪ್ರಸಾದವಿರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ. ಭಕ್ತರಿಗೆ ಅಂದು ರಾತ್ರಿ ಉಪಾಹಾರ ವ್ಯವಸ್ಥೆ ಏರ್ಪಡಿಸಲಾಗಿದೆ.
ಹರಿದು ಬಂದ ಭಕ್ತಸಾಗರ
ಅ.23ರ ರವಿವಾರ 15 ಸಾವಿರಕ್ಕೂ ಮಿಕ್ಕಿ ಭಕ್ತರು ಶ್ರೀದೇವಿಯ ದರ್ಶನಕ್ಕೆ ಅಗಮಿಸಿದ್ದಾರೆ. ದೇವರ ದರ್ಶನಕ್ಕೆ ನೂಕುನುಗ್ಗಲು ಆಗದಂತೆ ವಿಶೇಷ ಕ್ರಮ ವಹಿಸಲಾಗಿತ್ತು. ನವರಾತ್ರಿ ಉತ್ಸವದ ಅನಂತರ ಪ್ರತಿದಿನವೂ ಸಹಸ್ರಾರು ಭಕ್ತರು ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ.
ವಾರಾಂತ್ಯ ಮತ್ತು ದೀಪಾವಳಿ ರಜೆಯಾಗಿದ್ದರಿಂದ ಪ್ರಮುಖ ಪುಣ್ಯ ಕ್ಷೇತ್ರಗಳಾದ ಶ್ರೀಕೃಷ್ಣಮಠ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ, ಶ್ರೀಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ : ಪುರಾಣಗಳ ಸತ್ವ, ಬೆಳಕಿನ ಮಹತ್ವ ತಿಳಿಸುವ ಸಂಭ್ರಮದ ದೀಪಾವಳಿ