ಶಿರಸಿ: ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಜಾಗೃತಿ ಮೂಡಬೇಕು. ಜಲ ಸಂರಕ್ಷಿಸಬೇಕು, ಪರಿಸರ ಸಂರಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಕೊಲ್ಕತ್ತಾದಿಂದ ವ್ಯಕ್ತಿಯೋರ್ವರು ಸೈಕಲ್ ಜಾಥಾ ಆರಂಭಿಸಿದ್ದಾರೆ.
ಕಳೆದ ನವೆಂಬರ್ ತಿಂಗಳಲ್ಲಿ ಹೊರಟ ಮೊಹಮ್ಮದ್ ಇರ್ಪಾನ್ ಸಿದ್ದಕಿ ಅವರು ಸೈಕಲ್ ಏರಿ ಕೋಲ್ಕತ್ತಾ, ಸಿಕ್ಕಿಂ, ಅಸ್ಸಾಂ, ಅರುಣಾಚಲ , ನಾಗಾಲ್ಯಾಂಡ್, ಬಿಹಾರ್, ಯುಪಿ , ಎಮ್ ಪಿ, ಪಂಜಾಬ್, ರಾಜಸ್ತಾನ, ಕೇದಾರನಾಥ, ಡೆಲ್ಲಿ, ಗುಜರಾತ್, ಮುಂಬೈ, ಗೋವಾ ಮುಗಿಸಿ ಈಗ ಕರ್ನಾಟಕ ಪ್ರವಾಸ ನಡೆಸುತ್ತಿದ್ದಾರೆ.
ಈಗಾಗಲೇ 16,700 ಕಿಲೋಮೀಟರ್ ದೂರ ಸೈಕಲ್ ತುಳಿದಿದ್ದಾರೆ.
ಸ್ವಚ್ಛ ಭಾರತಕ್ಕಾಗಿ ಮತ್ತು ದೇಶದ ಪ್ರತಿ ವ್ಯಕ್ತಿ ದೇಶದ ಬಗ್ಗೆ 5 ನಿಮಷವಾದರೂ ಆಲೋಚಿಸಬೇಕು. ಬದಲಾವಣೆ ನಮ್ಮಿಂದಲೇ ಸಾಧ್ಯ ಎಂದು ಜಾಗೃತಿಗಾಗಿ ಕಾರ್ಯ ಆರಂಭಿಸಿದ್ದಾಗಿ ಹೇಳುತ್ತಾರೆ.
ಇದನ್ನೂ ಓದಿ: Flying Kiss ; ಸಂಸತ್ ನಲ್ಲಿ ರಾಹುಲ್ ಗಾಂಧಿ ವರ್ತನೆ ಕುರಿತು ಆಕ್ರೋಶ