Advertisement

ಡಾ|ರಾಜ್‌ ತವರು ತಾಲೂಕಿನ ಟ್ಯಾಕೀಸ್‌ಗಳ ಸ್ಥಿತಿಗತಿ

01:24 PM Feb 08, 2021 | Team Udayavani |

ಕೊಳ್ಳೇಗಾಲ: ಹಲವು ದಶಕಗಳ ಕಾಲ ಮನರಂಜನೆ, ಕಲಾ ತಾಣಗಳಾಗಿ ಜನರಿಗೆ ಸಿನಿ ರಸದೌತಣ ಬಡಿಸಿ, ಗತವೈಭವ ಮೆರೆದಿದ್ದ ಚಿತ್ರಮಂದಿರಗಳು ಇತಿಹಾಸದ ಪುಟಕ್ಕೆ ಸೇರುತ್ತಿವೆ. ಪ್ರೇಕ್ಷಕರಿಲ್ಲದೇ ಕುಂಟುತ್ತಾ ಸೊರಗಿದ್ದ ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ನಲುಗಿ, ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ.

Advertisement

ವರನಟ ಡಾ|ರಾಜ್‌ಕುಮಾರ್‌ ತವರು ತಾಲೂಕು ಕೊಳ್ಳೇಗಾಲ ಪಟ್ಟಣದಲ್ಲಿ ಹಲವು ದಶಕಗಳ ಹಿಂದೆ ತಲೆ ಎತ್ತಿದ್ದ 5 ಚಿತ್ರಮಂದಿರಗಳ ಪೈಕಿ 3 ಮಂದಿರಗಳು ಸ್ಥಗಿತವಾಗಿವೆ. ನಷ್ಟ ಭರಿಸಲಾಗದೇ ವಿನಾಯಕ ಟ್ಯಾಕೀಸ್‌ ಇದೀಗ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿದೆ. ದಶಕಗಳ ಕಾಲ ಗತವೈಭವ ಮೆರೆದಿದ್ದ ಶೋಭಾ ಥಿಯೇಟರ್‌ ಸಂಪೂರ್ಣ ನೆಲಸಮ ಮಾಡಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಪಟ್ಟಣದಲ್ಲಿ ಮೊಟ್ಟಮೊದಲ ಬಾರಿಗೆ ಕೃಷ್ಣ ಚಿತ್ರ ಮಂದಿರ ನಿರ್ಮಾಣಗೊಂಡು ಚಿತ್ರ ಪ್ರದರ್ಶನ ವಾಗುತ್ತಿದ್ದಂತೆ ಕಲಾಭಿಮಾನಿಗಳಿಗೆ ಮತ್ತಷ್ಟು ಚಿತ್ರ ಉಣಬಡಿಸಲು ಶಾಂತಿ ಚಿತ್ರ ಮಂದಿರ, ಶೋಭಾ,ಶ್ರೀನಿವಾಸ ಚಿತ್ರ ಮಂದಿರ, ವಿನಾಯಕ ಚಿತ್ರ ಮಂದಿರಗಳು ತಲೆ ಎತ್ತಿದ್ದವು.

ಈ ಚಿತ್ರಮಂದಿಗಳಲ್ಲಿ ಪರಭಾಷೆ ಸೇರಿದಂತೆ ಸಹಸ್ರಾರು ಸಿನಿಮಗಳು ಪ್ರದರ್ಶನ ಕಂಡಿದ್ದವು. ಹಳ್ಳಿಗಳಿಂದ ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಕುಟುಂಬಗಳು ತಂಡೋಪತಂಡವಾಗಿ ಪಟ್ಟಣಕ್ಕೆ ಆಗಮಿಸಿ  ಸಿನಿಮಾ ವೀಕ್ಷಿಸಿ ಸಂಭ್ರಮಿಸುತ್ತಿದ್ದರು. ತಮ್ಮ ನೆಚ್ಚಿನ ಸ್ಟಾರ್‌ ಗಳ ಹೊಸ ಸಿನಿಮಾ ನೋಡಲು ಮುಗಿ ಬೀಳುತ್ತಿದ್ದರು. ಟಿಕೆಟ್‌ ಸಿಗದೇ ದುಪ್ಪಟ್ಟು, ನಾಲ್ಕಪಟ್ಟು ಹೆಚ್ಚು ಹಣ ನೀಡಿ ಬ್ಲಾಕ್‌ನಲ್ಲಿ ಟಿಕೆಟ್‌ ಪಡೆಯುತ್ತಿದ್ದರು. ಚಿತ್ರಮಂದಿರಗಳಿಗೆ ಶುಕ್ರವಾರ ಶುಭ ವಾರವಾಗಿತ್ತು. ಮೊದಲ ಶೋ ಪ್ರಯುಕ್ತ ಬಣ್ಣ ಬಣ್ಣದ ಕಾಗದ, ತಳಿರು ತೋರಣ ಗಳಿಂದ ಆಕರ್ಷಕವಾಗಿ ಸಿಂಗರಿಸಲಾಗುತ್ತಿತ್ತು. ಮೊಬೈಲ್‌, ಡಿಶ್‌ಗಳು, ಕೇಬಲ್‌ ಬಂದ ಬಳಿಕ ಚಿತ್ರಮಂದಿರಕ್ಕೆ ಆಗ ಮಿಸುವವರ ಸಂಖ್ಯೆ ಕ್ಷೀಣಿಸಿತ್ತು.

