ಸಾಮಾನ್ಯವಾಗಿ ಅಕ್ಟೋಬರ್, ನವೆಂಬರ್‌ವರೆಗೂ ತುಂಬಿ ಹರಿಯುತ್ತಿರುವ ಅಗ್ನಿತೀರ್ಥ ನದಿ ಮಟ್ಟ ಇಳಿದಿರುವುದು ಗ್ರಾಮಸ್ಥರ ಅಚ್ಚರಿಕೆ ಕಾರಣವಾಗಿದೆ.ಕೊಡಚಾದ್ರಿಯ ತಪ್ಪಲಿನ ಕೊಲ್ಲೂರು ಸಹಿತ ಜಡ್ಕಲ್, ಮುದೂರು, ಕೆರಾಡಿ, ಬೆಳ್ಳಾಲ, ಮೂಡಮುಂದ, ಆಜ್ರಿ ಭಾಗಗಳಲ್ಲಿ ಡಿಸೆಂಬರ್‌ವರೆಗೂ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ ಈಗಲೇ ನದಿ-ತೊರೆಗಳಲ್ಲಿ ನೀರಿನ ಹರಿವು ತೀವ್ರ ಕುಸಿತವಾಗಿರುವುದು ಆತಂಕದ ವಾತಾವರಣ ನಿರ್ಮಿಸಿದೆ. ಸೌಪರ್ಣಿಕ ಹೊಳೆಯಲ್ಲೂ ನೀರಿನ ಮಟ್ಟ ಕುಸಿದಿದ್ದು ಸ್ನಾನಕ್ಕೆ ತೆರಳುವ ಮಂದಿ ಆಳದ ಅರಿವಿಲ್ಲದೇ ಮುಂದಕ್ಕೆ ತೆರಳಿದರೆ ಅಪಾಯವಾಗುವ ಭೀತಿ ಇದೆ.
Advertisement
ಜಲಕ್ಷಾಮ ಎದುರಾದೀತುಮಾವಿನಕಾರು ಹಾಗೂ ಕೊಲ್ಲೂರುಗಳಲ್ಲಿ ಅಕ್ಟೋಬರ್‌ನಲ್ಲಿ ಮಳೆಯ ಅಭಾವ ಕಂಡುಬಂದಲ್ಲಿ ಮುಂದಿನ ಮಾರ್ಚ್-ಮೇ ತಿಂಗಳಲ್ಲಿ ಈ ಭಾಗಗಳಲ್ಲಿ ಜಲಕ್ಷಾಮ ಎದುರಾದೀತು.
– ಜಯಪ್ರಕಾಶ ಶೆಟ್ಟಿ, ಮಾಜಿ ಅಧ್ಯಕ್ಷರು, ಕೊಲ್ಲೂರು ಗ್ರಾ.ಪಂ.