Advertisement

Kollegala 12 ಜಿಂಕೆ ಕೊಂಬು ಸಹಿತ ಇಬ್ಬರ ಬಂಧನ

10:58 PM Aug 23, 2023 | Team Udayavani |

ಕೊಳ್ಳೇಗಾಲ: ಅಕ್ರಮವಾಗಿ ಒಣಗಿದ ಜಿಂಕೆ ಕೊಂಬುಗಳನ್ನು ಬೈಕ್ ನಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬುಧವಾರ ತಾಲೂಕಿನ ಚೆನ್ನಲಿಂಗ್ ನ ಹಳ್ಳಿ ಬಸ್ ನಿಲ್ದಾಣದ ಬಳಿಬಂಧಿಸಿದ್ದಾರೆ.

Advertisement

ಹನೂರು ತಾಲ್ಲೂಕಿನ ಹುಣಸೆಪಾಳ್ಯ ಗ್ರಾಮದ ಈರಣ್ಣ(49) ಮತ್ತು ಆರ್ಯ.ಎಂ.(22) ಬಂಧಿತ ಆರೋಪಿಗಳು. ಇವರಿಂದ 12 ಕೊಂಬುಗಳು ಹಾಗೂ ಹೋಂಡಾ ಶೈನ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇವರುಗಳು ಬೈಕ್ ನಲ್ಲಿ ಅಕ್ರಮವಾಗಿ 12 ಜಿಂಕೆ ಕೊಂಬುಗಳನ್ನು ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡ ಅರಣ್ಯ ಸಂಚಾರಿ ದಳದ ಪಿಎಸ್ಐ ವಿಜಯರಾಜು ಹಾಗೂ ಸಿಬಂದಿಗಳು ಚೆನ್ನಾಲಿಂಗನಹಳ್ಳಿ ಗ್ರಾಮದ ಹೋಗುವ ಅಡ್ಡರಸ್ತೆಯಲ್ಲಿ ರುವ ಬಸ್ ನಿಲ್ದಾಣದಲ್ಲಿದಾಳಿ ನಡೆಸಿ ಆರೋಪಿಗಳನ್ನು ಜಿಂಕೆ ಕೊಂಬುಗಳ ಸಮೇತ ಬಂಧಿಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next