ಹೊಸ ಸಿನಿಮಾಗಳು ಹೆಚ್ಚೆಂದರೆ ಒಂದೆರಡು ವಾರಗಳ ಕಾಲ ಓಡುತ್ತಿದ್ದವು. ಮೊದಲೇ ತುಸು ನಷ್ಟ  ದಲ್ಲಿದ್ದ ಈ ಮಂದಿರಗಳು ಬರಸಿಡಿಲಿನಂತೆ ಎರಗಿ ಬಂದ ಕೊರೊನಾ ವೈರಸ್‌ನಿಂದ ಬರೋಬ್ಬರಿ 11 ತಿಂಗಳು ಸಂಪೂರ್ಣ ವಾಗಿ ಮುಚ್ಚಿದ್ದ ರಿಂದ ನಲುಗಿ ಹೋಗಿವೆ.

Advertisement

ವಾರಕ್ಕೆ ಲಕ್ಷಾಂತರ ರೂ. ವಹಿವಾಟು ನಡೆ ಸುತ್ತಿದ್ದ ಥಿಯೇಟರ್‌ಗಳು ತಮ್ಮ ನೌಕರರಿಗೆ ಸಂಬಳ ಕೊಡಲು ಆಗದಂತಹ ಸ್ಥಿತಿಗೆ ತಲುಪಿವೆ. ಹೀಗಾಗಿ ಅವು ಗಳು ತಮ್ಮ ರೂಪವನ್ನೇ ಕಳೆದುಕೊಂಡಿವೆ. ಐದು ಟ್ಯಾಕೀಸ್‌ಗಳ ಪೈಕಿ ಒಂದು ಸ್ಥಗಿತವಾಗಿದ್ದರೆ, ಮತ್ತೂಂದು ನೆಲಸಮ ಆಗಿದೆ. ಮಗ ದೊಂದು ಕಲ್ಯಾಣ ಮಂಟಪ ವಾಗಿದೆ. ಕೃಷ್ಣ ಹಾಗೂ ಶಾಂತಿ ಥಿಯೇಟರ್‌ಗಳು ಮಾತ್ರ ಸಿನಿಮಾ ಪ್ರದರ್ಶನಕ್ಕೆ ಉಳಿದುಕೊಂಡಿವೆ.

ಸಂಪೂರ್ಣ ನೆಲಸಮವಾದ ಶೋಭಾ ಥಿಯೇಟರ್‌ : ಶೋಭಾ ಚಿತ್ರಮಂದಿರವು ಕಲಾಭಿಮಾನಿಗಳಿಗೆ ಆಕರ್ಷಕ ಮನರಂಜನೆ ತಾಣವಾಗಿತ್ತು. ವರನಟ ಡಾ| ರಾಜ್‌ಕುಮಾರ್‌ ಅಭಿನಯದ ಯಾವುದೇ ಸಿನಿಮಾ ಕೂಡ ಈ ಚಿತ್ರಮಂದಿರದಲ್ಲಿ 100 ದಿನ ಪ್ರದರ್ಶನ ಕಾಣುತ್ತಿತ್ತು. ಹಲವು ನಟರ ಸಿನಿಮಾಗಳು 50 ದಿನ ಪೂರೈಸಿದ್ದವು.

ಮಾರ್ಚ್‌ನಲ್ಲಿ ಕೊರೊನಾ ಸೋಂಕು ಹರ ಡು ತ್ತಿ ದ್ದಂತೆ ಲಾಕ್‌ಡೌನ್‌ ಘೋಷಿಸಿದ್ದರಿಂದ ಈ ಚಿತ್ರ ಮಂದಿ ರಸಂಪೂರ್ಣ ಸ್ಥಗಿತ ಆಗಿತ್ತು. ಯಾವುದೇ ವಹಿವಾಟು ನಡೆಯದೇ ನಷ್ಟದಲ್ಲಿದ್ದ ಕಾರಣ ಶೋಭಾ ಚಿತ್ರ ಮಂದಿರವನ್ನು ಸಂಪೂರ್ಣ ನೆಲ ಸಮ ಮಾಡಲಾಗಿದೆ. ಈ ಖಾಲಿ ನಿವೇಶನದ ಮುಂಭಾಗ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಹಿಂಬದಿಯ ಸ್ಥಳವನ್ನು ಮನೆ ನಿರ್ಮಾಣಕ್ಕೆ ನಿವೇಶನಗಳನ್ನಾಗಿ ಮಾಡಲಾಗಿದೆ. ಹಲವು ವರ್ಷಗಳ ಕಾಲ ಗತವೈಭವ ಮೆರೆದಿದ್ದ ಶೋಭಾ ಮಂದಿರ ಇತಿಹಾಸದ ಪುಟ ಸೇರಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ ಶ್ರೀನಿವಾಸ ಟ್ಯಾಕೀಸ್‌ :  ಪಟ್ಟಣದಲ್ಲಿ ಬೃಹತ್‌ ಕಟ್ಟಡದಲ್ಲಿ ತಲೆ ಎತ್ತಿದ್ದ ಶ್ರೀನಿವಾಸ ಚಿತ್ರ ಮಂದಿರ ಸುಮಾರು 20 ವರ್ಷಗಳ ಕಾಲ ತಾಲೂಕಿನ ಜನರಿಗೆ ಸಿನಿ ರಸದೌತಣ ಬಡಿಸಿತ್ತು. ಖ್ಯಾತ ನಟರ ಸಿನಿಮಾಗಳು ಯಶಸ್ವಿಯಾಗಿ ಪ್ರದರ್ಶನ ಆಗಿದ್ದವು. ಕೊರೊನಾ ಹಿನ್ನೆಲೆಯಲ್ಲಿ 10 ತಿಂಗಳಿನಿಂದ ಈ ಮಂದಿರ ಬಂದ್‌ ಆಗಿತ್ತು. ಇದೀಗ ಪ್ರದರ್ಶನಕ್ಕೆ ಅವಕಾಶ ನೀಡಿದ್ದರೂ ಆಂತರಿಕ ಸಮಸ್ಯೆ ಎದುರಿಸುತ್ತಿರುವ ಈ ಶ್ರೀನಿವಾಸ ಚಿತ್ರಮಂದಿರ ಸ್ಥಗಿತವಾಗಿದೆ.

ಕಲ್ಯಾಣ ಮಂಟಪವಾದ ವಿನಾಯಕ ಟ್ಯಾಕೀಸ್‌ : ಪಟ್ಟಣದ ಹೊರ ವಲಯದಲ್ಲಿದ್ದ ವಿನಾಯಕ ಚಿತ್ರ ಮಂದಿರಕ್ಕೆ ಚಿತ್ರ ವಿತರಕರು ಸರಿಯಾದ ಚಿತ್ರಗಳನ್ನು ನೀಡದೆ ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಹೊಸ ಚಿತ್ರ ಪ್ರದರ್ಶನವಾಗದೆ ನಷ್ಟಕ್ಕೆ ಒಳಗಾಗುತ್ತಿತ್ತು. ಇದರಿಂದ ಬೇಸತ್ತ ಚಿತ್ರ ಮಂದಿರದ ಮಾಲೀಕರು  ವಿದ್ಯುತ್‌ ಬಿಲ್‌ ಮತ್ತು ನೌಕರರ ಸಂಬಳವನ್ನು ನೀಡಲಾಗದೇ ಅಸಹಾಯಕರಾಗಿದ್ದರು. ನಿರ್ವಹಣೆ ಮಾಡಲಾಗದೇ ಬೇರೆ ದಾರಿಯಿಲ್ಲದೇ ಈ ಚಿತ್ರ ಮಂದಿರವನ್ನು ಕಲ್ಯಾಣ ಮಂಟಪವನ್ನಾಗಿ

ಮಾರ್ಪಡಿಸಲಾಗಿದೆ. ಕಲಾ ರಸಿಕರನ್ನು ರಂಜಿಸಿದ್ದ ಈ ವಿನಾಯಕ ಚಿತ್ರಮಂದಿರ ಇದೀಗ ಭ್ರಮ ರಾಂಬ ಕಲ್ಯಾಣ ಮಂಟಪ ಆಗಿದೆ!.

ಸಾರ್ವಜನಿಕರಿಗೆ ಸಿನಿಮಾ ಪ್ರದರ್ಶಿಸಲು ಪಟ್ಟಣದ ಹೊರವಲಯದಲ್ಲಿ ವಿನಾಯಕ ಚಿತ್ರಮಂದಿರ ನಿರ್ಮಿಸಲಾಗಿತ್ತು. ಆದರೆ, ಹೊರ ವಲಯದಲ್ಲಿರುವ ಚಿತ್ರಮಂದಿರಕ್ಕೆ ಜನರ ಸಂಖ್ಯೆ ಇಳಿಮುಖವಾ ಯಿತು. ನಂತರ ನಷ್ಟಕ್ಕೆ ತುತ್ತಾದ ಕಾರಣ ಚಿತ್ರ ಮಂದಿರವನ್ನು ನವೀಕರಣಗೊಳಿಸಿ  ಭ್ರಮರಾಂಬ ಕಲ್ಯಾಣ ಮಂಟಪವನ್ನಾಗಿ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ಎನ್ನುತ್ತಾರೆ  ಮಾಲಿಕ  ಸಿ.ವೀರಭದ್ರಸ್ವಾಮಿ.

 

Advertisement

Udayavani is now on Telegram. Click here to join our channel and stay updated with the latest news.

Next